ಕೌಕ್ರಾಡಿ ಗ್ರಾ.ಪಂ.ಜಮಾಬಂದಿ ಸಭೆ

0

ನೆಲ್ಯಾಡಿ: ಕೌಕ್ರಾಡಿ ಗ್ರಾಮ ಪಂಚಾಯಿತಿಯ 2021-22ನೇ ಸಾಲಿನ ಜಮಾಬಂದಿ ಸಭೆ ಸೆ.9ರಂದು ಬೆಳಿಗ್ಗೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ರವರು ಜಮಾಬಂದಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯತ್‌ನ ಲೆಕ್ಕ ದಾಖಲೆ ಪುಸ್ತಕ ಪರಿಶೀಲನೆ ನಡೆಸಲಾಯಿತು. ಗ್ರಾ.ಪಂ.ಅಧ್ಯಕ್ಷೆ ವನಿತಾ ಎಂ., ಉಪಾಧ್ಯಕ್ಷೆ ಜಿ.ಭವಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರುಗಳಾದ ಲೋಕೇಶ್ ಬಿ., ಹನೀಫ್ ಎಂ., ಉದಯಕುಮಾರ್ ಗೌಡ, ಸುಧಾಕರ ಜಿ., ದೇವಕಿ, ದಿನೇಶ್‌ಕುಮಾರ್ ಬಿ., ವಿಶ್ವನಾಥ ಗೌಡ, ಮಹೇಶ್ ಪಿ., ಕುರಿಯಾಕೋಸ್ ಟಿ.ಎಂ.ಯಾನೆ ರೋಯಿ ಟಿ.ಎಂ. ಮಾಜಿ ಅಧ್ಯಕ್ಷ ಇಬ್ರಾಹಿಂ ಎಂ.ಕೆ., ಹಾಗೂ ಗ್ರಾಮಸ್ಥರು, ವಿವಿಧ ಯೋಜನೆಗಳ ಫಲಾನುಭವಿಗಳು ಉಪಸ್ಥಿತರಿದ್ದರು. ಪಿಡಿಒ ಮಹೇಶ್ ಜಿ.ಎನ್.ಸ್ವಾಗತಿಸಿದರು. ಸಿಬ್ಬಂದಿಗಳಾದ ಕಸ್ತೂರಿ, ಪುರಂದರ ಕೆ., ಮಂಜುಳ, ವಿದ್ಯಾಶ್ರೀ, ರೂಪಲತಾ, ಪ್ರೇಮ ಕೆ.ಸಿ., ವಿಮಲ ಸಹಕರಿಸಿದರು. ಸಭೆಯ ಬಳಿಕ ಕಳೆದ ಸಾಲಿನಲ್ಲಿ ನಿರ್ವಹಿಸಿದ ಕಾಮಗಾರಿಗಳ ತಪಾಸಣೆ ನಡೆಸಲಾಯಿತು.

LEAVE A REPLY

Please enter your comment!
Please enter your name here