ನರಿಮೊಗರು ಗ್ರಾ.ಪಂ ಜಮಾಬಂಧಿ ಸಭೆ

0

ಪುತ್ತೂರು: ನರಿಮೊಗರು ಗ್ರಾ.ಪಂ ಜಮಾಬಂಧಿ ಸಭೆ ಸೆ.೭ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ಮೀನುಗಾರಿಕಾ ಉಪನಿರ್ದೇಶಕರಾದ ಡಾ.ಸುಶ್ಮಿತಾ ರಾವ್ ಜಮಾಬಂಧಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಸಭೆಯಲ್ಲಿ ೨೦೨೧-೨೨ನೇ ಸಾಲಿನ  ಗ್ರಾಮ ಪಂಚಾಯತ್‌ನ ಲೆಕ್ಕಪತ್ರಗಳ, ದಾಖಲೆಗಳ ಮತ್ತು ಕಾಮಗಾರಿಗಳ ತಪಾಸಣೆ ನಡೆಯಿತು.

ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಎ, ಪಿಡಿಓ ರವಿಚಂದ್ರ ಯು, ಕಾರ್ಯದರ್ಶಿ ಶೇಖ್ ಖಲಂದರ್ ಆಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಸಿಬ್ಬಂದಿ ಮಾಧವ ಹಾಗೂ ಇತರರು ಸಹಕರಿಸಿದರು.

LEAVE A REPLY

Please enter your comment!
Please enter your name here