ಪುತ್ತೂರು : ಶಾಂತಿಗೋಡು ಗ್ರಾಮದ ಪುಚ್ಚೆತ್ತಡ್ಕ ದಿ.ಬಾಬು ಗೌಡರವರ ಪತ್ನಿ ಶತಾಯುಷಿ ನಾಗಮ್ಮ(100ವ.)ರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಸೆ.10ರಂದು ನಿಧನರಾದರು. ಮೃತರು ಪುತ್ರರಾದ ಸುಂದರ ಗೌಡ, ರತ್ನಾಕರ ಗೌಡ, ಪುತ್ರಿಯರಾದ ಲೀಲಾವತಿ, ಸೀತಾ, ಲಲಿತ, ಪುಷ್ಪ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.