ಪುತ್ತೂರು:ಜ್ವರದಿಂದ ಬಳಲುತ್ತಿದ್ದ 13 ರ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ತ್ರೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ಚಿಕ್ಕಮುಡ್ನೂರು ಗ್ರಾಮದ ಆರಿಗೊ ನಿವಾಸಿ ರಿತೀಕ್ಷಾ(13 ವ) ಮೃತಪಟ್ವವರು.ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೆ ಸೆ.3ರಂದು ನಸುಕಿನ ಜಾವ ಅವರು ಕೊನೆಯುಸಿರೆಳೆದಿದ್ದಾರೆ. ಇವರು ಚಿಕ್ಕಮುಡ್ನೂರು ಶಾಲೆಯಲ್ಲಿ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿದ್ದರು. ರಿತೀಕ್ಷಾರವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಸೆ.೩ರಂದು ಶಾಲೆಯಲ್ಲಿ ನುಡಿನಮನ ಸಲ್ಲಿಸಿ ಶಾಲೆಗೆ ರಜೆ ನೀಡಲಾಗಿದೆ. ಮೃತರು ತಂದೆ ರಾಜೇಶ್, ತಾಯಿ ಶೋಭಾ, ಸಹೋದರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ರಿತೀಕ್ಷಾ ಸಾವಿಗೆ ನೂರಾರು ಮಂದಿ ಕಂಬನಿ ಮಿಡಿದಿದ್ದಾರೆ.