ಕೊಂಬಾರು: ಅಪ್ರಾಪ್ತೆಗೆ ಗರ್ಭದಾನ – ಆರೋಪಿ ಮಾವ ಬಂಧನ

0

ಕಡಬ: ಅಪ್ರಾಪ್ತೆಯೊಬ್ಬರಿಗೆ ಗರ್ಭದಾನ ಮಾಡಿದಾತನನ್ನು ಕಡಬ ಪೋಲೀಸರು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ. ಕೊಂಬಾರು ಗ್ರಾಮದ ರುಕ್ಮಯ್ಯ ಬಂಧಿತ ಆರೋಪಿ. ಸಂತ್ರಸ್ತೆಯಾಗಿರುವ ಹದಿನೇಳು ವರ್ಷದ ಯುವತಿ ಆರೋಪಿಗೆ ಸಂಬಂಧದಲ್ಲಿ ಸೊಸೆಯಾಗಿದ್ದಾರೆ.

ರುಕ್ಮಯ್ಯನಿಗೆ ಐದು ಜನ ಮಕ್ಕಳಿದ್ದು. ಮಕ್ಕಳನ್ನು ನೋಡಿಕೊಳ್ಳಲೆಂದು ಮೂರು ವರ್ಷದ ಹಿಂದೆ ಯುವತಿ ಆತನ ಮನೆಗೆ ಬಂದು ವಾಸವಾಗಿದ್ದರು. ಆರೋಪಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ಒಂದು ದಿನ ಮನೆಯಲ್ಲಿ ಎಲ್ಲರೂ ಮಲಗಿದ ಸಮಯ ಯುವತಿಯನ್ನು ಮನೆಯ ಹಾಲ್‌ನ ಪಕ್ಕದಲ್ಲಿರುವ ರೂಮಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಈ ವಿಷಯವನ್ನು ಯಾರಿಗೂ ಹೇಳಬೇಡ ನಿನ್ನನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ, ನೀನು ಏನಾದರೂ ಈ ವಿಷಯವನ್ನು ಹೇಳಿದರೆ ನಿನ್ನನ್ನು ಮನೆಯಿಂದ ಓಡಿಸಿಬಿಡುತ್ತೇನೆ ಎಂದು ಬೆದರಿಸಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಯುವತಿ ಮನೆಯಿಂದ ಹೋಗಬೇಕಾಗುತ್ತದೆ ಎಂದು ಹೆದರಿ ಈ ಬಗ್ಗೆ ಯಾರಲ್ಲಿಯೂ ಹೇಳಿರುವುದಿಲ್ಲ. ಆರೋಪಿತನು 4-5 ಬಾರಿ ಆಗಾಗ ಬೆದರಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದು, ಕೊಂಬಾರು ಗ್ರಾಮಕ್ಕೆ ಬರುವ ಆಶಾ ಕಾರ್ಯಕರ್ತೆ ಮೂಲಕ ವಿಷಯ ಬೆಳಕಿಗೆ ಬಂದಿತ್ತು. ಆಶಾಕಾರ್ಯಕರ್ತೆ ಪ್ರಗ್ನೆನ್ಸಿ ಟೆಸ್ಟ್ ಕಿಟ್ ತೆಗೆದುಕೊಂಡು ಪರೀಕ್ಷೆ ಮಾಡಿದಾಗ ಯುವತಿ ಗರ್ಭಿಣಿಯಾಗಿರುವುದು ದೃಡಪಟ್ಟಿತ್ತು.
ಯುವತಿ ನೀಡಿದ ದೂರಿನಂತೆ ಕಡಬ ಪೋಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

LEAVE A REPLY

Please enter your comment!
Please enter your name here