ಜ.22 ಕ್ಕೆ ಪುತ್ತೂರಿನಲ್ಲಿ ಶ್ರೀ ಆದಿ ಚುಂಚನಗಿರಿ ಬ್ರಹ್ಮೈಕ್ಯರಾದ ಶ್ರೀ ಬಾಲಗಂಗಾದರನಾಥ ಶ್ರೀಗಳ 78 ನೇ ಜಯಂತ್ಯೋತ್ಸವ – ಗ್ರಂಥ ಲೋಕಾರ್ಪಣೆ

0

ಜಿಲ್ಲಾ ಮಟ್ಟದ ಕಾರ‍್ಯಕ್ರಮದ ಪ್ರಥಮ  ಪೂರ್ವಭಾವಿ ಸಭೆಗೆ ನಿರೀಕ್ಷೆಗೂ ಮೀರಿ ಸೇರಿದ ಸಮಾಜಬಾಂಧವರು

1 ಲಕ್ಷ ಮಂದಿ ಸಮಾಜಬಾಂದವರು ಸೇರಿಸುವ ಗುರಿ

ಖರ್ಚಿನ ಜವಾಬ್ದಾರಿ ನಮ್ಮದು, ಸಂಖ್ಯೆಯ ಜವಾಬ್ದಾರಿ ನಿಮ್ಮದುಸಂಜೀವ ಮಠಂದೂರು

ಪುತ್ತೂರು: ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಮಠದ ಬ್ರಹ್ಮೈಕ್ಯ ಬಾಲಗಂಗಾಧರನಾಥ ಸ್ವಾಮಿಜಿಯವರ ಜಯಂತ್ಯೋತ್ಸವದ ಜಿಲ್ಲಾ ಮಟ್ಟದ ಕಾರ್ಯಕ್ರಮ ಜ.೨೨ ರಂದು ಪುತ್ತೂರಿನ ನಡೆಯಲಿದ್ದು ಇದರ ಪೂರ್ವ ಭಾವಿ ಸಭೆಯು ಸೆ.೧೦ ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮ ಜೋಡಣೆಗೆ ನಡೆದ ಪ್ರಥಮ‌ ಸಭೆಗೆ ನಿರೀಕ್ಷೆಗೂ ಮೀರಿ ಸಮಾಜಬಾಂಧವರು ಸೇರಿದ್ದರಿದ್ದರು.
ಬ್ರಹ್ಮೈಕ್ಯ ರಾದ ಬಾಲಗಂಗಾಧರನಾಥ ಶ್ರೀ ಗಳ ಜಯಂತ್ಯೋತ್ಸವ ಮತ್ತು ಶ್ರೀ ಗಳ ಕುರಿತು ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ವಿರಚಿತಗೊಂಡ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಸಮಿತಿ ಮತ್ತು ತಾಲೂಕು ಸಂಪರ್ಕದ ಕುರಿತು ಪ್ರಮುಖರು ಚರ್ಚಿಸಿದರು.
ಖರ್ಚಿನ ಜವಾಬ್ದಾರಿ ನಮ್ಮದು, ಸಂಖ್ಯೆಯ ಜವಾಬ್ದಾರಿ ನಿಮ್ಮದು :
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸುಳ್ಯ, ಪುತ್ತೂರು,ಬೆಳ್ತಂಗಡಿ ಭಾಗದಲ್ಲಿ ನಮ್ಮವರು ಬಹಳಷ್ಟು ಸಂಖ್ಯೆಯಲ್ಲಿ ಇದ್ದಾರೆ. ಆದರೆ ಕಾರ್ಯಕ್ರಮ ಯಶಸ್ವಿಗೆ ನಿತ್ಯ ನಿರಂತರ ಪ್ರವಾಸ ಮಾಡಬೇಕು.
ಖರ್ಚು ವೆಚ್ಚಗಳ ಜವಾಬ್ದಾರಿ ನಾನೆ ತೆಗೆದು ಕೊಳ್ಳುತ್ತೇನೆ.
ಸಂಖ್ಯೆಯ ದೃಷ್ಟಿಯಿಂದ ನೀವು ನೋಡಿ. ಒಟ್ಟು ಕಾರ್ಯಕ್ರಮ ಯಶಸ್ವಿ ಮಾಡುವ ದೃಷ್ಟಿಯಲ್ಲಿ ಎಲ್ಲರು ಕೆಲಸ ಮಾಡಬೇಕು. ದೊಡ್ಡ ಸ್ವಾಮೀಜಿಯವರ ಜಯಂತ್ಯೋತ್ಸವ ಒಳ್ಳೆಯ ರೀತಿಯಲ್ಲಿ ನಡೆದಿದೆ ಎಂಬ ಸಂದೇಶ ಹೋಗಬೇಕು. ನಮ್ಮ ಗುರಿ ೧ ಲಕ್ಷ ಜನರನ್ನು ಸೇರಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಇತರ ಸಮಾಜಕ್ಕೂ ಮಾದರಿ ಕಾರ್ಯಕ್ರಮವಾಗಬೇಕು. ಅದೇ ರೀತಿ ಕಾರ್ಯಕ್ರಮದ ಯಶಸ್ವಿಗೆ ಜಿಲ್ಲೆಯ ಪ್ರಮುಖರ ಸಭೆಯನ್ನು ಇಲ್ಲೇ ಕರೆಯಬೇಕು ಎಂದರು.
ತಾಲೂಕುಗಳನ್ನು ಸಂಪರ್ಕಿಸು ಕೆಲಸ ಆಗಬೇಕು:
ಒಕ್ಕಲಿಗ ಗೌಡ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಮಾಡುವಾಗ ಎಲ್ಲಾ ತಾಲೂಕುಗಳನ್ನು ಸಂಪರ್ಕಿಸುವ ಕೆಲಸ ಆಗಬೇಕೆಂದರು.
ರಾಜ್ಯಮಟ್ಟದಲ್ಲಿ ಹೆಸರು ಬರುವಂತಹ ಕಾರ್ಯಕ್ರಮವಾಗಬೇಕು:
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಅವರು ಮಾತನಾಡಿ ಒಟ್ಟು ಕಾರ್ಯಕ್ರಮ ರಾಜ್ಯಮಟ್ಟದಲ್ಲಿ ಹೆಸರು ತರುವಂತಹ ಕಾರ್ಯಕ್ರಮ ಆಗಬೇಕು. ಅದೇ ರೀತಿ ಕೆದಂಬಾಡಿ ರಾಮಯ್ಯ ಗೌಡರ ಮಂಗಳೂರಿನ ಕಾರ್ಯಕ್ರಮಕ್ಕೆ ಪುತ್ತೂರಿನಿಂದ ೫೦ ಸಾವಿರ ಸಂಖ್ಯೆ ಸೇರಬೇಕೆಂದರು.
ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು:
ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಯಶಸ್ವಿಗೆ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಮತ್ತು ನಾಯಕತ್ವ ಗುಣ ಬೆಳೆಸಲು ಸಮಾವೇಶದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶ್ರೀಗಳ ಜಯಂತ್ಯೋತ್ಸವ ಯಶಸ್ವಿಯಾಗಿ ನಡೆಯಬೇಕು. ಇದಕ್ಕಾಗಿ ಸಮಿತಿ ರಚನೆ ಮಾಡಬೇಕೆಂದರು.
ಯೋಗಿ ಆದಿತ್ಯನಾಥ್ ರನ್ನು ಕರೆಸುವ ಚಿಂತನೆ
ಸಭೆಯ ಆರಂಭದಲ್ಲಿ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ವಿ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ನಾಥ ಪಂಥದವರಾದ ಯೋಗಿ ಆದಿತ್ಯನಾಥ್ ಕರೆಸುವ ಚಿಂತನೆ ನಡೆಯಿತು. ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಮೆದು ಅವರು ಮಾತನಾಡಿ ಉತ್ಸಾಹಕ್ಕೆ ಪ್ರೋತ್ಸಾಹ ಸಿಗುವಂತಹ ಕೆಲಸ ಆಗಬೇಕು ಎಂದರು. ಸಂಘದ ಉಪಾಧ್ಯಕ್ಷ ಯು ಪಿ ರಾಮಕೃಷ್ಣ ಅವರು ಮಾತನಾಡಿ ಕೇವಲ ಹಿರಿಯರು ಮಾತ್ರವಲ್ಲ ಹುಡಗರನ್ನು ಎಬ್ಬಿಸುವ ಕೆಲಸ ಆಗಬೇಕು ಎಂದರು. ಪ್ರದೀಪ್ ಗೌಡ ಅರ್ವ ಗುತ್ತು ಅವರು ಮಾತನಾಡಿ ರಾಜ್ಯ ಮಟ್ಟದ ಸಮಾವೇಶ ಮಾಡಬಹುದು ಎಂದರು. ಯುವ ಗೌಡ ಸಂಘದ ಪ್ರವೀಣ್ ಕುಂಟ್ಯಾನ ಯುವ ಸಂಘದ ನೇತೃತ್ವದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಇವತ್ತೇ ಸಮಿತಿ ರಚನೆಗೆ ನಿರ್ಣಯ ತೆಗೆದು ಕೊಳ್ಳಬೇಕೆಂದರು.
ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಾಯ, ಸತೀಶ ಪಂಬಾರು, ಯತೀಶ್ ಕೊಚ್ಚಿ ಸೇರಿದಂತೆ ಹಲವಾರು ಮಂದಿ ಸಲಹೆ ಸೂಚನೆ ನೀಡಿದರು‌. ಸಭೆಯಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ವಿಟ್ಲ, ಬಂಟ್ವಾಳದ ಸಂಪರ್ಕಕ್ಕೆ ಸಮಿತಿ ರಚನೆ ಮಾಡಲಾಯಿತು.
ಒಕ್ಕಲಿಗ ಗೌಡ ಸೇವಾ ಸಂಘದ ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಪ್ರಧಾನ ಕಾರ್ಯದರ್ಶಿ ವಾರಿಜಾ, ಕಡಬ ತಾಲೂಕು ಅಧ್ಯಕ್ಷ ತಮ್ಮಯ್ಯ ಗೌಡ, ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು ವಂದಿಸಿದರು.

ಸೆ.೧೮ ಕ್ಕೆ ಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಭೆ
ಸ್ವಾಮೀಜಿಯವರ ನೇತೃತ್ವದಲ್ಲಿ ಪ್ರಥಮ ಸಭೆ ಪುತ್ತೂರಿನಲ್ಲಿ ಮಾಡಿ ಬಳಿಕ ಎಲ್ಲಾ ತಾಲೂಕು, ಗ್ರಾಮ ಸಂಪರ್ಕ ಕೆಲಸ ಮಾಡಬೇಕು. ಪ್ರವಾಸಕ್ಕೆ ದಿನಾಂಕ ಗೊತ್ತುಪಡಿಸುವ ಕಾರ್ಯಕ್ರಮ ಸ್ವಾಮೀಜಿಯವರು ತಿಳಿಸುತ್ತಾರೆ. ಸೆ.೧೮ ಕ್ಕೆ ಜಿಲ್ಲೆಯ ಸಭೆ ಸಂಜೆ ಗಂ.೪.೩೦ ಕ್ಕೆ ಇಲ್ಲಿ ಮಾಡೋಣ.
ಸಂಜೀವ ಮಠಂದೂರು, ಶಾಸಕರು ಪುತ್ತೂರು

ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಆಟೋಟ ಸ್ಪರ್ಧೆ ಆಮಂತ್ರಣ ಬಿಡುಗಡೆ
ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪುತ್ತೂರು ವಲಯದ ನೇತೃತ್ವದಲ್ಲಿ ಸೆ.೧೮ ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯದಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ನಡೆಯುವ ಆಟೋಟ ಸ್ಪರ್ಧಾ ಕಾರ್ಯಕ್ರಮಗಳ ಆಮಂತ್ರಣವನ್ನು ಶಾಸಕ ಸಂಜೀವ ಮಠಂದೂರು ಅವರು ಬಿಡುಗಡೆಕೊಳಿಸಬಹುದು. ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ, ವಲಯದ ಪ್ರಧಾನ ಕಾರ್ಯದರ್ಶಿ ಆನಂದ ಗೌಡ ತೆಂಕಿಲ, ಉಪಾಧ್ಯಕ್ಷ ಕಿಶೋರ್ ಮರಿಕೆ, ಕ್ರೀಡಾ ಕಾರ್ಯದರ್ಶಿ ಮೋಹನ್ ಗೌಡ ಕಬಕ, ಸಾಂಸ್ಕೃತಿಕ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here