ಹಾವೇರಿಯಲ್ಲಿ ನಡೆದ ಅಗ್ನಿಪಥ ರ‌್ಯಾಲಿಯಲ್ಲಿ ವಿದ್ಯಾಮಾತಾ ಅಕಾಡೆಮಿಯ ನಾಲ್ಕು ಜನ ವಿದ್ಯಾರ್ಥಿಗಳು ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಗ್ನಿಪಥ ಸೇನಾ ನೇಮಕಾತಿ ರ‌್ಯಾಲಿಯು ಸೆಪ್ಟೆಂಬರ್ 1 ರಂದು ಹಾವೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದ್ದು, ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಸೇನಾ ನೇಮಕಾತಿ ಸಂಬಂಧಿಸಿದಂತೆ ಪೂರ್ವತಯಾರಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ತರಬೇತಿ ಪಡೆದ ನಾಲ್ಕು ಜನ ವಿದ್ಯಾರ್ಥಿಗಳು ರ‌್ಯಾಲಿಯಲ್ಲಿ ದೈಹಿಕ ಸಾಮರ್ಥ್ಯ ಮತ್ತು ಸದೃಢತೆ, ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ಅಗ್ನಿಪಥ ಯೋಜನೆಯಡಿಯಲ್ಲಿ ನೇಮಕಾತಿಗೆ ಅರ್ಜಿಸಲ್ಲಿಸುವುದಾಗಿನಿಂದ ರ‌್ಯಾಲಿವರೆಗು ವಿವಿಧ ಹಂತಗಳಲ್ಲಿ ನಿವೃತ್ತ ಸೈನಿಕರು ಮತ್ತು ದೈಹಿಕ ಶಿಕ್ಷಕರ ನಿರ್ದೇಶನದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು, ಇಲ್ಲಿ ಮೈದಾನ ತರಬೇತಿ ಅಲ್ಲದೇ ವಿದ್ಯಾಮಾತಾ ಅಕಾಡೆಮಿಯಲ್ಲಿ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ವಿದ್ಯಾರ್ಥಿಗಳು ಅಗ್ನಿಪಥ ರ‌್ಯಾಲಿಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಗಿತ್ತು. ಅಲ್ಲದೇ ಹಾವೇರಿಗೆ ರ‌್ಯಾಲಿಗೆ ತೆರಳಲು ಪುತ್ತೂರಿನ ಶಾಸಕರು ಉಚಿತವಾಗಿ ಬಸ್ ವ್ಯವಸ್ಥೆಯನ್ನು ಅಭ್ಯರ್ಥಿಗಳಿಗೆ ಮಾಡಿದ್ದು, 95 ಅಭ್ಯರ್ಥಿಗಳು ರ‌್ಯಾಲಿಗೆ ತೆರಳಿದ್ದರು. ಅಲ್ಲದೇ ಅಭ್ಯರ್ಥಿಗಳಿಗೆ ವಸತಿ, ಊಟದ ವ್ಯವಸ್ಥೆಯನ್ನು ವಿದ್ಯಾಮಾತಾ ಅಕಾಡೆಮಿಯು ಹಾವೇರಿ ಜಿಲ್ಲಾ ಜಯಕರ್ನಾಟಕ ಸಂಘಟನೆಯ ಮೂಲಕ ವ್ಯವಸ್ಥೆ ಮಾಡಿತು.

ಅಂತಿಮ ಸುತ್ತಾದ ಲಿಖಿತ ಪರೀಕ್ಷೆಯ ಹಂತಕ್ಕೆ ರ‌್ಯಾಲಿಯಲ್ಲಿ ಉತ್ತೀರ್ಣರಾದ ನಾಲ್ಕು ಅಭ್ಯರ್ಥಿಗಳು ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಕೊಡಿಪ್ಪಾಡಿಯ ಭವಿಷ್, ಕಾವಿನ ಅವಿನ್ ಎಂ, ಕಡಬದ ಭರತ್, ಮಡಂತ್ಯಾರಿನ ಅಜಿತ್ ಆಯ್ಕೆಯಾದ ಅಭ್ಯರ್ಥಿಗಳಾಗಿದ್ದಾರೆ. ಇವರಿಗೆ ವಿದ್ಯಾಮಾತಾ ಅಕಾಡೆಮಿಯ ಗೌರವ ದೈಹಿಕ ಶಿಕ್ಷಕರಾದ ದಯಾನಂದ ರೈ ಕೋರ್ಮಂಡ, ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ದೈಹಿಕ ಶಿಕ್ಷಕರಾದ ಮೋನಪ್ಪ, ಬೆಳ್ತಂಗಡಿ ತಾಲೂಕಿನವರಾದ ನಿವೃತ್ತ ಯೋಧ ಉಮೇಶ್ ಬಂಗೇರ ರವರು ತರಬೇತಿ ನೀಡಿದ್ದರು.

ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ ನಾಲ್ಕು ಜನ ವಿದ್ಯಾರ್ಥಿಗಳು ಅಗ್ನಿಪಥ ರ‌್ಯಾಲಿಯಲ್ಲಿ ಪಾಸಾಗಿರುವುದು ನಮಗೆ ಖುಷಿ ತಂದಿದೆ. ಕಳೆದ 2 ತಿಂಗಳುಗಳಿಂದ ನಾವು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ನಮ್ಮ ಭಾಗದಿಂದ ಸೇನಾ ನೇಮಕಾತಿ ಭಾಗವಹಿಸುವುದಿಲ್ಲ ಅನ್ನುವ ಕೂಗಿನ ಮಧ್ಯೆ ನೂರಾರು ಅಭ್ಯರ್ಥಿಗಳು ನಮ್ಮ ಜಾಗೃತಿ ಮತ್ತು ಮಾಹಿತಿ ಕಾರ್ಯಾಗಾರಗಳಿಂದಾಗಿ ಭಾಗವಹಿಸುವಂತೆ ಆಗಿರುವುದು ತುಂಬಾ ಖುಷಿ ಕೊಡುವ ವಿಚಾರವಾಗಿದೆ. ಉಚಿತ ಬಸ್ ವ್ಯವಸ್ಥೆ ಮಾಡಿದ ಪುತ್ತೂರಿನ ಶಾಸಕರಾದ  ಸಂಜೀವ ಮಠಂದೂರುರವರಿಗೆ ನಾವು ಅಭಿನಂದನೆಯನ್ನು ಸಲ್ಲಿಸುತ್ತೇವೆ. ಮುಂದೆಯೂ ನಮ್ಮ ಪ್ರಯತ್ನಗಳಲ್ಲಿ ಎಲ್ಲಾ ಸಾರ್ವಜನಿಕರ, ಅಧಿಕಾರಿಗಳ ಸಹಕಾರವನ್ನು ಬಯಸುತ್ತೇವೆ ಎಂದು ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ರವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಐ. ಎ. ಎಸ್ ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾ ಅಕಾಡೆಮಿ ಪುತ್ತೂರು ಹಿಂದೂಸ್ಥಾನ್ ಬಿಲ್ಡಿಂಗ್, ಎ.ಪಿ.ಎಂ.ಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು.ದ.ಕ.574201 ಫೋನ್ ನಂ: 96204 68869/ 9148935808 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.