ದ.ಕ.ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟ ಸಮಾರೋಪ

0

  • ಬಾಲಕರ ವಿಭಾಗದಲ್ಲಿ ಪುತ್ತೂರು, ಬಾಲಕಿಯರ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ತಂಡ ಚಾಂಪಿಯನ್

ನೆಲ್ಯಾಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಕಚೇರಿ ಮಂಗಳೂರು ದ.ಕ., ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಪುತ್ತೂರು ಹಾಗೂ ಸರಕಾರಿ ಉ.ಹಿ.ಪ್ರಾ.ಶಾಲೆ ನೆಲ್ಯಾಡಿ ಇದರ ಸಹಯೋಗದೊಂದಿಗೆ ನಡೆದ ದ.ಕ.ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರ ವಾಲಿಬಾಲ್ ಪಂದ್ಯಾಟದ ಸಮಾರೋಪ ಸೆ.3ರಂದು ಸಂಜೆ ನಡೆಯಿತು.

ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರುರವರು, ಕ್ರೀಡೆಯಲ್ಲಿ ಸಾಕಷ್ಟು ಅವಕಾಶಗಳಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ದೇಶದ ಯುವಶಕ್ತಿ ತರಬೇತಿ, ಶ್ರಮಪಟ್ಟು ಸಾಧಕರಾಗಬೇಕು. ಪಿ.ಟಿ.ಉಷಾ, ಪ್ರಶಾಂತ್ ರೈಯವರಂತಹ ಗ್ರಾಮೀಣ ಪ್ರತಿಭೆಗಳು ಕ್ರೀಡೆಯಲ್ಲಿ ತಮ್ಮ ಸಾಮರ್ಥ್ಯ ತೋರಿಸಿಕೊಟ್ಟಿದ್ದಾರೆ. ಇದೇ ರೀತಿ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಬೆಳಗಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕ ಅಬ್ರಹಾಂ ವರ್ಗೀಸ್, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಶುಭಹಾರೈಸಿದರು. ಗ್ರಾಮೀಣಾಭಿವೃದ್ಧಿ ಇಲಾಖೆ ಬಂಟ್ವಾಳ ತಾಲೂಕು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರನಾಥ ಸಾಲ್ಯಾನ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಭುವನೇಶ್ ಜೆ., ಪುತ್ತೂರು ತಾಲೂಕು ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಭಾಸ್ಕರ ಎಸ್.ಗೌಡ, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಮಹಮ್ಮದ್ ಇಕ್ಬಾಲ್, ಉಷಾಜೋಯಿ, ರೇಷ್ಮಾಶಶಿ, ಜಯಾನಂದ ಬಂಟ್ರಿಯಾಲ್, ರವಿಪ್ರಸಾದ್ ಶೆಟ್ಟಿ, ವಾಲಿಬಾಲ್ ಪಂದ್ಯಾಟದ ಆಯೋಜನಾ ಸಮಿತಿ ಕೋಶಾಧಿಕಾರಿ ಅಬ್ರಹಾಂ ಕೆ.ಪಿ., ಚಂದ್ರಶೇಖರ ಬಾಣಜಾಲು, ಮುಖ್ಯಶಿಕ್ಷಕ ಆನಂದ ಅಜಿಲ, ಎಸ್‌ಡಿಎಂಸಿ ಅಧ್ಯಕ್ಷ ಬಿನೋಜ್ ವಿ.ವಿ., ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಪಟ್ಟೆ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಜಯಂತಿ ಬಿ.ಎಂ., ರಾಜೇಶ್ ನೆಲ್ಯಾಡಿ, ನೆಲ್ಯಾಡಿ ವಿಕಾಸ್ ಫರ್ನಿಚರ್‍ಸ್‌ನ ಗಣೇಶ್ ಪೊಸೊಳಿಗೆ, ಕಾಂತಪ್ಪ ಗೌಡ ಪೂವಾಜೆ ಮತ್ತಿತತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಲಿಬಾಲ್ ಪಂದ್ಯಾಟದ ಆಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿರುವ ವಿಮಲ್‌ಕುಮಾರ್ ನೆಲ್ಯಾಡಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ವಾಲಿಬಾಲ್ ಪಂದ್ಯಾಟದ ಆಯೋಜನಾ ಸಮಿತಿ ಅಧ್ಯಕ್ಷ, ನ್ಯಾಯವಾದಿ, ನೋಟರಿ ಇಸ್ಮಾಯಿಲ್ ನೆಲ್ಯಾಡಿ ಸ್ವಾಗತಿಸಿ, ನೆಲ್ಯಾಡಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಟಿ.,ವಂದಿಸಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮಲ್‌ಕುಮಾರ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

ಬಾಲಕರ ವಿಭಾಗ;
ಬಾಲಕರ ವಿಭಾಗದಲ್ಲಿ ಪುತ್ತೂರು ತಾಲೂಕು ಪ್ರತಿನಿಧಿಸಿದ್ದ ಬೆಥನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪುತ್ತೂರು ತಂಡ ಪ್ರಥಮ ಹಾಗೂ ಮೂಡಬಿದ್ರೆ ತಾಲೂಕು ಪ್ರತಿನಿಧಿಸಿದ್ದ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮೂಡಬಿದಿರೆ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮೂಡಬಿದ್ರೆ ತಂಡದ ಕೌಶಿಕ್ ಉತ್ತಮ ಅಲ್‌ರೌಂಡರ್, ಪುತ್ತೂರು ತಂಡದ ಮಹಮ್ಮದ್ ನವಾಜ್ ಉತ್ತಮ ಹೊಡೆತಗಾರ ಹಾಗೂ ಪುತ್ತೂರು ತಂಡದ ಮಹಮ್ಮದ್ ಶಾನ್ ಉತ್ತಮ ಲಿಫ್ಟರ್ ಪ್ರಶಸ್ತಿ ಪಡೆದುಕೊಂಡರು.

ಬಾಲಕಿಯರ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕು ಪ್ರತಿನಿಧಿಸಿದ್ದ ಸರಕಾರಿ ಹಿ.ಪ್ರಾ.ಶಾಲೆ ಬಂದಾರು ಪ್ರಥಮ ಹಾಗೂ ಮಂಗಳೂರು ಉತ್ತರ ತಾಲೂಕು ಪ್ರತಿನಿಧಿಸಿದ್ದ ಮಂಗಳೂರು ಲೇಡಿಹಿಲ್ ಹೈಯರ್ ಪ್ರೈಮರಿ ಸ್ಕೂಲ್‌ನ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಮಂಗಳೂರು ತಂಡದ ನಿಧಿ ಅಲ್‌ರೌಂಡರ್, ಬಂದಾರು ತಂಡದ ತನುಶ್ರೀ ಉತ್ತಮ ಹೊಡೆತಗಾರ್ತಿ ಹಾಗೂ ಬಂದಾರು ತಂಡದ ಸಿಂಚನಾ ಉತ್ತಮ ಲಿಫ್ಟರ್ ಪ್ರಶಸ್ತಿ ಪಡೆದುಕೊಂಡರು.

LEAVE A REPLY

Please enter your comment!
Please enter your name here