ಅಕ್ರಮ ಸಕ್ರಮ ಅರ್ಜಿಗೆ ಪೋರ್ಜರಿ ಸಹಿ ಹಾಕಿದ ಪ್ರಕರಣ: ನೆ.ಮು. ಗ್ರಾಮದ ಭಾಸ್ಕರ ರೈ, ಜಯರಾಜ್ ಕೆ., ಕೆ.ಜಯರಾಮ ಗೌಡರಿಂದ ಪುತ್ತೂರು ಉಪವಿಭಾಗಾಧಿಕಾರಿಗೆ ದೂರು

0

ಪುತ್ತೂರು : ಅಕ್ರಮ ಸಕ್ರಮಕ್ಕೆ ಸಂಬಂಧಿಸಿ ಕಂದಾಯ ಇಲಾಖೆಯಲ್ಲಿ ಪೋರ್ಜರಿ ಸಹಿ ಹಾಕಿ ದಾಖಲೆ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂದಿಸಿ ನೆಟ್ಟಣಿಗೆ ಮುಡೂರು ಗ್ರಾಮದ ನಿವಾಸಿಗಳಾದ ಕೊಪ್ಪಳ ನಿವಾಸಿ ಭಾಸ್ಕರ ರೈ, ಕತ್ತಿಬೈಲು ನಿವಾಸಿ ಜಯರಾಜ್ ಕೆ. ಮತ್ತು ಕತ್ತಿಬೈಲು ಕೆ.ಜಯರಾಮ ಗೌಡರವರು ಪ್ರತ್ಯೇಕವಾಗಿ ಪುತ್ತೂರು ಉಪವಿಭಾಗಾಧಿಕಾರಿಗೆ ಸೆ.10ರಂದು ದೂರು ನೀಡಿದ್ದಾರೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಮಾನ ಪಾಟಾಳಿ ಅವರ ಕುಟುಂಬದವರಾದ ಬೇಬಿ, ಲೋಕೇಶ್, ಅಚ್ಚುತ, ಹಾಗೂ ಕೇಶವರವರು ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಮಾನ ಪಾಟಾಳಿ ಅವರ ಪತ್ನಿ ಬೇಬಿ, ಪುತ್ರರಾದ ಲೋಕೇಶ್, ಅಚ್ಚುತ ಮತ್ತು ಕೇಶವ ರವರು ಸಲ್ಲಿಸಿದ ಅರ್ಜಿಗೆ ನಡಾವಳಿಗಳಲ್ಲಿ ಪಂಚನಾಮೆಯ ಸಾಕ್ಷಿದಾರರಾಗಿ ಕೆ.ಜಯರಾಮ ಗೌಡ ಅವರ ಫೋರ್ಜರಿ ಸಹಿ ಬಳಸಲಾಗಿದೆ. ಬೇಬಿ, ಲೋಕೇಶ್ ಮತ್ತು ಅಚ್ಚುತ ಅವರ ಅರ್ಜಿಗೆ ಸಂಬಂಧಿಸಿ ಭಾಸ್ಕರ ರೈ ಅವರ ಫೋರ್ಜರಿ ಸಹಿ ಮಾಡಲಾಗಿದೆ.

ಬೇಬಿ ಮತ್ತು ಲೋಕೇಶ್‌ರವರ ಅರ್ಜಿಗೆ ಸಂಬಂಧಿಸಿ ಜಯರಾಜ ಕೆ.ರವರ ಫೋರ್ಜರಿ ಸಹಿ ಬಳಸಿ ಫೋರ್ಜರಿ ದಾಖಲೆ ಸೃಷ್ಟಿಸಿರುವುದಾಗಿ ಆರೋಪಿಸಲಾಗಿದೆ.
ಅಕ್ರಮ ಸಕ್ರಮ ಅರ್ಜಿದಾರರು ನಮಗೆ ಪರಿಚಿತರಲ್ಲ. ಅದರಲ್ಲಿ ಹಾಕಿದ ಸಹಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಕಂದಾಯ ನಿರೀಕ್ಷಕ, ಗ್ರಾಮಕರಣಿಕ ಉಮೇಶ್ ಕಾವಡಿ ಹಾಗೂ ಉಗ್ರಾಣಿ ರಘುನಾಥ ಪಾಟಾಳಿ ದುರುದ್ದೇಶದಿಂದ ಈ ಅಕ್ರಮ ಸಕ್ರಮ ಅರ್ಜಿಯಲ್ಲಿ ನಮೂನಾ ವರದಿ ಮಾಡಿರುತ್ತಾರೆ. ಪಂಚನಾಮೆ ಮಾಡುವ ಸಂದರ್ಭ ಹಾಗೂ ತನಿಖಾ ವರದಿ ತಯಾರಿಸುವ ಸಂದರ್ಭ ನಾವು ಹಾಜರಿರಲಿಲ್ಲ ಅಲ್ಲದೆ ಸಹಿಯನ್ನೂ ಮಾಡಿರುವುದಿಲ್ಲ. ಈ ಫೋರ್ಜರಿ ದಾಖಲೆ ಸೃಷ್ಟಿಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿದೆ. ಆದುದರಿಂದ ಸದ್ರಿ ಅಕ್ರಮ ಸಕ್ರಮ ಅರ್ಜಿ/ಕಡತವನ್ನು ತರಿಸಿಕೊಂಡು ಸಂಬಂಧಿತ ಕಂದಾಯ ಇಲಾಖೆಯ ಸಿಬಂದಿ ಹಾಗೂ ಉಗ್ರಾಣಿ, ಗ್ರಾಮಕರಣಿಕರು, ಕಂದಾಯ ನಿರೀಕ್ಷಕರನ್ನು ಇಲಾಖಾ ತನಿಖೆ ಮಾಡಿ ಪೋರ್ಜರಿ ಸಹಿ ಹಾಕಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here