ಮಿತ್ತೂರು ಹಿ.ಪ್ರಾ ಶಾಲಾ ಬಸ್ ಉದ್ಘಾಟನೆ:  ಶಾಲೆಯ ಅಭಿವೃದ್ಧಿಯಲ್ಲಿ ನನ್ನಿಂದಾಗುವ ಸಹಕಾರ ನೀಡುವೆ : ಸಂಜೀವ ಮಠಂದೂರು

0

ವಿಟ್ಲ: ಶಾಲೆಯ ವತಿಯಿಂದ ಬಸ್ಸಿನ ವ್ಯವಸ್ಥೆಯನ್ನು ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದಾಗಿ ಹಲವಾರು ವಿದ್ಯಾರ್ಥಿಗಳಿಗೆ ಪ್ರಯೋಜನವಾಗ
ಲಿದೆ. ಶಾಲೆಯ ಪ್ರತಿಯೊಂದೂ ಅಭಿವೃದ್ಧಿಯಲ್ಲಿ ನನ್ನಿಂದಾಗುವ ಸಹಕಾರವನ್ನು ಮಾಡುವುದಾಗಿ ಶಾಸಕರಾದ ಸಂಜೀವ ಮಠಂದೂರುರವರು ಭರವಸೆ ನೀಡಿದರು.



ಅವರು ಸೆ.೧೦ರಂದು ಮಿತ್ತೂರು ಉನ್ನತೀಕರಿಸಿದ ಹಿ.ಪ್ರಾ. ಶಾಲೆಯಲ್ಲಿ ನೂತನ ಬಸ್ ಅನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಗಳೆಲ್ಲ ಉತ್ತಮ ರೀತಿಯಲ್ಲಿ ಕಲಿತು ಸತ್ಪ್ರಜೆಗಳಾಗಿ ಬಾಳಿ. ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಬಹಳಷ್ಟು ಕೆಲಸಕಾರ್ಯಗಳನ್ನು ಮಾಡುತ್ತಿದೆ. ಶಾಲೆಯಲ್ಲಿ ಒಂದು ಅಡಿಕೆ ತೋಟವನ್ನು ನಿರ್ಮಿಸಿ ಶಾಲಾ ವಾಹನವನ್ನು ಇದೀಗಾಗಲೇ ಖರೀದಿ ಮಾಡಿರುವುದರ ಹಿಂದಿನ ಶ್ರಮವನ್ನು ಮೆಚ್ಚಲೇ ಬೇಕು. ಇಲ್ಲಿನ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರ ಶ್ರಮ ಇತರ ಶಾಲೆಗಳಿಗೆ ಮಾದರಿ. ಇದೀಗಾಗಲೇ ಶಾಲೆಗೆ ಕೊಠಡಿಯೊಂದನ್ನು ಮಂಜೂರು ಮಾಡಲಾಗಿದ್ದು ಹೆಚ್ಚುವರಿಗಾಗಿ ಒಂದು ಕೊಠಡಿ ಹಾಗೂ ಕಾಂಕ್ರಿಟ್ ರಸ್ತೆಯನ್ನು ಮುಂದಿನ ದಿನಗಳಲ್ಲಿ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ಸನ್ಮಾನ ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ.ಸುಧೀರ್ ಕುಮಾರ್ ಶೆಟ್ಟಿ, ಸದಸ್ಯರಾದ ಸಂಜೀವ, ಎಸ್.ಡಿ.ಎಂ.ಸಿ. ಅಧ್ಯಕ್ಷ ಆದಂ ಎಂ.ಎಂ.ಎಸ್., ಉಪಾಧ್ಯಕ್ಷರಾದ ಮಲ್ಲಿಕಾ ತಾರನಾಥ, ಸದಸ್ಯರಾದ ರವಿಕುಮಾರ್ ಕೂವೆತ್ತಿಲ, ಚಂದ್ರಹಾಸ, ಶಶಿಪ್ರಭ, ಯಶೋದ, ಅನಿತ, ಆದಂ ಹಂಝ, ಫಾರುಕ್, ತಾರನಾಥ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯೋಪಾದ್ಯಾಯರಾದ ಸರೋಜ ಎ. ಸ್ವಾಗತಿಸಿದರು, ಶಿಕ್ಷಕರಾದ ಸಂಜೀವರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here