ಕೋಡಿಂಬಾಳ: ನಾಪತ್ತೆಯಾಗಿದ್ದ ಮಹಿಳೆ ಸಂಬಂಧಿಕರ ಮನೆಯಲ್ಲಿ ಪತ್ತೆ

0

ಕಡಬ:ನಾಪತ್ತೆಯಾಗಿದ್ದ ಕೋಡಿಂಬಾಳ ಗ್ರಾಮದ ಕುದುಂಬೂರು ನಿವಾಸಿ ವೀಣಾರವರು ಧರ್ಮಸ್ಥಳದಲ್ಲಿ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುದುಂಬೂರು ಪದ್ಮಯ್ಯ ಪೂಜಾರಿಯವರ ಪತ್ನಿ ವೀಣಾ ಅವರು ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದರು. ಆದರೆ, ಅವರು ಧರ್ಮಸ್ಥಳದಲ್ಲಿ ಸಂಬಂಧಿಕರ ಮನೆಯಲ್ಲಿರುವುದಾಗಿ ಮಾಹಿತಿ ತಿಳಿದು ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here