ನಮಸ್ತೆ ಜೆಸಿಐ ಸಪ್ತಾಹದ 3ನೇ ದಿನ ಸೈಕಲ್ ಜಾಥಾ, ಕ್ರೀಡಾಕೂಟ;ಆರೋಗ್ಯಕ್ಕೂ, ಪರಿಸರಕ್ಕೂ ಬಹು ಉಪಕಾರಿ – ಡಾ.ದೀಪಕ್ ರೈ

0

ಪುತ್ತೂರು: ಸೆ.9 ರಿಂದ ಆರಂಭಗೊಂಡ ಪುತ್ತೂರು ಜೆಸಿಐಯ ಈ ವರ್ಷದ ನಮಸ್ತೆ ಜೇಸಿಐ ಸಪ್ತಾಹ -2022 ಕಾರ್ಯಕ್ರಮದ ಅಂಗವಾಗಿ ಸೆ. 11ರ ಮೂರನೆ ದಿನ ಸೈಕಲ್ ಜಾಥಾ ಮತ್ತು ಸದಸ್ಯರಿಗೆ ಒಳಾಂಗಣ ಕ್ರೀಡಾಕೂಟ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸೈಕಲ್ ಜಾಥಾಕ್ಕೆ ಬೆಳಿಗ್ಗೆ ಮಂಜಲ್ಪಡ್ಪು ಉದಯಗಿರಿ ಹೊಟೇಲ್ ಬಳಿ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ಜೇಸಿ ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು. ಸೈಕಲ್ ಜಾಥಾವು ದಿ ಪುತ್ತೂರು ಕ್ಲಬ್‌ನಲ್ಲಿ ಸಮಾರೋಪಗೊಂಡಿತ್ತು.


ಸೈಕಲ್ ಜಾಥಾವನ್ನು ಉದ್ಘಾಟಿಸಿದ ತಾಲೂಕು ಅರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ಮಾತನಾಡಿ ಆರೋಗ್ಯ ವೃದ್ಧಿ ಮತ್ತು ಪರಿಸರ ಮಾಲಿನ್ಯ ತಡೆಯಲು ಸೈಕ್ಲಿಂಗ್ ಬಹಳ ಉಪಕಾರಿ. ದೇಹಕ್ಕೆ ಹಲವಾರು ರೀತಿಯ ಆರೋಗ್ಯ ಲಾಭಗಳು ಕೂಡ ಸಿಗುವುದು ಜೊತೆಗೆ ಮಾನಸಿಕ ಒತ್ತಡವು ಕಡಿಮೆ ಆಗುತ್ತದೆ. ಈ ಕುರಿತು ಕೆಲವು ಕಡೆ ಸೈಕಲ್‌ನಲ್ಲಿ ದೇಶ ಸುತ್ತಿ ಜಾಗೃತಿ ಮೂಡಿಸುವವರಿದ್ದಾರೆ. ಈ ನಿಟ್ಟಿನಲ್ಲಿ ಪುತ್ತೂರು ಜೇಸಿಐ ಪುತ್ತೂರಿನಲ್ಲಿ ಪರಿಸರ ಜಾಗೃತಿ ಮತ್ತು ಆರೋಗ್ಯಕ್ಕೆ ಒತ್ತು ಕೊಟ್ಟು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಉತ್ತಮ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ರಿಸ್ಟೋಫರ್ ಸೈಕಲ್‌ನ ಮಾಲಕ ಮನೋಜ್ ಡಯಾಸ್ ಅವರು ಸೈಕಲ್ ಜಾಥಾ ಪಥದ ಕುರಿತು ತಿಳಿಸಿದ ಅವರು ಬೊಳುವಾರು, ಬಸ್‌ನಿಲ್ದಾಣ, ದರ್ಬೆ ಅಶ್ವಿನಿ ಸರ್ಕಲ್‌ನಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಬಳಿಕ ದರ್ಬೆಯಾಗಿ ದಿ ಪುತ್ತೂರು ಕ್ಲಬ್‌ಗೆ ತೆರಳುವುದು ಎಂಬ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜೇಸಿಐ ಅಧ್ಯಕ್ಷ ಶಶಿರಾಜ್ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮೋಹನ್, ನಮಸ್ತೆ ಪ್ರೋಜೆಕ್ಟ್ ಡೈರೆಕ್ಟರ್ ಕಾರ್ತಿಕ್, ಜೇಸಿಐ ಪಶುಪತಿ ಶರ್ಮ, ಮಾಜಿ ಅಧ್ಯಕ್ಷ ಸೂರಪ್ಪ ಗೌಡ, ವೇಣುಗೋಪಾಲ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಮಕ್ಕಳು, ಮಹಿಳೆಯರು, ಹಿರಿಯರು ಸೇರಿದಂತೆ ಸುಮಾರು 50 ಕ್ಕೂ ಅಧಿಕ ಮಂದಿ ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here