ಮಹಾರುದ್ರಜಪಾಭಿಷೇಕದ ಅಂಗವಾಗಿ 200 ಕ್ಕೂ ಮಿಕ್ಕಿ ಯತ್ವಿಜರಿಂದ ರುದ್ರಪಾರಾಯಣ
ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ, ಶ್ರೀ ದೇವರ ಸಾನಿಧ್ಯವೃಧ್ಧಿಗಾಗಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಶ್ರೀ ದೇವರಿಗೆ ಮಹಾರುದ್ರಜಪಾಭಿಷೇಕದ ಅಂಗವಾಗಿ 200 ಮಿಕ್ಕಿ ಯತ್ವಿಜರಿಂದ ರುದ್ರಪಾರಾಯಣ ನಡೆಯುತ್ತಿದ್ದು, ಕ್ಷೇತ್ರದಲ್ಲಿ ರುದ್ರ ಪಾರಾಯಣದ ಝೇಂಕಾರ ಮೊಳಗುತ್ತಿದೆ. ದೇವತಾ ಪ್ರಾರ್ಥನೆಯೊಂದಿಗೆ ಮಹಾ ಸಂಕಲ್ಪ, ಸಕಲ ವಿಘ್ನಗಳ ನಿವಾರಣೆಗಾಗಿ ಶ್ರೀ ಮಹಾಗಣಪತಿಹೋಮ, ರುದ್ರ ಪ್ರಿತ್ಯರ್ಥವಾಗಿ ರುದ್ರ ಹವನ, ಅಭಿಷೇಕ ಪ್ರಿಯನಾದ ಲಿಂಗರೂಪಿಯಾದ ಈಶ್ವರನಿಗೆ ಪಂಚಾಮೃತ ಅಭಿಷೇಕ, ಸೀಯಾಳಾಭಿಷೇಕ, ಜಲಾಭಿಷೇಕ, ಬಿಲ್ವಾರ್ಚನೆಗಳೊಂದಿಗೆ ವಿಶಿಷ್ಟವಾಗಿ ಶಿವಾರಾಧನೆಯು ನಡೆಯುತ್ತಿದೆ.