ಗುರುಗಳು ಕಲಿಸಿದ ವಿದ್ಯೆ ಹಾಗೂ ಮಾರ್ಗದರ್ಶನದಿಂದ ಇಹ ಪರದ ವಿಜಯ ಸಾಧ್ಯ:ಸಾಲ್ಮರ ಸೈಯದ್

0

  • ಮಲೆಯ ಮುಅಲ್ಲಿಮ್ ಡೇ ಆಚರಣೆ ಕಾರ್ಯಕ್ರಮದಲ್ಲಿ, ನೂರುದ್ದೀನ್ ಸಾಲ್ಮರ ಹೇಳಿಕೆ

ಪುತ್ತೂರು : ಗುರುಗಳು ಕಲಿಸಿದ ವಿದ್ಯೆ ಹಾಗೂ ಮಾರ್ಗದರ್ಶನದಿಂದ ಇಹಪರದ ವಿಜಯ ಸಾಧ್ಯವೆಂದು, ಸೈಯದ್ ಮಲೆ ಜುಮ್ಮಾ ಮಸ್ಜಿದ್ ಇದರ ಅಧ್ಯಕ್ಷರಾದ, ನ್ಯಾಯವಾದಿ ನೂರುದ್ದೀನ್ ಸಾಲ್ಮರವರು, ಇಲ್ಲಿನ ಮಿಸ್ ಬಾಹುಲ್ ಹುದಾ ಮದರಸ ಸಭಾಂಗಣದಲ್ಲಿ ನಡೆದ ‘ಮುಅಲ್ಲಿಂ ಡೇ’ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಿಸ್ಬಾಹುಲ್ ಹುದಾ ಮದ್ರಸ ದಲ್ಲಿ, ಅಧ್ಯಾಫಕ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೂಂದಿಗೆ, ವಿಜೃಂಭಣೆಯಿಂದ ಆಚರಿಸಲಾಯಿತು.

ಧ್ವಜಾರೋಹಣವನ್ನು ‘ಸಮಸ್ತದ’ ಧ್ವಜ ಆರಿಸುವ ಮೂಲಕ ಸಯ್ಯಿದ್ ಮುಹಮ್ಮದ್ ತಂಙಳ್ ಸಾಲ್ಮಾರ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಸಯ್ಯಿದ್ ಅವರ ನೇತೃತ್ವದಲ್ಲಿ ಕೂಟ್ ಝಿಯಾರತ್ ನಡೆಸಲಾಯಿತು. ಸಭಾಕಾರ್ಯಕ್ರಮಕ್ಕೆ ಸದರ್ ಮುಅಲ್ಲಿಂ ಪಿ ಯಂ ಎ ಬಶೀರ್ ದಾರಿಮಿ ಮಾಡಾವು ಸ್ವಾಗತ ಹೇಳಿದರು. ಸಬೆಯ ಉದ್ಘಾಟನೆ ಯನ್ನು ಸ್ಥಳೀಯ ಖತೀಬರಾದ ಪಿ ಯಂ ಉಮರ್ ದಾರಿಮಿ ಸಾಲ್ಮರ ನಿರ್ವಹಿಸಿದರು. ಕಾರ್ಯಕ್ರಮ ದಲ್ಲಿ ಸಹಾಯಕ ಖತೀಬರಾದ ಅನ್ಸಾರುದ್ದೀನ್ ಕೌಸರಿ, ಅಧ್ಯಾಫಕರಾದ ಅಬ್ದುರ್ರ ಝಾಕ್ ಮುಸ್ಲಿಯಾರ್, ಅಯ್ಯೂಬ್ ಮುಸ್ಲಿಯಾರ್, ಕಾರ್ಯದರ್ಶಿ ಹಸನ್ ಇನ್ನಿತರ ಜಮಾಅತ್ ನೇತಾರರು ವಿಧ್ಯಾರ್ಥಿ ವಿಧ್ಯಾರ್ಥಿ ನಿಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here