60 ವರ್ಷದಿಂದ ಬೆಳಕು ಕಾಣದ ಮನೆಗೆ ರೋಟರಿ ಸೆ೦ಟ್ರಲ್ ನಿಂದ ಸೋಲಾರ್ ಲೈಟ್ ಕೊಡುಗೆ

0

ಪುತ್ತೂರು: ಕಳೆದ 60 ವರ್ಷದಿಂದ ಬೆಳಕು ಕಾಣದ ಲಕ್ಷ್ಮಿ ಎಂಬ ಮಹಿಳೆಯ ಮನೆಗೆ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇವರ ವತಿಯಿಂದ ಸ.16 ರಂದು ಉಚಿತ ಸೋಲಾರ್ ಲೈಟ್ ಅಳವಡಿಸುವ ಕಾರ್ಯ ನಡೆಯಿತು.

ಪದ್ಮಾ ಸೋಲಾರ್ ನ ಮಾಲಕ ಹಾಗೂ ರೋಟರಿ ಸೆಂಟ್ರಲ್ ನ ಮೆಂಬರ್ ಶಿಪ್ ಡೆವಲಪ್ ಮೆ೦ಟ್ ಚೇರ್ ಮ್ಯಾನ್ ಪದ್ಮನಾಭ ಶೆಟ್ಟಿಯವರು ಸೋಲಾರ್ ಲೈಟ್ ಅನ್ನು ಪ್ರಾಯೋಜಿಸಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಸೆ೦ಟ್ರಲ್ ಅದ್ಯಕ್ಷ ಮೊಹಮ್ಮದ್ ರಫೀಕ್ ದರ್ಬೆ, ಉಪಾದ್ಯಕ್ಷ ಅಶೋಕ್ ನಾಯ್ಕ್, ನಿಕಟಪೂರ್ವ ಅಧ್ಯಕ್ಷ ನವೀನ್ ಚಂದ್ರ ನಾಯ್ಕ್, ಇಂಟರ್ ನ್ಯಾಶನಲ್ ಸರ್ವಿಸ್ ನಿರ್ದೇಶಕ ಕವನ್ ನಾಯ್ಕ್ ,ಯೂತ್ ಸರ್ವಿಸ್ ನಿರ್ದೇಶಕ ರಾಕೇಶ್ ಶೆಟ್ಟಿ ಪಿ , ತಿಂಗಳ ಸಯೋಜಕರಾದ ಪುರುಶೊತ್ತಮ್ ಶೆಟ್ಟಿ ಮತ್ತು ಶಿವರಾಂ ಎಮ್ ಎಸ್ ರವರು ಭಾಗವಹಿಸಿದರು.

LEAVE A REPLY

Please enter your comment!
Please enter your name here