ಕೊಳ್ತಿಗೆ ಯುವಕ ಮಂಡಲದಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ,ಸನ್ಮಾನ

0

ಪುತ್ತೂರು: ಕೊಳ್ತಿಗೆ ಯುವಕ ಮಂಡಲ ಹಾಗೂ ಆದಿಶಕ್ತಿ ಮಹಿಳಾ ಮಂಡಲ ಇದರ ಸಹಯೋಗದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸಕು ಕುಡಿಕೆ ಉತ್ಸವ ಪೆರ್ಲಂಪಾಡಿಯಲ್ಲಿ ನಡೆಯಿತು. ಬೆಳಿಗ್ಗೆ ಪುಟಾಣಿ ಮಕ್ಕಳಿಂದ ಕಾರ್ಯಕ್ರಮದ ಉದ್ಘಾಟನೆ ನಡೆದು ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

5 ವರ್ಷದ ಕೆಳಗಿನ ಮಕ್ಕಳಿಗೆ ಶ್ರೀಕೃಷ್ಣನ ವೇಷ ಹಾಕುವ ಸ್ಪರ್ಧೆ ನಡೆದಿದ್ದು 19 ಪುಟಾಣಿ ಮಕ್ಕಳು ಭಾಗವಹಿಸಿದ್ದರು. ಪುರುಷರಿಗಾಗಿ ಮುಕ್ತ ಕಬಡ್ಡಿ ಪಂದ್ಯಾಟ ನಡೆದು ಪ್ರಥಮ ಬಹುಮಾನವನ್ನು ಸಂತ ಫಿಲೋಮಿನಾ ಕಾಲೇಜಿನ ತಂಡ ಪಡೆದಿದ್ದು ದ್ವಿತೀಯ ಬಹುಮಾನವನ್ನು ಕೆಎಫ್‌ಡಿಸಿ ಸುಳ್ಯ ಪಡೆದುಕೊಂಡಿತು.

ಯುವಕ ಮಂಡಲದ ಅಧ್ಯಕ್ಷ ಭರತ್‌ರಾಜ್ ಕುದ್ಕುಳಿಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆದು ಅತಿಥಿಗಳಾಗಿ ಕೊಳ್ತಿಗೆ ಗ್ರಾಪಂ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೆರೆಮೂಲೆ, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ.ಆರ್.ಲಕ್ಷ್ಮಣ ಗೌಡ ಕುಂಟಿಕಾನ, ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಸಂತ ಕುಮಾರ್ ರೈ ದುಗ್ಗಳ, ಶ್ರೀ ಷಣ್ಮುಖದೇವ ಭಜನಾ ಮಂಡಳಿ ಅಧ್ಯಕ್ಷ ಮಂಜುನಾಥ ದುಗ್ಗಳ, ಆದಿಶಕ್ತಿ ಮಹಿಳಾ ಮಂಡಲದ ಅಧ್ಯಕ್ಷ ಮಮತಾ ಗೋಳಿತ್ತಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 75 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಕೆ.ಆರ್.ಲಕ್ಷ್ಮಣ ಗೌಡ ಕುಂಟಿಕಾನರವರನ್ನು ಯುವಕ ಮಂಡಲದ ವತಿಯಿಂದ ಸನ್ಮಾನಿಸಲಾಯಿತು. ಯುವಕ ಮಂಡಲದ ಕಾರ್ಯದರ್ಶಿ ವಿಜೇಶ್ ರೈ ಕೆಳಗಿನಮನೆ ಸ್ವಾಗತಿಸಿ,ಆದಿಶಕ್ತಿ ಮಹಿಳಾ ಮಂಡಲದ ಕಾರ್ಯದರ್ಶಿ ವಿಶಾಲಾಕ್ಷಿ ರೈ ವಂದಿಸಿದರು. ಅಶೋಕ್ ಒರ್ಕೊಂಬು, ಪ್ರವೀಣ್ ಜಿ.ಕೆ, ವಿನೋದ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ವಿಶೇಷ ಆಕರ್ಷಣೆ


ಶ್ರೀ ಷಣ್ಮುಖದೇವ ಭಜನಾ ಮಂಡಳಿ ಮತ್ತು ಯಕ್ಷಗಾನ ಕಲಾಕೂಟ ಇದರ ವತಿಯಿಂದ ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಗಣೇಶ ವಿಗ್ರಹದ ಶೋಭಾಯಾತ್ರೆಯಲ್ಲಿ ಯುವಕ ಮಂಡಲದ ವತಿಯಿಂದ ಬೃಹತ್ ಆಂಜನೇಯನ ಆಕರ್ಷಕ ಟ್ಯಾಬ್ಲೋ ಗಮನ ಸೆಳೆಯಿತು.

LEAVE A REPLY

Please enter your comment!
Please enter your name here