ಕಾಣಿಯೂರು: ಭರತನಾಟ್ಯ ತರಬೇತಿ ಉದ್ಘಾಟನೆ

0

ಕಾಣಿಯೂರು: ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಕಲೆಗಳು ಉಳಿಯಲು ಸಾಧ್ಯ. ಕಲೆಗಳಿಗೆ ತನ್ನದೇ ಆದ ಗೌರವಗಳು ಇವೆ. ಕಲೆಗಳನ್ನು ಉಳಿಸಿ ಬೆಳೆಸುವ ಅತ್ಯಂತ ಪ್ರಮುಖ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕಾಣಿಯೂರು ರಾಶಿ ಕಾಂಪ್ಲೇಕ್ಸ್‌ನ ಮಾಲಕರಾದ ಚಂದ್ರಶೇಖರ್ ಬರೆಪ್ಪಾಡಿ ಹೇಳಿದರು.

ಅವರು ಸೆ.4ರಂದು ಕಾಣಿಯೂರು ರಾಶಿ ಕಾಂಪ್ಲೇಕ್ಸ್‌ನಲ್ಲಿ ಭರತನಾಟ್ಯ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು. ಕಾಣಿಯೂರು ಸ.ಹಿ.ಪ್ರಾ.ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಭರತನಾಟ್ಯ ಗುರುಗಳಾದ ಗೋಪಾಲಕೃಷ್ಣ ವೀರಮಂಗಲ, ಕಾಣಿಯೂರು ರಾಶಿ ಕಾಂಪ್ಲೇಕ್ಸ್‌ನ ಮಾಲಕಿ ಜ್ಞಾನೇಶ್ವರಿ ಚಂದ್ರಶೇಖರ್ ಶುಭಹಾರೈಸಿದರು. ಜಯಲಕ್ಷ್ಮೀ ಮಾದೇರಿ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕಿ ಚಂಪಾ ಕುಶಾಲಪ್ಪ ಗೌಡ ಅಬೀರ ಸ್ವಾಗತಿಸಿದರು. ಕಾಣಿಯೂರು ಶಾಲಾ ಶಿಕ್ಷಕಿ ದಿವ್ಯಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here