ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ತೆರೇಜ್ ಎಂ ಸಿಕ್ವೇರಾ…! ಪಾಪೆಮಜಲು ಶಾಲೆಗೆ ತೆರಳಿ ಪ್ರಶಸ್ತಿ ಪದಾನ ಮಾಡಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು

0

ಪುತ್ತೂರು: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದ ಅರಿಯಡ್ಕ ಗ್ರಾಮದ ಪಾಪೆಮಜಲು ಸ.ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ತೆರೇಜ್ ಎಂ ಸಿಕ್ವೇರಾ ಅವರಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸೆ.೭ರಂದು ಪಾಪೆಮಜಲು ಶಾಲೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಶಾಲೆಗೆ ತೆರಳಿದ ಡಿಡಿಪಿಐ ಸುಧಾಕರ ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮತ್ತು ಶಿಕ್ಷಣ ಇಲಾಖೆಯವರು ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.

ಸೆ.5ರಂದು ಪುತ್ತೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತೆರೇಜ್ ಎಂ ಸಿಕ್ವೇರಾರವರು ಗೈರಾಗಿದ್ದರು. ಅನಾರೋಗ್ಯದಿಂದ ಅವರು ಗೈರಾಗಿದ್ದು ಪ್ರಶಸ್ತಿಯನ್ನು ಅವರ ಮನೆಗೆ ಮುಟ್ಟಿಸಲಾಗುವುದು ಎಂದು ಸಮಾರಂಭಗದಲ್ಲಿ ಘೋಷಿಸಲಾಗಿತ್ತು. ಆದರೆ ತೆರೇಜ್ ಎಂ ಸಿಕ್ವೇರಾ ಅವರು ಅನಾರೋಗ್ಯದಿಂದ ಗೈರು ಹಾಜರಾದುದಲ್ಲ ಅವರನ್ನು ಸಮಾರಂಭಕ್ಕೆ ಬಂದು ಪ್ರಶಸ್ತಿ ಪಡೆದುಕೊಳ್ಳದಂತೆ ಇಬ್ಬರು ಶಿಕ್ಷಕರ ಮೂಲಕ ತಡೆಯಲಾಗಿದೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ತೆರೇಜ್ ಎಂ ಸಿಕ್ವೆರಾ ಅವರೇ ಪ್ರತಿಕ್ರಿಯಿಸಿ ನಾನು ಪ್ರಶಸ್ತಿಗಾಗಿ ಕೆಲಸ ಮಾಡಿಲ್ಲ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಪ್ರಶಸ್ತಿಗೆ ಆಯ್ಕೆ ಮಾಡಿದ ಮೇಲೆ ಈ ರೀತಿಯ ಅವಮಾನ ಮಾಡಿರುವುದು ಬೇಸರ ತಂದಿದೆ, ಏನಿದ್ದರೂ ದೇವರು ನೋಡಿಕೊಳ್ಳಬಹುದು ಎಂದು ಪ್ರತಿಕ್ರಿಯೆ ನೀಡಿದ್ದರು. ನಂತರದ ಬೆಳವಣಿಗೆಯಲ್ಲಿ ಸೆ.೬ರಂದು ಪಾಪೆಮಜಲು ಶಾಲೆಯಲ್ಲಿ ಎಸ್‌ಡಿಎಂಸಿ ವತಿಯಿಂದ ತುರ್ತು ಸಭೆ ನಡೆಸಿ ಘಟನೆಯನ್ನು ಖಂಡಿಸಿ ಸಾಮೂಹಿಕ ರಾಜೀನಾಮೆ ನೀಡುವ ಬಗ್ಗೆ ತೀರ್ಮಾನಿಸಲಾಗಿದ್ದು. ಶಿಕ್ಷಕಿಗೆ ಸಾರ್ವಜನಿಕ ಸಮಾರಂಭ ಏರ್ಪಡಿಸಿ ಪ್ರಶಸ್ತಿ ನೀಡಬೇಕು, ನ್ಯಾಯ ಸಿಗದೇ ಇದ್ದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟಿಸುವುದಾಗಿ ಮತ್ತು ಪ್ರಸಕ್ತ ನಡೆದ ಘಟನಾವಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸ್ಪಷ್ಟನೆ ನೀಡಬೇಕೆಂದೂ ಆಗ್ರಹಿಸಿದ್ದರು. ಸಭೆಯ ಬಳಿಕ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿ ದೂರು ಮತ್ತು ಮನವಿ ನೀಡಿದ್ದರು.

ಇದೀಗ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಹೋಗಿ ಪ್ರಶಸ್ತಿ ಪ್ರದಾನ ಮಾಡಿದ್ದು ಶಿಕ್ಷಕಿ ತೆರೇಜ್ ಎಂ ಸಿಕ್ವೇರಾ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಶಿಕ್ಷಕಿ ತೆರೇಜ್ ಎಂ ಸಿಕ್ವೇರಾರವರು ಸೆ.೫ರಂದು ಪ್ರಶಸ್ತಿ ಪಡೆಯಲು ಹೋಗದೇ ಗೈರಾಗಿರುವುದು ಹಾಗೂ ಆ ಬಳಿಕ ಶಾಲೆಯಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪಾಪೆಮಜಲು ಶಾಲೆಯ ಮುಖ್ಯಶಿಕ್ಷಕಿ ತೆರೆಸಾರವರು ಪ್ರಶಸ್ತಿ ಸ್ವೀಕರಿಸದಂತೆ ತಡೆದಿರುವುದು ಖಂಡನೀಯ

LEAVE A REPLY

Please enter your comment!
Please enter your name here