ಕೃಷ್ಣನಗರ ಅಂಗನವಾಡಿ ಕಾರ್ಯಕರ್ತೆಗೆ ಬಿಳ್ಕೋಡುಗೆ , ಧ್ವಜಸ್ತಂಭ ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೃಷ್ಣನಗರ ಅಂಗನವಾಡಿಯಲ್ಲಿ  32 ವರ್ಷ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಶಿಕ್ಷಕಿ ,ಕೃಷ್ಣನಗರ ನಿವಾಸಿ ಸೀತಾರತ್ನ ಕೆ ಇವರನ್ನು ಸೆ.5 ರಂದು ಅಂಗನವಾಡಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೀಳ್ಕೊಡಲಾಯಿತು.


ಬಾಲ ವಿಕಾಸ ಸಮಿತಿ , ಶಹರಿ ಸಂಘ ಹಾಗೂ ಸ್ತ್ರಿ ಶಕ್ತಿ ಸಂಘ ಇದರ ವತಿಯಿಂದ ಶಾಲು , ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜೊತೆಯಲ್ಲಿ ಅದೇ ಅಂಗನವಾಡಿಯ ನಿವೃತ್ತ ಸಹಾಯಕಿ ಭವಾನಿ ಕೃಷ್ಣನಗರ ಇವರನ್ನು ಕೂಡ ಸ್ತ್ರಿ ಶಕ್ತಿ ಸಂಘದಿಂದ ಸನ್ಮಾನಿಸಲಾಯಿತು.

ಧ್ವಜಸ್ತಂಭ ಕೊಡುಗೆ :
ಅಂಗನವಾಡಿ ಕೇಂದ್ರಕ್ಕೆ  ಎಸ್‌ ಬಿ ಐ ಬ್ಯಾಂಕ್  ನಿವೃತ್ತ ಉದ್ಯೋಗಿ ಚೋಮ ನಾಯ್ಕ ಇವರು ಧ್ವಜಸ್ತಂಭವನ್ನು ಕೊಡುಗೆಯಾಗಿ ನೀಡಿದರು.

ನಗರಸಭಾ ಸದಸ್ಯ , ಚಿಕ್ಕಮುಡ್ನೂರು ಹಾಲು ಸೊಸೈಟಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು , ಮಾಜಿ ನಗರಸಭಾಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ , ನಗರಸಭಾ ಸದಸ್ಯೆ ಲೀಲಾವತಿ , ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶಶಿಕಲಾ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹರಿಣಾಕ್ಷಿ , ನಿವೃತ್ತ ಸಿಡಿಪಿಓ ಶಾಂತಿ ಹೆಗ್ಡೆ , ಆರೋಗ್ಯ ಇಲಾಖೆಯ ಮೀನಾಕ್ಷಿ , ಮಕ್ಕಳು, ಪೋಷಕರು, ಮೊದಲಾದವರು ಉಪಸ್ಥಿತರಿದ್ದರು.
ಅಂಗನವಾಡಿ ಸಹಾಯಕಿ ಶಾಲಿನಿ ಪ್ರಾರ್ಥಿಸಿದರು. ಶೀಲಾ ಜಯರಾಮ್‌ ಸ್ವಾಗತಿಸಿ, ಸ್ವಾತಿ ಕಾರ್ಯಕ್ರಮ ನಿರೂಪಿಸಿ , ಆಶಾ ಕಾರ್ಯಕರ್ತೆ ತುಳಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.