ಇರ್ದೆ ಕ್ಲಸ್ಟರ್ ಪ್ರತಿಭಾ ಕಾರಂಜಿ- ಪೇರಲ್ತಡ್ಕ ಶಾಲೆಗೆ ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ

0

ನಿಡ್ಪಳ್ಳಿ; ಇರ್ದೆ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಸ.ಹಿ.ಪ್ರಾ ಶಾಲೆ ಇರ್ದೆ ಇಲ್ಲಿ ಸೆ.14 ರಂದು ನಡೆಯಿತು. ಹಿರಿಯರ ವಿಭಾಗದಲ್ಲಿ ಪೇರಲ್ತಡ್ಕ ಶಾಲೆಯ ವಿದ್ಯಾರ್ಥಿಗಳಾದ ಧಾರ್ಮಿಕ ಪಠಣ ಸಂಸ್ಕೃತದಲ್ಲಿ 7 ನೇ ತರಗತಿಯ ಪೂರ್ವಿ.ಕೆ ಗೌಡ, ಧಾರ್ಮಿಕ ಪಠಣ ಅರೇಬಿಕ್ 7 ನೇಯ ಅಹ್ಮದ್ ಹಾಶಿಂ, ಅಭಿನಯ ಗೀತೆ 7 ನೇಯ ಪೂರ್ವಿ.ಕೆ ಗೌಡ, ಆಶು ಭಾಷಣ 7 ನೇಯ ವೀಕ್ಷಾ, ಹಾಸ್ಯ 6 ನೇಯ ಯತನ್, ಕನ್ನಡ ಭಾಷಣ 7 ನೇಯ ಆಸೀಲ ಶಮ್ಲ್ತತ್ ಇವರು ಪ್ರಥಮ ಸ್ಥಾನ ಪಡೆದಿರುತ್ತಾರೆ.
ಹಿರಿಯರ ವಿಭಾಗದಲ್ಲಿ ಇಂಗ್ಲೀಷ್ ಕಂಠಪಾಠ 7 ನೇಯ ಫಾತಿಮಾತ್ ಸಹ್ಲಾ, ಹಿಂದಿ ಕಂಠಪಾಠ 7 ನೇಯ ಆಸೀಲ ಶಮ್ಲತ್, ಕಥೆ ಹೇಳುವುದು 7 ನೇಯ ವೀಕ್ಷಾ, ಚಿತ್ರಕಲೆ 7 ನೇಯ ನೇಹಾ ಎಂ.ಪಿ ಇವರು ದ್ವೀತಿಯ ಸ್ಥಾನ ಪಡೆದಿರುತ್ತಾರೆ. ಲಘು ಸಂಗೀತ ತರಣ್ ಪಿ.ಎಂ ತೃತೀಯ ಸ್ಥಾನ ಪಡೆದಿರುತ್ತಾರೆ.
ಕಿರಿಯರ ವಿಭಾಗದಲ್ಲಿ ಕನ್ನಡ ಕಂಠಪಾಠ 4 ನೇಯ ನಸ್ರೀನ, ಇಂಗ್ಲೀಷ್ ಕಂಠಪಾಠ 4 ನೇಯ ಆಸಿಯಾ ಅಮ್ನ.ಕೆ, ಧಾರ್ಮಿಕ ಪಠಣ ಅರೇಬಿಕ್ 4 ನೇಯ ಇಬ್ರಾಹಿಂ ಹಾಶಿರ್, ಕ್ಲೆಮಾಡೆಲಿಂಗ್  4 ನೇಯ ಪೂರ್ಣೇಶ್.ಎಸ್.ಪಿ ಇವರು ಪ್ರಥಮ ಸ್ಥಾನ ಪಡೆದಿರುತ್ತಾರೆ. ಧಾರ್ಮಿಕ ಪಠಣ ಸಂಸ್ಕೃತ ಬಿ.ಕೀರ್ತಿ ಶೆಟ್ಟಿ, ಕಥೆ ಹೇಳುವುದು 3 ನೇಯ ಪ್ರಾದ್ಯಾ.ಪಿ.ಕೆ, ಚಿತ್ರಕಲೆ 3 ನೇಯ ಆಯಿಶ ಮಾಝೀಯ.ಎಂ.ಪಿ, ಅಭಿನಯ ಗೀತೆ 3 ನೇಯ ಪ್ರಾದ್ಯಾ.ಪಿ.ಕೆ, ಆಶುಭಾಷಣ 4 ನೇಯ ಆಸಿಯ ಅಮ್ನ.ಕೆ ಇವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಲಘುಸಂಗೀತ  4 ನೇಯ ಭೂಮಿಕಾ ತೃತೀಯ ಸ್ಥಾನ ಪಡೆದಿರುತ್ತಾರೆ ಎಂದು ಪೇರಲ್ತಡ್ಕ ಶಾಲಾ ಮುಖ್ಯ ಶಿಕ್ಷಕಿ  ಜಾನಕಿ.ಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here