ನೆಲ್ಯಾಡಿ ಗ್ರಾ.ಪಂ.ಜಮಾಬಂದಿ ಸಭೆ

0

ನೆಲ್ಯಾಡಿ: ಗ್ರಾಮ ಪಂಚಾಯತ್‌ನ 2021-22ನೇ ಸಾಲಿನ ಜಮಾಬಂದಿ ಸಭೆ ಸೆ.೬ರಂದು ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆಯಿತು.

ದ.ಕ.ಜಿ.ಪಂ.ಮಂಗಳೂರು ಇಲ್ಲಿನ ಸಹಾಯಕ ಯೋಜನಾಧಿಕಾರಿ ಡೆನ್ಜಿಲ್ ಫೆಲಿಕ್ಸ್ ಡಿ.ಸೋಜರವರು ಜಮಾಬಂದಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯತ್‌ನ ಲೆಕ್ಕಪತ್ರಗಳ ದಾಖಲೆ ಪರಿಶೀಲನೆ ನಡೆಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೇತನಾ, ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಂಜಿನಿಯರ್ ಎನ್.ಎಸ್.ಹುಕ್ಕೇರಿ, ಗ್ರಾ.ಪಂ.ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಮಹಮ್ಮದ್ ಇಕ್ಬಾಲ್, ಯಾಕೂಬ್ ಪಡುಬೆಟ್ಟು, ಜಯಲಕ್ಷ್ಮೀಪ್ರಸಾದ್, ಪುಷ್ಪಾ ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಮಂಜುಳ ಎನ್.,ಸ್ವಾಗತಿಸಿದರು. ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು. ಸಿಬ್ಬಂದಿಗಳಾದ ಗಿರೀಶ್, ಸೋಮಶೇಖರ್, ಅಬ್ದುಲ್‌ರಹಿಮಾನ್, ಭವ್ಯ, ಲಲಿತಾ, ಲೀಲಾವತಿಯವರು ಸಹಕರಿಸಿದರು. ಸಭೆ ಬಳಿಕ ಕಾಮಗಾರಿಗಳ ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಲಾಯಿತು.

LEAVE A REPLY

Please enter your comment!
Please enter your name here