ಉಜಿರೆ: ಅಂತರಾಷ್ಟ್ರೀಯ ವಾಹನ ಚಾಲಕರ ದಿನಾಚರಣೆಯ ಪ್ರಯುಕ್ತ, ಪುತ್ತೂರು ರೋಟರಿ ಕ್ಲಬ್ ನಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ

0

ಪುತ್ತೂರು: ಪಿ.ಸಿ, ಪೈ & ಕೊ. ಉಜಿರೆ (IOCL – Dealer) ರೋಟರಿ ಕ್ಲಬ್ ಪುತ್ತೂರು ಇವರ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ವಾಹನ ಚಾಲಕರ ದಿನಾಚರಣೆಯ ಪ್ರಯುಕ್ತ ಕೆ. ಎಂ.ಸಿ. ಆಸ್ಪತ್ರೆ ಅತ್ತಾವರ, ಮಂಗಳೂರು ಇವರಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ ಉಜಿರೆ ಪಿ. ಸಿ. ಪೈ& ಕೊ. ಪೆಟ್ರೋಲ್ ಪಂಪ್ ನಲ್ಲಿ ಸೆ.16ರಂದು ನಡೆಯಿತು. ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ್ ಪಿಬಿ ಪುತ್ತೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆಯನ್ನು ವಹಿಸಿದರು.

ಹರ್ಬರ್ಟ್, ಕೆಎಂಸಿ ಆಸ್ಪತ್ರೆ ಮಂಗಳೂರು ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಎ. ಜೆ.ರೈ ರೋಟರಿ ಜಿಲ್ಲೆ 3181 ಜೋನ್ 5 ರ ಅಸಿಸ್ಟೆಂಟ್ ಗವರ್ನರ್ ರವರು ಉಚಿತ ಅರೋಗ್ಯ ತಪಾಸಣೆ ಕಾರ್ಯಕ್ರಮದ ಬಗ್ಗೆ ಶುಭಾಶಯದ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ  ಡಾ.ಶ್ರೀಪ್ರಕಾಶ್  ಮಾತನಾಡಿ ಜನವರಿ 14  2023 ರಂದು ಪುತ್ತೂರಿನಲ್ಲಿ ಉದ್ಘಾಟನೆಗೊಳ್ಳಲಿರುವ ಪುತ್ತೂರು ರೋಟರಿ ಚಾರಿಟೇಬಲ್ ಕಣ್ಣಿನ ಆಸ್ಪತ್ರೆಯ  ಬಗ್ಗೆ ಘೋಷಣೆ ಮಾಡಿದರು.

ಕಾರ್ಯಕ್ರಮದ ಸಂಯೋಜಕರು ಪಿ.ಸಿ ಪೈ & ಕೋ ಇಂಡಿಯಾ ನ್ ಆಯಿಲ್ ಉಜಿರೆ ಇದರ ಮಾಲಕರದ ರೋಟರಿಯನ್ ವಾಮನ ಪೈ ಮತ್ತು ಕೆಎಂಸಿ ಆಸ್ಪತ್ರೆ ಯ ವೈದ್ಯರ ತಂಡದ ಸದಸ್ಯರು ಉಪಸ್ಥಿತರಿದ್ದರು. ದಾಮೋದರ  ಪ್ರಾರ್ಥನೆ ಮಾಡಿದರು, ಅಧ್ಯಕ್ಷರು ಸ್ವಾಗತಿಸಿ , ಡಾ. ಶ್ರೀ ಪ್ರಕಾಶ್ ರವರು ವಂದನಾರ್ಪಣೆಗೈದರು. 180 ಜನ ವಾಹನ ಚಾಲಕರು ವೈದ್ಯಕೀಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಂಡರು.

LEAVE A REPLY

Please enter your comment!
Please enter your name here