ಮರದ ರೆಂಬೆ, ಕೊಂಬೆ ಕಡಿದ ಪ್ರಕರಣ – ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖಾಧಿಕಾರಿಗಳು

0

ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಓ, ನಿರ್ದೇಶಕರ ವಿರುದ್ಧ ಕೇಸು ದಾಖಲು

ಪುತ್ತೂರು: ರಸ್ತೆ ಬದಿಯಲ್ಲಿದ್ದ ಮರದ ರೆಂಬೆ ಕೊಂಬೆಗಳನ್ನು ಅಕ್ರಮವಾಗಿ ಕಡಿದಿರುವುದನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಒ ಸಹಿತ ನಾಲ್ವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾ ಅಧಿಕಾರಿ ಲಕ್ಷ್ಮಣ ಹಾಗೂ ನಿರ್ದೇಶಕರಾದ ರವೀಂದ್ರ ಭಂಡಾರಿ, ಚಂದ್ರ ಮತ್ತು ಪ್ರಕಾಶ್ ಅವರ ವಿರುದ್ಧ ಅಕ್ರಮ ಮರ ಕಡಿದಿರುಳಿಸಿದ ಆರೋಪದಡಿ ಅರಣ್ಯ ಇಲಾಖೆಯ ವಿವಿಧ ಕಾಯ್ದೆಯಡಿ ಅಧಿಕಾರಿಗಳು ಸುಮೊಟೋ ಕೇಸು ದಾಖಲಿಸಿಕೊಂಡಿದ್ದಾರೆ. ಪುತ್ತೂರಿನಿಂದ ಪಾಣಾಜೆಗೆ ಸೆಂಟ್ಯಾರ್ ಮೂಲಕ ಹಾದು ಹೋಗುವ ರಸ್ತೆಯ ಆರ್ಲಪದವು ಜಂಕ್ಷನ್ ಬಳಿಯ ಆಲದ ಮರದ ರೆಂಬೆ ಕೊಂಬೆಗಳನ್ನು ಕಡಿದುರುಳಿಸಲಾಗಿರುವ ನಿಟ್ಟಿನಲ್ಲಿ ಸ್ವಯಂ ಪ್ರೇರಣೆಯಿಂದ ತನಿಖೆ ಆರಂಭಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಘದ ಕಟ್ಟಡಕ್ಕೆ ತೊಂದರೆ ಆಗುತ್ತಿತ್ತು

ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದವರೆಗೆ ಅದರ ಕೊಂಬೆಗಳು ಬಾಗಿತ್ತು. ಇದರಿಂದ ಕಟ್ಟಡಕ್ಕೆ ಬಹಳ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಕಡಿಸಲಾಗಿದೆ. ಮಾತ್ರವಲ್ಲ ವಿದ್ಯುತ್ ಕಂಬ ಮತ್ತು ಲೈನ್‌ಗಳಿಗೆ ಅದು ತಾಗುತ್ತಿತ್ತು. ಗಾಳಿ ಬಂದಾಗ ವಿದ್ಯುತ್ ತಂತಿಗಳು ಶಾರ್ಟ್‌ಆಗಿ ನಮ್ಮ ಕಂಪ್ಯೂಟರ್ ಮತ್ತೀತರ ಉಪಕರಣ ನಾಶವಾದ ಕಾರಣ ನಾವು ಕಡಿಸಿದ್ದೇವೆ.

ಲಕ್ಷ್ಮಣ ನಾಯ್ಕ ಕೆ.
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪಾಣಾಜೆ ಪ್ರಾ.ಕೃ.ಪತ್ತಿನ ಸಹಕಾರಿ ಸಂಘ
————————

LEAVE A REPLY

Please enter your comment!
Please enter your name here