ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷರ ಪದಗ್ರಹಣ

0

  • ಪಕ್ಷವನ್ನು ಬಲಿಷ್ಟ ಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ: ಡಾ. ರಾಜಾರಾಮ್ ಕೆ.ಬಿ.
  • ಪ್ರತಿಯೊಂದೂ ಘಟಕಕ್ಕೂ ಅದರದ್ದೇ ಆದ ಜವಾಬ್ದಾರಿಗಳಿವೆ: ಎಂ.ಎಸ್.ಮಹಮ್ಮದ್
  •  ಕಾಂಗ್ರೆಸ್ ಎಷ್ಟು ಅನಿವಾರ್ಯ ಎಂದು ದೇಶದ ಜನರಿಗೆ ಈಗ ಗೊತ್ತಾಗಿದೆ: ಅಬ್ಬಾಸ್ ಅಲಿರವರು

ವಿಟ್ಲ: ಅಸಂಘಟಿತರನ್ನು ಒಟ್ಟು ಸೇರಿಸುವ ಪ್ರಯತ್ನ ಇದಾಗಿದೆ. ಅಸಂಘಟಿತ ವರ್ಗವನ್ನು ಸಂಘಟಿತರನ್ನಾಗಿ ಮಾಡುವಲ್ಲಿ ಕಾಂಗ್ರೆಸ್ ಪಕ್ಷ ಬಹಳಷ್ಟು ಕೆಲಸ ಮಾಡಿದೆ‌. ತೀರ ಬಡವರಿಗೆ ಸಮಾನತೆಯ ಬದುಕನ್ನು ಕೊಟ್ಟ ಪಕ್ಷ ಕಾಂಗ್ರೆಸ್, ಪಕ್ಷವನ್ನು ಬಲಿಷ್ಟ ಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ವಿಟ್ಲ – ಉಪ್ಲಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ.ರವರು ಹೇಳಿದರು.

ಅವರು ವಿಟ್ಲದಲ್ಲಿರುವ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಸೇಸಪ್ಪ ನೆಕ್ಕಿಲುರವರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಕ್ಷ ಸಂಘಟನೆ ಮಾಡುವ ಕೆಲಸ ನಿತಂತರವಾಗಿ ನಡೆದುಬರಬೇಕಾಗಿದೆ. ಮುಂಚುಣಿ ಘಟಕಗಳ ಪದಾಧಿಕಾರಿಗಳೆಲ್ಲರೂ ಒಗ್ಗಟ್ಟಿನಿಂದ ಒಂದೇ ಮನಸ್ಸಿನಲ್ಲಿ ಪಕ್ಷ ಸಂಘಟನೆಗಾಗಿ ದುಡಿಯೋಣ. ಕಾಂಗ್ರೆಸ್ ನ ಸಿದ್ದಾಂತಕ್ಕೆ ಬದ್ದರಾಗಿ ಕೆಲಸ ಮಾಡೋಣ. ನಿಷ್ಕಲ್ಮಶ ಮನಸ್ಸಿನಿಂದ ಕೆಲಸ ಮಾಡಿದಲ್ಲಿ ಜಯ ಕಟ್ಟಿಟ್ಟ ಬುತ್ತಿ. ಪಕ್ಷ ಆಡಳಿತದಲ್ಲಿದ್ದರೂ ಇಲ್ಲದಿದ್ದರು ಜನ ನಮ್ಮೊಂದಿಗಿದ್ದಾರೆ ಎನ್ನುವುದಕ್ಕೆ ಮೊನ್ನೆಯ ಸ್ವಾತಂತ್ರ್ಯ ನಡಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದರು.

ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಘಟನೆಯಲ್ಲಿ ಇಲ್ಲದ ಕಾರ್ಮಿಕರನ್ನು ಒಂದೆಡೆ ಸೇರಿಸುವ ಪ್ರಯತ್ನ ಇದಾಗಿದೆ. ನಮ್ಮಲ್ಲಿರುವ ಪ್ರತಿಯೊಂದೂ ಘಟಕಕ್ಕೂ ಅದರದ್ದೇ ಆದ ಜವಾಬ್ದಾರಿಗಳಿವೆ. ಸಮಾಜದಲ್ಲಿರುವ ಜನರನ್ನು ಬೇರೆಬೇರೆ ಯೋಜನೆಯ ಮುಖಾಂತರ ಮೇಲಕ್ಕೆತ್ತುವ ಕೆಲಸ ಕಾಂಗ್ರೆಸ್ ನಿರಂತರವಾಗಿ ಮಾಡುತ್ತಿದೆ. ನಾವೆಲ್ಲರು ಒಗ್ಗಟ್ಟಾಗಿ ಕೆಲಸ ಮಾಡಿದಾಗ ಕಾಂಗ್ರೆಸ್ ಗೆ ಗೆಲುವಾಗಬಹುದು. ಬಿಜೆಪಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ದೇಶದ ಸ್ಥಿತಿ ಡೋಲಾಯಮಾನವಾಗಬಹುದು. ದೇಶದ ಭವಿಷ್ಯದ ಬಗ್ಗೆ ಚಿಂತನೆ‌ ಮಾಡಬೇಕಾದ ಅವಶ್ಯಕತೆ ಇದೆ ಎಂದರು.

ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಅಬ್ಬಾಸ್ ಅಲಿರವರು ಮಾತನಾಡಿ ಕಾಂಗ್ರೆಸ್ ಎಷ್ಟು ಅನಿವಾರ್ಯ ಎಂದು ದೇಶದ ಜನರಿಗೆ ಈಗ ಗೊತ್ತಾಗ ತೊಡಗಿದೆ. ಕಾಂಗ್ರೆಸ್ ಕಟ್ಟಕಡೇಯ ವ್ಯಕ್ತಿಯ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಸೌಹಾರ್ದತೆ ಸಮಾನತೆಯ ಜಿಲ್ಲೆ ನಮ್ಮದಾಗಬೇಕು ಅದಕ್ಕೆ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಬೇಕು ಎಂದರು.

ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಡೀಕಯ್ಯ ನಲಿಕೆ, ಬಾಬು ಅಗರಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನ ಅಸಂಘಟಿತ ಕಾರ್ಮಿಕ ಘಟಕದ ಉಪಾಧ್ಯಕ್ಷರಾಗಿ ಬಾಬು ಬೆಳ್ಳಿಪ್ಪಾಡಿ ಹಾಗೂ ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕದ ಪ್ರತಿನಿಧಿಯಾಗಿ ಲೊಕೇಶ್ ಪೆಲತ್ತಡಿರವರನ್ನು ಆಯ್ಕೆಮಾಡಲಾಯಿತು. ಅವರನ್ನು ಶಾಲುಹೊದಿಸಿ‌ ಗೌರವಿಸಲಾಯಿತು.

ಉಸ್ತುವಾರಿಗಳಾದ ಜ್ಞಾನಶೀಲ ಸುಳ್ಯ, ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕದ ಜಾಲತಾಣ ಮುಖ್ಯಸ್ಥ ನಿರಂಜನ್ ರೈ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಫಾರುಕ್ ಪೆರ್ನೆ ಜಿಲ್ಲಾ ಪ್ರಮುಖರಾದ ಬಶೀರ್ ಅಹಮ್ಮದ್, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ ಶೆಟ್ಟಿ ಕೊಲ್ಯ, ಪಟ್ಟಣ ಪಂಚಾಯತ್ ಸದಸ್ಯರಾದ ಡೀಕಯ್ಯ, ಲತಾಅಶೋಕ್, ಪದ್ಮಿನಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ಕಿಸಾನ್ ಘಟಕದ ಅಧ್ಯಕ್ಷರಾದ ಎಲ್ಯಣ್ಣ ಪೂಜಾರಿ ಮೈರುಂಡ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕರೀಂ ಕುದ್ದುಪದವು, ಜಿಲ್ಲಾ ಎಸ್.ಸಿ.ಘಟಕದ ಅಧ್ಯಕ್ಷ ಪ್ರಹಲ್ಲಾದ್ ಬೆಳ್ಳಿಪ್ಪಾಡಿ, ಬ್ಲಾಕ್ ಕಾರ್ಯದರ್ಶಿ ಶೇಕ್ ಅಲಿ ಸೇರಾಜೆ, ಪಕ್ಷದ ಪ್ರಮುಖರಾದ ಎನ್.ಎ.ಅಶೋಕ್ ಮೊದಲಾದವರು ಉಪಸ್ಥಿತರಿದ್ದರು. ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here