ಡೊನ್ ಬೊಸ್ಕೊ ಕ್ಲಬ್‌ನಿಂದ ಪ್ರತಿಭಾ ಪುರಸ್ಕಾರ

0

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

  • ಕಲಿಕೆಯ ಪಾಠದ ಜೊತೆಗೆ ಜೀವನದ ಪಾಠ ಕಲಿಯಿರಿ-ವಂ|ಸ್ಟ್ಯಾನಿ ಪಿಂಟೋ

ಪುತ್ತೂರು: ವೇಗವಾಗಿ ಬೆಳೆಯುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಬದಲಾವಣೆಯ ಕಾಲಘಟ್ಟಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆಯಿದೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯ ಪಾಠದ ಜೊತೆಗೆ ಜೀವನದ ಪಾಠವನ್ನು ಕಲಿತಾಗ ಜೀವನ ಫಲಪ್ರದವಾಗುತ್ತದೆ ಎಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾದ ವಂ|ಸ್ಟ್ಯಾನಿ ಪಿಂಟೋರವರು ಹೇಳಿದರು.

ಸೆ.4 ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯಲ್ಲಿರುವ ಡೊನ್ ಬೊಸ್ಕೊ ಕ್ಲಬ್ ವತಿಯಿಂದ ಪುತ್ತೂರಿನ ವಿದ್ಯಾರ್ಥಿ ಸಾಧಕರನ್ನು ಮತ್ತು ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಂಬಲಿಸಲು ವರ್ಷಂಪ್ರತಿ ನಡೆಸಿಕೊಡುವ `ಪ್ರತಿಭಾ ಪುರಸ್ಕಾರ-2022′ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ರ್‍ಯಾಂಕ್ ಅಥವಾ ಡಿಸ್ಟಿಂಕ್ಷನ್ ಗಳಿಸಿದ ವಿದ್ಯಾರ್ಥಿಗಳ ಜೀವನೋಪಾಯಕ್ಕೆ ಹಾಗೂ ಜೀವನಕ್ಕೆ ಬೇಕಾಗಿರುವುದು ಒಳ್ಳೆಯ ಕೆಲಸ. ಪ್ರತಿಭೆಗೆ ತಕ್ಕುದಾದ ಒಳ್ಳೆಯ ಕೆಲಸವಿಲ್ಲದಿದ್ದರೆ ರ್‍ಯಾಂಕ್ ತೆಗೆದುಕೊಂಡು ಏನು ಮಾಡಲು ಸಾಧ್ಯ. ಪುರಸ್ಕಾರಗಳು ವಿದ್ಯಾರ್ಥಿಗಳ ಜ್ಞಾನಕ್ಕೆ ನೀಡುವುದಾಗಿದೆ. ಇದೇ ಪುರಸ್ಕಾರಗಳಿಂದ ನೀವು ಮುಂದಿನ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತಾಗಲಿ ಹಾಗೂ ಪುರಸ್ಕಾರ ಪಡೆದವರು ತಮ್ಮನ್ನು ಪುರಸ್ಕರಿಸಿದ ಸಂಸ್ಥೆಗೆ ಎಂದಿಗೂ ಚಿರಋಣಿಯಾಗಿರಬೇಕು ಎಂದು ಹೇಳಿ ಶುಭ ಹಾರೈಸಿದರು.

ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ ಮಾತನಾಡಿ, ಯಾರು ಶ್ರಮ ಪಡುತ್ತಾರೋ ಅವರು ಪಟ್ಟ ಶ್ರಮಕ್ಕೆ ಅಭಿನಂದನೆಗಳು ಖಂಡಿತಾ ಪ್ರಾಪ್ರವಾಗುತ್ತದೆ. ವಿದ್ಯಾರ್ಥಿಗಳು ಸಾಧನೆಯನ್ನು ನಿರಂತರ ಮಾಡುತ್ತಲೇ ಇರಬೇಕು. ವಿದ್ಯಾರ್ಥಿಗಳ ಸಾಧನೆಯ ಹಿಂದೆ ಹೆತ್ತವರ ಹಾಗೂ ಶಿಕ್ಷಕರ ಪ್ರೋತ್ಸಾಹದೊಂದಿಗೆ ದೇವರ ಆಶೀರ್ವಾದ ಖಂಡಿತಾ ಇದೆ ಎಂದು ಹೇಳಿ ಶುಭ ಹಾರೈಸಿದರು.

ಎಸೆಸ್ಸೆಲ್ಸಿ ಟಾಪರ್‍ಸ್‌ಗೆ ಅಭಿನಂದನೆ:
2021-22ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಂಕ ಗಳಿಸಿದ ವಿದ್ಯಾರ್ಥಿಗಳಾದ ನೋರ್ಮನ್ ಡೆರೆನ್ ಡಿ’ಸೋಜ, ಶರಲ್ ಲಿಶಾ ಗಲ್ಬಾವೋ(ಸುದಾನ), ಮೆಲ್ರಿಯ ಸ್ಮಿತಾ ಗೊನ್ಸಾಲ್ವಿಸ್(ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆ), ಮರೀನಾ ಮೊಂತೇರೊ(ಬೆಳಿಯೂರುಕಟ್ಟೆ ಸರಕಾರಿ ಪ್ರೌಢಶಾಲೆ), ರೋಶಲ್ ಡಿ’ಸಿಲ್ವ, ಹೆಝೆಲ್ ಪಾಸ್, ಬೆನಿಟ ಡಿ’ಸೋಜ(ವಿಕ್ಟರ್ಸ್), ಡೆಲಿಶಾ ಮರಿಯ ಫೆರ್ನಾಂಡೀಸ್, ಅಲೀನಾ ವೆಲೆಂಟೀನಾ ರೆಬೆಲ್ಲೋ(ಫಿಲೋಮಿನಾ)ರವರನ್ನು ಗುರುತಿಸಿ ಅಭಿನಂದಿಸಲಾಯಿತು.

ಪಿಯುಸಿ ಟಾಪರ್ಸ್ ಗೆ ಅಭಿನಂದನೆ:
ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಂಕ ಗಳಿಸಿದ ರಿಯೋನಿ ಐರಲ್ ಮಾಡ್ತಾ, ಹೇಡನ್ ಆಂಟನಿ ಲೋಬೊ, ಮೆಲಿಶಾ ಮಿನೇಜಸ್, ಜೋಯ್ಲಿನ್ ಮರಿಯಾ, ಜೆನಿಶಾ ಸೃಜನ್ ಮಾರ್ಟಿಸ್, ವಿವಿನ್ ನೆಲ್ಸನ್ ಲೋಬೊ, ದಿಶಾ ಪರ್ಲ್ ಮಸ್ಕರೇನ್ಹಸ್, ರಿಶಲ್ ಡಿ’ಕುನ್ಹಾ, ಆಲ್ಫಿಯ ಫ್ರೆನಿಟ ಫೆರ್ನಾಂಡೀಸ್, ವಿಜೇಶ್ ಸೆರಾವೋ, ಡಿಯೊನ್ನಾ ಜೇನ್ ಮಿನೇಜಸ್, ಮೆಲನ್ ಜರೆನ್ ಟೆಲ್ಲಿಸ್((ಫಿಲೋಮಿನಾ), ಮೃದುಲ್ ಮಸ್ಕರೇನ್ಹಸ್(ವಳಚ್ಚಿಲ್ ಎಕ್ಸ್‌ಪರ್ಟ್), ರೋಯ್‌ಸ್ಟನ್ ಮಾರ್ಟಿಸ್(ವಿಟ್ಲ ಪಿಯು)ರವರನ್ನು ಗುರುತಿಸಿ ಅಭಿನಂದಿಸಲಾಯಿತು.

ಪದವಿ ಟಾಪರ್ಸ್ ಗೆ ಅಭಿನಂದನೆ:
ಪದವಿ ಪರೀಕ್ಷೆಯಲ್ಲಿ ಟಾಪರ್ಸ್ ಎನಿಸಿದ ಮೆಲ್ರಿಶಾ ಜೈಶಲ್ ಡಿ’ಸೋಜ, ರೆನಿಟ ಮೆಲ್ರಿಯ ಲೋಬೊ, ಮರ್‍ಲಿನ್ ಲವಿಶ ಮೊಂತೇರೊ, ವಿಶಾಲ್ ದಿಲ್ಲನ್ ಡಿ’ಸೋಜ, ಸ್ಟೇಲನ್ ಡಿ’ಸೋಜ, ರೊವ್ಲಿನ್ ಕ್ಲೆರಿಟ ಕ್ರಾಸ್ತಾ, ಜೋಯ್‌ಸ್ಟನ್ ಮರ್ವಿನ್ ಡಿ’ಸೋಜ(ಫಿಲೋಮಿನಾ), ಜೋಸ್ವಿನ್ ಮಸ್ಕರೇನ್ಹಸ್(ಸಹ್ಯಾದ್ರಿ ಕಾಲೇಜು ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್), ಪ್ರೀಮಾ ಫೆರ್ನಾಂಡೀಸ್(ನಿಟ್ಟೆ ಸರೋಶ್ ಇನ್ಸ್ಟಿಟ್ಯೂಟ್ ಆಫ್ ಹೊಟೇಲ್ ಅಡ್ಮಿನಿಸ್ಟ್ರೇಷನ್), ಅವಿನಾ ಮಾಡ್ತಾ(ಅಲೋಶಿಯಸ್ ಕಾಲೇಜು), ಮೊನಿಕಾ ಪ್ರಿಯಾ ಡಿ’ಸೋಜ(ವಿವೇಕಾನಂದ), ಜೆಸ್ಮಿತಾ ತೋರಸ್(ವಿವೇಕಾನಂದ ಕಾಲೇಜು ಆಫ್ ಇಂಜಿನಿಯರಿಂಗ್, ಟೆಕ್ನೋಲಜಿ), ವಂದನಾ ಆನ್ ಗೋವಿಯಸ್(ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು)ರವರನ್ನು ಗುರುತಿಸಿ ಅಭಿನಂದಿಸಲಾಯಿತು.

ಸ್ನಾತಕೋತ್ತರ ಸಾಧಕರಿಗೆ ಅಭಿನಂದನೆ:
ಸ್ನಾತಕೋತ್ತರ ಪರೀಕ್ಷೆಯಲ್ಲಿ ಟಾಪರ್ಸ್ ಎನಿಸಿದ ವಿನೋಲ ಅಮಿತಾ ಲೋಬೊ(ಅಲೋಶಿಯಸ್), ಮ್ಯಾಕ್ಲೀನ್ ಜೇನ್ ಡಿ’ಸೋಜ, ಬೆಂಝಿಲ್ ಜೋಸ್ಟನ್ ಪಾಸ್, ಜ್ಯಾಕ್‌ಲಿನ್ ಜೇನ್ ಮಸ್ಕರೇನ್ಹಸ್(ಅಲೋಶಿಯಸ್), ವಿರಾಜ್ ಡೇನಿಯಲ್ ಡಿ’ಸೋಜ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ರಿಸರ್ಚ್), ಫೆಮಿನ್ ಗ್ಲೆನ್ ಲೋಬೊ(ಮಣಿಪಾಲ್ ಕಾಲೇಜು ಆಫ್ ಟೆಕ್ನೋಲಜಿ), ಜೋಯ್ಲಿನ್ ರೆಬೆಲ್ಲೋ(ಫಿಲೋಮಿನಾ), ಮೇಗಸ್ ಜೋಯೆಲ್ ಮಸ್ಕರೇನ್ಹಸ್(ಎಸ್‌ಡಿಎಂ ಕಾಲೇಜು ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಆಂಡ್ ಸ್ನಾತಕೋತ್ತರ ಕೇಂದ್ರ), ಜೋಯ್ಸನ್ ವರ್ನರ್ ಡಿ’ಕೋಸ್ಟ(ಟೆಕ್ನಿಕಲ್ ಯೂನಿವರ್ಸಿಟಿ ಆಫ್ ಡ್ರೆಸ್ಡನ್)ರವರನ್ನು ಗುರುತಿಸಿ ಅಭಿನಂದಿಸಲಾಯಿತು.

ಕ್ರೀಡಾ ಸಾಧಕರಿಗೆ ಅಭಿನಂದನೆ:
2021-22ನೇ ಸಾಲಿನ ಕ್ರೀಡೆಯಲ್ಲಿ ಸಾಧನೆಗೈದ ಕ್ರೀಡಾಪಟುಗಳಾದ ಚೆಸ್‌ನಲ್ಲಿ ಮೃನಾಲ್ ಮಸ್ಕರೇನ್ಹಸ್(ಬೆಥನಿ ಪ್ರೌಢಶಾಲೆ), ರಾಜ್ಯ ಮಟ್ಟದ ವಿಟುಯು ಸ್ಪರ್ಧೆಯಲ್ಲಿ ನೀಲ್ ಮಸ್ಕರೇನ್ಹಸ್(ನಿಟ್ಟೆ ಎನ್‌ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ), ವೈಟ್‌ಲಿಪ್ಟಿಂಗ್‌ನಲ್ಲಿ ವೆನಿಶಾ ಜೆಸ್ಸಿಕಾ ಸಲ್ದಾನ್ಹಾ(ಫಿಲೋಮಿನಾ ಕಾಲೇಜು)ರವರನ್ನು ಗುರುತಿಸಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಗೌರವ ಉಪಸ್ಥಿತಿಯಾಗಿ ಭಾಗವಹಿಸಿದ ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷ ಫೆಬಿಯನ್ ಗೋವಿಯಸ್ ಸ್ವಾಗತಿಸಿ, ಕಾರ್ಯದರ್ಶಿ ಜೆರಾಲ್ಡ್ ಡಿ’ಕೋಸ್ಟ ವಂದಿಸಿದರು. ಸದಸ್ಯರಾದ ಆಲನ್ ಮಿನೇಜಸ್(ಎಸೆಸ್ಸೆಲ್ಸಿ), ರೋಹನ್ ಡಾಯಸ್(ಪಿಯುಸಿ), ಆಂಟನಿ ಒಲಿವೆರಾ(ಪದವಿ), ವಿಜಯ್ ಡಿ’ಸೋಜ(ಕ್ರೀಡೆ), ಸಿಲ್ವೆಸ್ತರ್ ಡಿ’ಸೋಜ(ಸ್ನಾತಕೋತ್ತರ), ಬ್ರಾಯನ್ ಸಿಕ್ವೇರಾ, ಅನಿಲ್ ಪಾಸ್, ಚಾರ್ಲ್ಸ್ ಫುಡ್ತಾದೊ(ರ್‍ಯಾಂಕ್) ಸಾಧಕರ ಪರಿಚಯ ಮಾಡಿದರು. ಮುಖ್ಯ ಅತಿಥಿಯವರ ಅರಿಚಯವನ್ನು ಸದಸ್ಯ ಅರುಣ್‌ ರೆಬೆಲ್ಲೋ ನೀಡಿದರು.  ಸನ್ಮಾನಿತರ ಪೈಕಿ ರೋಹನ್, ಸುಶ್ಮಿತಾ ಕೆ ಅನಿಸಿಕೆ ವ್ಯಕ್ತಪಡಿಸಿದರು. ಸದಸ್ಯ ಇನಾಸ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು.

ರ್‍ಯಾಂಕ್ ಸಾಧಕರಿಗೆ ಸನ್ಮಾನ…
ಎಂಎ ಎಜ್ಯುಕೇಶನ್ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಗಳಿಸಿದ ಅನುಷಾ ಜೇನ್ ಪಾಸ್(ಕೊಂಬೆಟ್ಟು ಪ್ರೌಢಶಾಲೆ), ಪಿಯುಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಗಳಿಸಿದ ಫಿಲೋಮಿನಾ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಕೃಪಾ ಎಸ್.ರೈ, ವೈಷ್ಣವಿ, ಸಿಮ್ರಾನ್ ತಾಜ್, ರೋಹನ್ ಜಿ, ವಾಣಿಜ್ಯ ವಿಭಾಗದಲ್ಲಿ ಶಾಂತೇರಿ ಶೆಣೈ ಪಿ, ಪದವಿ ಪರೀಕ್ಷೆಯಲ್ಲಿ ಫಿಲೋಮಿನಾ ಕಾಲೇಜಿನ ಅನು ಡಿ(ಬಿಎಸ್ಸಿ/೪ನೇ ರ್‍ಯಾಂಕ್), ರಾಶಿಯಾ ರೈ ಎಂ(ಬಿಬಿಎ/೫ನೇ ರ್‍ಯಾಂಕ್), ಚೇತನಾ ಎನ್(ಬಿಎ/೬ನೇ ರ್‍ಯಾಂಕ್), ಶ್ರೇಯಾ ಕೆ.ಎಸ್(ಬಿಬಿಎ/೭ನೇ ರ್‍ಯಾಂಕ್), ರೆನಿಲ್ಡಾ ಜೋಯ್ಸ್ ಮಾರ್ಟಿಸ್(ಬಿಎಸ್ಸಿ/೯ನೇ ರ್‍ಯಾಂಕ್), ರಮ್ಯಶ್ರೀ ರೈ(ಬಿಎಸ್ಸಿ/೧೦ನೇ ರ್‍ಯಾಂಕ್), ಸ್ನಾತಕೋತ್ತರ ವಿಭಾಗದಲ್ಲಿ ಫಿಲೋಮಿನಾ ಕಾಲೇಜಿನ ಎಂಎಸ್ಸಿ ಕಂಪ್ಯೂಟರ್ ಸೈನ್ಸ್‌ನ ಜೈನಾಬತ್ ರಮ್ಸೀನಾ ಎನ್(೧ನೇ ರ್‍ಯಾಂಕ್), ಎಂಎಸ್ಸಿ ಫಿಸಿಕ್ಸ್‌ನ ಸುಶ್ಮಿತಾ ಕೆ(೧ನೇ ರ್‍ಯಾಂಕ್), ಎಂಎಸ್‌ಡಬ್ಲ್ಯೂನ ಸಾರಮ್ಮ ಟಿ.ಜೆ(೨ನೇ ರ್‍ಯಾಂಕ್), ಎಂಕಾಂನ ನಿರೀಶ್ಮಾ ಎನ್.ಸುವರ್ಣ(೪ನೇ ರ್‍ಯಾಂಕ್), ಯಶಸ್ವಿನಿ ಬಿ(೫ನೇ ರ್‍ಯಾಂಕ್), ರಕ್ಷಾ ಎಸ್.ವಿ(೫ನೇ ರ್‍ಯಾಂಕ್), ನಿವಿನ್ ಕೊರೆಯಾ(೬ನೇ ರ್‍ಯಾಂಕ್), ಶ್ರಾವ್ಯ ಎನ್.ಎಸ್(೭ನೇ ರ್‍ಯಾಂಕ್), ಭವ್ಯಶ್ರೀ ವೈ(೭ನೇ ರ್‍ಯಾಂಕ್), ರಮ್ಯ ಎಂ(೯ನೇ ರ್‍ಯಾಂಕ್), ಸ್ವಾತಿ ಎಂ(೧೦ನೇ ರ್‍ಯಾಂಕ್)ರವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here