ಮಾಡನ್ನೂರು ನೂರುಲ್ ಹುದಾದಲ್ಲಿ ಮಜ್ಲಿಸುನ್ನೂರ್ ಚೇಲಕ್ಕಾಡ್ ಉಸ್ತಾದ್ ಅನುಸ್ಮರಣಾ ಸಮ್ಮೇಳನ-ಸಾವಿರಾರು ಮಂದಿ ಭಾಗಿ

0

ಚಿತ್ರ: ಯೂಸುಫ್ ರೆಂಜಲಾಡಿ

  • ಧಾರ್ಮಿಕ ಚೌಕಟ್ಟಿನಲ್ಲಿ ಜೀವನ ನಡೆಸಿದರೆ ಜೀವನ ಸಾರ್ಥಕ-ಫಝಲ್ ಶಿಹಾಬ್ ತಂಙಳ್

ಪುತ್ತೂರು: ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಧಾರ್ಮಿಕ ಚೌಕಟ್ಟಿನೊಳಗೆ ಜೀವನ ನಡೆಸಬೇಕು. ಪ್ರಾಮಾಣಿಕತೆ, ವಿನಯ, ಜ್ಞಾನ ಅಳವಡಿಸಿಕೊಂಡು ಜೀವಿಸುವಾಗಲೇ ತಾನೊಬ್ಬ ಪರಿಪೂರ್ಣ ಮನುಷ್ಯನಾಗಲು ಸಾಧ್ಯ. ಧಾರ್ಮಿಕತೆಯನ್ನು ಮೈಗೂಡಿಸಿಕೊಂಡು ಭಾರತದ ಸಂವಿಧಾನವನ್ನು ಗೌರವಿಸಿಕೊಂಡು ಜೀವನ ನಡೆಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕೆಂದು ಪಾಣಕ್ಕಾಡ್ ಅಸ್ಸಯ್ಯದ್ ಫಝಲ್ ಶಿಹಾಬ್ ತಂಙಳ್ ಮಲಪ್ಪುರಂ ಹೇಳಿದರು. ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ಆಶ್ರಯದಲ್ಲಿ ಶಹೀದಿಯಾ ನಗರದಲ್ಲಿ ಸೆ.೨ರಂದು ನಡೆದ ಮಜ್ಲಿಸುನ್ನೂರ್‌ಗೆ ನೇತೃತ್ವ ನೀಡಿ ಅವರು ಮಾತನಾಡಿದರು. ಲಕ್ಷಾಂತರ ಶಿಷ್ಯ ವೃಂದವನ್ನು ಹೊಂದಿದ ಶೈಖುನಾ ಚೇಲಕ್ಕಾಡ್ ಉಸ್ತಾದ್‌ರವರ ಅಗಲುವಿಕೆ ಈ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು ಅವರು ವಿನಯತೆ, ಸ್ನೇಹ ವಾತ್ಸಲ್ಯ, ಅನುಕಂಪ ಹಾಗೂ ಅಪಾರ ಜ್ಞಾನ ಹೊಂದಿದ ಶ್ರೇಷ್ಠ ಪಂಡಿತರಾಗಿದ್ದರು ಎಂದು ಹೇಳಿದರು.

ಮದ್ರಸ ತೆರೆದ ಪುಸ್ತಕವಿದ್ದಂತೆ:
ನಾಗರಿಕತೆಯನ್ನು ಬೋಧಿಸುವ ಮದ್ರಸ ತೆರೆದ ಪುಸ್ತಕವಾಗಿದ್ದು ವಿದ್ಯಾರ್ಥಿಗಳಿಗೆ ದೇಶಪ್ರೇಮ, ಪ್ರಾಮಾಣಿಕತೆಯಿಂದ ಕೂಡಿದ ಜೀವನ, ಉತ್ತಮ ಗುಣನಡತೆ, ಮಾತಾಪಿತರ ಗೌರವ, ಇವೆಲ್ಲವನ್ನು ಬೋಧಿಸುವ ಮದರಸವು ಕೆಲವರ ಕೆಂಗಣ್ಣಿಗೆ ಗುರಿಯಾಗಿರುವುದು ಈ ದೇಶದ ಅದಃಪತನದ ಮೊದಲನೇ ಹಂತ. ತೆರೆದ ಪುಸ್ತಕದಂತೆ ಇರುವ ಪಾರದರ್ಶಕವಾಗಿ ಇರುವ ಮದರಸದ ಬಗ್ಗೆ ಯಾರಿಗೆ ಬೇಕಾದರೂ ತಿಳಿದುಕೊಳ್ಳಲು ಮುಕ್ತ ಅವಕಾಶವಿದೆ. ಅಪಾರ್ಥ, ಅಪಪ್ರಚಾರಗಳಿಗೆ ಯಾರೂ ಕಿವಿಗೊಡಬಾರದು ಎಂದು ಪಾಣಕ್ಕಾಡ್ ಅಸ್ಸಯ್ಯದ್ ಫಝಲ್ ಶಿಹಾಬ್ ತಂಙಳ್ ಮಲಪ್ಪುರಂ ಹೇಳಿದರು.

ಧಾರ್ಮಿಕತೆಯ ಕ್ಷೀಣಿಸುವಿಕೆ ಅಂತ್ಯ ದಿನದ ಲಕ್ಷಣ-ಉಸ್ಮಾನುಲ್ ಫೈಝಿ
ಉದ್ಘಾಟಿಸಿದ ಜಂಇಯ್ಯತುಲ್ ಮುದರ್ರಿಸೀನ್ ಕೋಶಾಧಿಕಾರಿ ಉಸ್ಮಾನುಲ್ ಫೈಝಿ ತೋಡಾರ್ ಮಾತನಾಡಿ ಪಂಡಿತರ ಮರಣ ನಾಡಿಗೆ ತುಂಬಲಾರದ ನಷ್ಟವಾಗಿದ್ದು ಚೇಲಕ್ಕಾಡ್ ಉಸ್ತಾದರಂತಹ ಮಹಾನುಭಾವರ ವಿಯೋಗದಿಂದ ವಿದ್ವತ್ ಜಗತ್ತಿಗೆ ಬಹುದೊಡ್ಡ ನಷ್ಟವಾಗಿದೆ. ಧಾರ್ಮಿಕತೆಯ ಕ್ಷೀಣಿಸುವಿಕೆ ಅಂತ್ಯ ದಿನದ ಲಕ್ಷಣವಾಗಿದೆ ಎಂದು ಹೇಳಿದರು.
ನೂರುಲ್ ಹುದಾ ಎನ್ನುವ ನಾಡಿನ ಪ್ರಕಾಶಮಾನವಾದ ವಿದ್ಯಾಸಂಸ್ಥೆಗೆ ಎಲ್ಲರೂ ನೆರವು ನೀಡುವ ಮೂಲಕ ಸಂಸ್ಥೆಯ ಯಶಸ್ಸಿಗೆ ಕೈಜೋಡಿಸಬೇಕು ಎಂದು ಅವರು ಹೇಳಿದರು.

ನೂರುಲ್ ಹುದಾದ ವಿದ್ಯಾರ್ಥಿಗಳು ಅಭಿಮಾನವಾಗಲಿದ್ದಾರೆ-ಹನೀಫ್ ಹುದವಿ
ಮುಖ್ಯ ಪ್ರಭಾಷಣಗೈದ ನೂರುಲ್ ಹುದಾದ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ದೇಲಂಪಾಡಿ ಮಾತನಾಡಿ ನೂರುಲ್ ಹುದಾ ವಿದ್ಯಾಸಂಸ್ಥೆಯನ್ನು ನೀವೆಲ್ಲರೂ ಹೃದಯದಲ್ಲಿಟ್ಟು ಅಭಿಮಾನಪಡುತ್ತಿರುವುದರಿಂದ ಸಂಸ್ಥೆ ಇಂದು ಉತ್ತಮ ಮಟ್ಟದಲ್ಲಿ ಕಾರ್ಯಾಚರಿಸಲು ಸಾಧ್ಯವಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮುದಾಯದ, ಸಮಾಜದ ಅಭಿಮಾನವಾಗಿ ಮೂಡಿ ಬರಲಿದ್ದಾರೆ ಎಂದು ಹೇಳಿದರು.

ಪಂಡಿತ ಮೇಧಾವಿಗಳನ್ನು ಕಳೆದುಕೊಳ್ಳುತ್ತಿದ್ದೇವೆ:
ಇತ್ತೀಚಿನ ವರ್ಷಗಳಲ್ಲಿ ಅನೇಕ ಆಧ್ಯಾತ್ಮಿಕ ಪಂಡಿತರು ಮರಣ ಹೊಂದಿದ್ದು ನಮ್ಮನ್ನು ಅನಾಥಭಾವದಲ್ಲಿ ಮುಳುಗಿಸಿದೆ. ಪಂಡಿತರ ಮರಣ ಸಮಾಜಕ್ಕೆ ತುಂಬಲಾರದ ನಷ್ಟ. ಕೆಲವು ಸಮಯಗಳ ಹಿಂದೆ ಇಲ್ಲಿ ಮಜ್ಲಿಸುನ್ನೂರ್‌ಗೆ ನೇತೃತ್ವ ನೀಡಿದ್ದ ಚೇಲಕ್ಕಾಡ್ ಉಸ್ತಾದ್‌ರವರ ನಿಧನದಿಂದ ಈ ಸಮೂಹಕ್ಕೆ ದೊಡ್ಡ ನಷ್ಟ ಸಂಭವಿಸಿದೆ ಎಂದು ಅಡ್ವೊಕೇಟ್ ಹನೀಫ್ ಹುದವಿ ಹೇಳಿದರು.

ನೂರುಲ್ ಹುದಾದಿಂದ ಅದ್ಭುತ ಸಾಧನೆ-ಅನೀಸ್ ಕೌಸರಿ
ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಪ್ರ.ಕಾರ್ಯದರ್ಶಿ ಅನೀಸ್ ಕೌಸರಿ ಮಾತನಾಡಿ ಕಳೆದ ೭ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ನೂರುಲ್ ಹುದಾ ವಿದ್ಯಾಸಂಸ್ಥೆಯ ಸಾಧನೆ ಅಭೂತಪೂರ್ವವಾಗಿದ್ದು ಜನರ ಸಹಕಾರ ಮತ್ತು ಪ್ರೋತ್ಸಾಹ ಈ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿದೆ. ಮುಂದಿನ ದಿನಗಳಲ್ಲಿ ಸಂಸ್ಥೆ ಇನ್ನಷ್ಟು ಅಭಿವೃದ್ಧಪಥದಲ್ಲಿ ಸಾಗಲಿ ಎಂದು ಹೇಳಿದರು.

೩೦ ಜಿಲ್ಲೆಗಳಲ್ಲೂ ಎಸ್ಕೆಎಸ್ಸೆಸ್ಸೆಫ್‌ನ ಧ್ವಜ ಹಾರಾಡಬೇಕು-ಕೋಲಾರಿ
ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ರಫೀಕ್ ಹುದವಿ ಕೋಲಾರಿ ಮಾತನಾಡಿ ಸಮಸ್ತದ ವಿಚಾರವನ್ನು ಎಲ್ಲೆಡೆ ಮುಟ್ಟಿಸುವ ಕಾರ್ಯ ನಮ್ಮಿಂದಾಗಬೇಕು. ಮೂರು ಜಿಲ್ಲೆಗಳಲ್ಲಿ ಮಾತ್ರ ಎಸ್ಕೆಎಸ್ಸೆಸ್ಸೆಫ್ ಪ್ರಭಲವಾಗಿದ್ದು ರಾಜ್ಯದ ೩೦ ಜಿಲ್ಲೆಗಳಲ್ಲೂ ಎಸ್ಕೆಎಸ್ಸೆಸ್ಸೆಫ್‌ನ ಧ್ವಜ ಹಾರಾಡುವಂತಾಗಬೇಕು ಎಂದು ಹೇಳಿದರು.

ಎಲ್ಲರ ಸಹಕಾರದಿಂದ ಸಂಸ್ಥೆ ಅಭಿವೃದ್ಧಿ ಪಥದಲ್ಲಿದೆ-ಖಲೀಲುರ್ರಹ್ಮಾನ್
ಪ್ರಸ್ತಾವನೆಗೈದ ನೂರುಲ್ ಹುದಾ ಮ್ಯಾನೇಜರ್ ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ ಮಾತನಾಡಿ ನೂರುಲ್ ಹುದಾ ಸಂಸ್ಥೆ ಭವಿಷ್ಯದಲ್ಲಿ ಇನ್ನಷ್ಟು ಎತ್ತರಕ್ಕೆ ಏರಬೇಕಾದ ಅವಶ್ಯಕತೆಯಿದ್ದು ಅದು ನಿಮ್ಮೆಲ್ಲರ ಸಹಕಾರದಿಂದ ಮಾತ್ರ ಸಾಧ್ಯ. ಈಗಾಗಲೇ ಸಂಸ್ಥೆಯ ಮೇಲೆ ಪ್ರೀತಿಯಿಟ್ಟು ಅದೆಷ್ಟೋ ಮಂದಿ ಸಹಕಾರ ನೀಡುತ್ತಿರುವುದರ ಫಲವಾಗಿ ಸಂಸ್ಥೆ ಅಭಿವೃದ್ಧಿಯ ಒಂದೊಂದೇ ಮೆಟ್ಟಿಲನ್ನು ಏರುತ್ತಿದೆ. ಮುಂದಕ್ಕೂ ಸಂಸ್ಥೆಯ ಯಶಸ್ಸಿಗಾಗಿ ಸಹೃದಯಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಎಸ್ಕೆಎಸ್ಸೆಸ್ಸೆಫ್ ನೂತನ ಸಾರಥಿಗಳಿಗೆ ಸನ್ಮಾನ:
ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ರಫೀಕ್ ಹುದವಿ ಕೋಲಾರಿಯವರನ್ನು, ರಾಜ್ಯ ಪ್ರ.ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಅನೀಸ್ ಕೌಸರಿಯವರನ್ನು, ವರ್ಕಿಂಗ್ ಕಾರ್ಯದರ್ಶಿ ತಮ್ಲೀಕ್ ದಾರಿಮಿಯವರನ್ನು ಹಾಗೂ ಜಂಇಯ್ಯತುಲ್ ಮುದರ್ರಿಸೀನ್ ಕೇಂದ್ರ ಸಮಿತಿ ಕೋಶಾಧಿಕಾರಿಯಾಗಿ ಆಯ್ಕೆಗೊಂಡ ಉಸ್ಮಾನುಲ್ ಫೈಝಿ ತೋಡಾರ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
ಸುಮಾರು ೫೦ರಷ್ಟು ಸಂಸ್ಥೆಯ ಸ್ಪರ್ಧಾಳುಗಳು ಭಾಗವಹಿಸಿದ್ದ ಆಲ್ ಕೇರಳ ಕ್ವಿಝ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನೂರುಲ್ ಹುದಾದ ವಿದ್ಯಾರ್ಥಿಗಳಾದ ಶಾಹುಲ್ ಹಮೀದ್ ಕೊಡ್ಲಿಪೇಟೆ ಹಾಗೂ ಇರ್ಷಾದ್ ಅಜ್ಜಾವರ ಅವರನ್ನು ತೃತೀಯ ಸ್ಥಾನ ಪಡೆದ ಮಿಕ್ದಾದ್ ಕೋಲ್ಪೆ ಹಾಗೂ ಸಫ್ವಾನ್ ಕುದ್ಲೂರ್‌ರವರನ್ನು ಹಾಗೂ ದಾರುಲ್ ಹುದಾ ವಿ.ವಿ ವಿದ್ಯಾರ್ಥಿ ಸಂಘಟನೆ ಏರ್ಪಡಿಸಿದ ಸ್ವಾತಂತ್ರ್ಯ ಅಮೃತಮಹೋತ್ಸವ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಬದ್ರುದ್ದೀನ್ ಮೂಡಿಗೆರೆಯವರನ್ನು ಸನ್ಮಾನಿಸಲಾಯಿತು.

`ಚಿಗುರು’ ಪುರವಣಿ ಬಿಡುಗಡೆ:
ನೂರುಲ್ ಹುದಾದಿಂದ ಪ್ರಕಾಶನಗೊಂಡ ಸಂಸ್ಥೆಯ ಏಳು ವರ್ಷಗಳ ಅಭಿವೃದ್ಧಿ ವಿಚಾರಗಳನ್ನೊಳಗೊಂಡ `ಚಿಗುರು’ ವಿಶೇಷ ಪುರವಣಿಯನ್ನು ನೂರುಲ್ ಹುದಾದ ಜೊತೆ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ ಬಯಂಬಾಡಿಯವರಿಗೆ ಸಯ್ಯದ್ ಫಝಲ್ ಶಿಹಾಬ್ ತಂಙಳ್ ಪಾಣಕ್ಕಾಡ್ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.

ನೂರುಲ್ ಹುದಾದ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಬುರ್ಹಾನ್ ಅಲೀ ತಂಙಳ್ ಅಲ್ ಬುಖಾರಿ ನೇತೃತ್ವದಲ್ಲಿ ಮಖಾಂ ಝಿಯಾರತ್ ನಡೆಯಿತು. ಮಾಡನ್ನೂರು ಖತೀಬ್ ಸಿರಾಜುದ್ದೀನ್ ಫೈಝಿ, ಮಾಡನ್ನೂರು ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ ನೆಕ್ಕರೆ, ಮಾಜಿ ಅಧ್ಯಕ್ಷ ಕೆ.ಕೆ ಇಬ್ರಾಹಿಂ ಹಾಜಿ, ಜಂಇಯ್ಯತುಲ್ ಮುಅಲ್ಲಿಮೀನ್ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಮಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಜಂಇಯ್ಯತುಲ್ ಖುತಬಾ ಜೊತೆ ಕಾರ್ಯದರ್ಶಿ ನಝೀರ್ ಅಝ್ಹರಿ, ನೂರುಲ್ ಹುದಾದ ಪ್ರ.ಕಾರ್ಯದರ್ಶಿ ಹಿರಾ ಅಬ್ದುಲ್ ಖಾದರ್ ಹಾಜಿ, ಉಪಾಧ್ಯಕ್ಷರಾದ ಅಬೂಬಕ್ಕರ್ ಹಾಜಿ ಮಂಗಳ, ಅಬ್ದುಲ್ ಖಾದರ್ ಮುಸ್ಲಿಯಾರ್, ಕಾವು ಮಸೀದಿ ಖತೀಬ್ ಶುಕೂರ್ ದಾರಿಮಿ, ಅರೆಯಲಡಿ ಇಮಾಮ್ ಮಹಮೂದ್ ಮುಸ್ಲಿಯಾರ್, ಮಾಡನ್ನೂರು ಸದರ್ ಮುಅಲ್ಲಿಂ ಅಮೀರ್ ಅರ್ಷದಿ, ಶಂಸುದ್ದೀನ್ ಹನೀಫ್ ಮರ್ದಾಳ, ಅಹ್ಮದ್ ನಹೀಂ ಫೈಝಿ ಮುಕ್ವೆ, ತಾಜ್ ಮುಹಮ್ಮದ್ ಸಂಪಾಜೆ, ಹಮೀದ್ ಹಾಜಿ ಸುಳ್ಯ, ಉಸ್ಮಾನ್ ಹಾಜಿ ಬಯಂಬಾಡಿ, ಖಾಲಿದ್ ಬಿ.ಎಂ ಮಾಡನ್ನೂರು, ಫಾರೂಕ್ ದಾರಿಮಿ ಮಾಡನ್ನೂರು, ಹಮೀದ್ ಪೈಚಾರ್, ಇಬ್ರಾಹಿಂ ದಾರಿಮಿ ಮುಫತ್ತಿಸ್, ಅಬ್ದುಲ್ ಹಮೀದ್ ಫ್ಯಾಮಿಲಿ ಮಾಡಾವು, ಉಮರ್ ಹಾಜಿ ಪೆರ್ಲಂಪಾಡಿ, ಅಶ್ರಫ್ ಹಾಜಿ ಪಳ್ಳತ್ತೂರು, ಸ್ಟಾರ್‌ಕ್ಯೂ ಮಾಲಕ ಎ.ಜಿ ಯೂಸುಫ್, ಶಾಹುಲ್ ಹಮೀದ್ ಫೈಝಿ ಮಾಡನ್ನೂರು, ಉದ್ಯಮಿ ಮಮ್ಮಾಲಿ ಹಾಜಿ ಬೆಳ್ಳಾರೆ, ನೂರುಲ್ ಹುದಾ ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ ಅಲಿ ಮುಸ್ಲಿಯಾರ್ ಬನ್ನೂರು, ಪ್ರ.ಕಾರ್ಯದರ್ಶಿ ನಾಸಿರ್ ಬೆಳ್ಳಾರೆ, ಕೋಶಾಧಿಕಾರಿ ಶರೀಫ್ ಪರ್ಪುಂಜ, ನೌಫಲ್ ಹುದವಿ ಬಿಸಿ ರೋಡ್, ಇಬ್ರಾಹಿಂ ಹಾಜಿ ಕತ್ತರ್, ಎಂ.ಡಿ ಹಸೈನಾರ್, ಫಳುಲುದ್ದೀನ್ ಹೇಂತಾರ್, ಶಫಿಯುಲ್ಲಾ ಕಡಬ, ಅಬ್ದುಲ್ ಖಾದರ್ ಹಾಜಿ ಸುಂಕದಕಟ್ಟೆ, ಇಸಾಕ್ ಪಡೀಲ್, ಜಬ್ಬಾರ್ ಯಮಾನಿ, ಸಿ.ಎಚ್ ಅಬ್ದುಲ್ ಅಝೀಝ್ ಹಾಜಿ, ಗುತ್ತಿಗೆದಾರ ಅಬ್ದುಲ್ಲ ಕಾವು, ವಿಖಾಯ ಕಾರ್ಯದರ್ಶಿ ರಫೀಕ್ ಮಾಡನ್ನೂರು ಉಪಸ್ಥಿತರಿದ್ದರು. ನುರುಲ್ ಹುದಾ ಮ್ಯಾನೇಜರ್ ಕೆ.ಯು ಖಲೀಲುರ್ರಹ್ಮಾನ್ ಅರ್ಶದಿ ಕೋಲ್ಪೆ ಸ್ವಾಗತಿಸಿ ವಂದಿಸಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here