ನೆಲ್ಯಾಡಿ: ಮಹಾವಿಷ್ಣು ಗೆಳೆಯರ ಬಳಗ ಪಡುಬೆಟ್ಟು ಮತ್ತು ಊರ ಹತ್ತು ಸಮಸ್ತರ ಆಶ್ರಯದಲ್ಲಿ ‘ಕೆಸರ್‌ಡೊಂಜಿ ದಿನ’ ಸ್ಥಳೀಯರಿಗೆ ಆಟೋಟ ಸ್ಪರ್ಧೆ ಸೆ.೪ರಂದು ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದ ಗದ್ದೆಯಲ್ಲಿ ನಡೆಯಿತು.
ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಆದಿತ್ಯ ಆಚಾರ್‌ರವರು ಉದ್ಘಾಟಿಸಿದರು. ಮಹಾವಿಷ್ಣು ಗೆಳೆಯರ ಬಳಗದ ಅಧ್ಯಕ್ಷ ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ನೆಲ್ಯಾಡಿ ಎಸ್‌ಸಿಎ ಬ್ಯಾಂಕ್ ವ್ಯವಸ್ಥಾಪಕ ರಮೇಶ ನಾಯ್ಕ್ ಕಲ್ಲಳಿಕೆ ಅಂಕಣ ಉದ್ಘಾಟಿಸಿದರು. ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಕೆ.ಸುಬ್ರಹ್ಮಣ್ಯ ಶಬರಾಯ, ನೆಲ್ಯಾಡಿಯ ಉದ್ಯಮಿ ಸತೀಶ್ ಕೆ.ಎಸ್.ದುರ್ಗಾಸ್ರೀ, ನಿವೃತ್ತ ಮುಖ್ಯಗುರು ಶೀನಪ್ಪ ನಾಯ್ಕ್ ಬರೆಗುಡ್ಡೆ, ನೆಲ್ಯಾಡಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಅತಿಥಿಗಳಾಗಿ ಭಾಗವಹಿಸಿದ್ದರು. ಮಹಾವಿಷ್ಣು ಗೆಳೆಯರ ಬಳಗದ ಕಾರ್ಯದರ್ಶಿ ರಮೇಶ ಶೆಟ್ಟಿ ಸ್ವಾಗತಿಸಿ, ಸಂದೇಶ್ ಶೆಟ್ಟಿ ಆಮುಂಜ ವಂದಿಸಿದರು. ಹರಿಶ್ಚಂದ್ರ ರೈ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಸುರೇಶ್ ಪಡಿಪಂಡ ಹಾಗೂ ದೀಪಕ್ ನೆಲ್ಯಾಡಿ ಸ್ಪರ್ಧಾ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ:
ಸಂಜೆ ನೆಲ್ಯಾಡಿ ಸುಬ್ರಹ್ಮಣ್ಯ ವಿಲಾಸ ಹೋಟೆಲ್‌ನ ಮಾಲಕ ಸುಬ್ರಹ್ಮಣ್ಯ ಆಚಾರ್ಯರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಾರ್ಪಳ-ಕುತ್ರಾಡಿ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯ, ಆಡಳಿತ ಮಂಡಳಿ ಅಧ್ಯಕ್ಷ ಸುಂದರ ಗೌಡ ತ್ರಿಜಾಲು, ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿ ಕಾಂತಪ್ಪ ಗೌಡ ಪೂವಾಜೆ, ರಾಮನಗರ ಹಾ.ಉ.ಮ.ಸ.ಸಂಘದ ಅಧ್ಯಕ್ಷೆ ಆಶಾ ಜೋಗಿತ್ತಾಯ, ನಿವೃತ್ತ ಸೈನಿಕ ಮೋಹನಚಂದ್ರ ಗೌಡ ಬೀದಿಮಜಲು ಮತ್ತಿತರರು ಉಪಸ್ಥಿತರಿದ್ದರು.