ಸವಣೂರು ಕೆರೆಕೋಡಿ ಶೇಷಪ್ಪ ರೈಯವರಿಗೆ ಶ್ರದ್ಧಾಂಜಲಿ

0

  • ಶೇಷಪ್ಪ ರೈರವರ ಸರಳ ಬದುಕು ಸಮಾಜಕ್ಕೆ ಮಾದರಿ- ರಾಕೇಶ್ ರೈ ಕೆಡೆಂಜಿ

ಪುತ್ತೂರು: ಆ. 28ರಂದು ನಿಧನರಾದ ಸವಣೂರು ಕೆರೆಕೋಡಿ ನಿವಾಸಿ, ಕೃಷಿಕರಾದ ಪರಿಯಾಲಗುತ್ತು ಶೇಷಪ್ಪ ರೈರವರ ಉತ್ತರಕ್ರಿಯೆ ಸೆ.4ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಈ ಸಂದರ್ಭದಲ್ಲಿ  ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿರವರು ಮಾತನಾಡಿ ಶೇಷಪ್ಪ ರೈರವರು ಸಮಾಜದಲ್ಲಿ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ, ಆದರ್ಶ ಜೀವನ ನಡೆಸುತ್ತಿದ್ದರು. ಸಮಾಜದಲ್ಲಿ ಎಲ್ಲರೊಂದಿಗೆ ಸ್ನೇಹಪರ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. 80 ವರ್ಷಗಳ ಕಾಲ ಬದುಕು ಸಾಗಿಸಿದ ಶೇಷಪ್ಪ ರೈಯವರು ಓರ್ವ ನಾಟಕ ಕಲಾವಿದರಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ, ಕೃಷಿಕರಾಗಿ, ಸಾಮಾಜಿಕ ಚಿಂತನೆಯ ವ್ಯಕ್ತಿಯಾಗಿ ಶೇಷಪ್ಪ ರೈರವರ ಸಾರ್ಥಕ ಬದುಕು ಸಾಗಿಸಿ, ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಶೇಷಪ್ಪ ರೈ ಕೆರೆಕೋಡಿಯವರ ಮಕ್ಕಳಾದ ಮೋಹನ್ ರೈ ಕೆರೆಕೋಡಿ, ಬಾಲಚಂದ್ರ ರೈ ಕೆರೆಕೋಡಿ, ವಸಂತಿ ಶೆಟ್ಟಿ, ಆಶಾಲತಾ ರೈ, ಅಳಿಯಂದಿರಾದ ಗಣೇಶ್ ಶೆಟ್ಟಿ ಕಲ್ಪಾಜೆ, ಗಣೇಶ್ ರೈ ಕುಕ್ಕುಂದೂರು, ಸೊಸೆಯಂದಿರಾದ ಚಂದ್ರಕಲಾ ಎಂ. ರೈ, ಶೋಭಾ ಬಿ.ರೈ ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮುಖಂಡರುಗಳು, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here