ಮುಗುರು ತೆಲಿಕೆ ಖ್ಯಾತಿಯ ನಿಡ್ಯ ರಾಜೇಂದ್ರ ಆರಿಗರ ಕವನ ಸಂಕಲನದ ಬಿಡುಗಡೆ

0

ಪುತ್ತೂರು : ಉಜಿರೆಯ ಮುಗುರು ಪ್ರೋ. ನಾ.ಉಜಿರೆ (ನಾಗರಾಜ ಪೂವಣಿ)ರವರ ನಿವಾಸ ‘ಆಶಿಯಾನ’ದಲ್ಲಿ ಮುಗುರು ತೆಲಿಕೆಯ ಖ್ಯಾತಿಯ ಕೋಡಿಂಬಾಡಿ ನಿಡ್ಯ ರಾಜೇಂದ್ರ ಆರಿಗರ ಕವನ ಸಂಕಲನ ಕೃತಿ ‘ನೆನಪು’ ಶಿಕ್ಷಕರ ದಿನದಂದು ಬಿಡುಗಡೆಯಾಯಿತು. ಪ್ರೊ.ನಾಗರಾಜ ಪೂವಣಿ (ನಾ. ಉಜಿರೆ) ಯವರು ಪುಸ್ತಕ ಬಿಡುಗಡೆಗೊಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ|ಉದಯಕುಮಾರ್ ಇರ್ವತ್ತೂರು ಹಾಗು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ನಿವೃತ್ತ ಉಪಾನ್ಯಾಸಕಿ ಡಾ|ರಾಜಲಕ್ಷ್ಮಿ ದಂಪತಿ, ಉಜಿರೆ ಎಸ್.ಡಿ.ಎಮ್ ಸ್ನಾತಕೋತ್ತರ ಕಾಲೇಜಿನ ಪ್ರತಿಕೋದ್ಯಮ ವಿಭಾಗ ಮುಖ್ಯಸ್ಥ ಡಾ|ಭಾಸ್ಕರ ಹೆಡ್ಗೆ, ಎಸ್.ಡಿ.ಎಂ. ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಪ್ರೋ.ದಿನೇಶ್ ಚೌಟ ಭಾಗವಹಿಸಿದರು. ಮಂಗಳೂರಿನ ನ್ಯಾಯವಾದಿ ಕೋಡಿಂಬಾಡಿ ಬಾರಿಕೆ ಅಶೋಕ ಅರಿಗರು ಕೃತಿಯ ಬಗ್ಗೆ ಹಾಗು ರಾಜೇಂದ್ರ ಆರಿಗರ ಸಾಧನೆಯ ಬಗ್ಗೆ ಅನಿಸಿಕೆಗಳನ್ನು ಹೇಳಿದರು. ಶಿಕ್ಷಕರನ್ನು ವಿಶೇಷವಾಗಿ ಗೌರವಿಸಲಾಯಿತು. ಪ್ರಕಾಶ್ಚಂದ್ರ ಕುಂಬುರ್ಗ, ಸರಸ್ವತಿ ನಾ.ಉಜಿರೆ, ರೇಖಾ ದಿನೇಶ್ ಚೌಟ ಮತ್ತು ರಾಜೇಂದ್ರ ಆರಿಗರ ಪುತ್ರಿ ಆಕರ್ಷ ಆರಿಗ ಅತಿಥಿಗಳನ್ನು ಸ್ವಾಗತಿಸಿದರು. ಪಟ್ಟೆ ಕುಟುಂಸ್ಥರ ಪರವಾಗಿ ಪಟ್ಟೆಗುತ್ತು ಭರತಕುಮಾರ ಆರಿಗ ಮತ್ತು ಕುಟುಂಬಸ್ಥರು ರಾಜೇಂದ್ರ ಆರಿಗ ದಂಪತಿಗಳನ್ನು ಫಲಪುಷ್ಪ ಶಾಲು ಹಾಕಿ ಗೌರವಿಸಿದರು. ಬಿ.ಸುದರ್ಶನ್ ಜೈನ್ ವಂದಿಸಿದರು.

LEAVE A REPLY

Please enter your comment!
Please enter your name here