ಬೀರ್‍ನಹಿತ್ಲು ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ

0

ಪುತ್ತೂರು : ಅಶೋಕ್ ಎಂಟರ್‌ಪ್ರೈಸಸ್ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ, ಬನ್ನೂರು ಗ್ರಾಮ ಪಂಚಾಯತ್ ವತಿಯಿಂದ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ, ಅಶ್ವಫ್ರೆಂಡ್ಸ್ ಬೀರ್‍ನಹಿತ್ಲು, ಬೀರ್‍ನಹಿತ್ಲು ಶಾಲಾಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ ನಡೆಯಿತು.

ಗ್ರಾಮ ಒನ್ ನಾಗರಿಕಾ ಸೇವಾ ಕೇಂದ್ರದ ಮಾಲಕ ಅಶೋಕ್ ಮತ್ತು ಬೀರ್‍ನಹಿತ್ಲು ಆರೋಗ್ಯ ಕ್ಷೇಮ ಕೇಂದ್ರದ ಸಿ.ಎಚ್.ಒ ಸುಶ್ಮಾ ಮಾಹಿತಿ ನೀಡಿದರು. ಕಾರ್ಡ್ ನೋಂದಣಿ ನಡೆಯಿತು.

ಗ್ರಾಮ ಪಂಚಾಯತ್ ಸದಸ್ಯ ತಿಮ್ಮಪ್ಪ ಪೂಜಾರಿ, ರತ್ನಾಕರ ಪ್ರಭು, ಆಶಾ ಕಾರ್ಯಕರ್ತೆಯರಾದ ಚಂದ್ರಾವತಿ, ಸಂಧ್ಯಾ, ಬೀರ್‍ನಹಿತ್ಲು ಶಾಲಾ ಮುಖ್ಯಗುರು ಪುಷ್ಪಾ ಕೆ., ಸಹಶಿಕ್ಷಕಿ ಮೋಹಿನಿ, ಚೈತ್ರ ಅನಂತಿಮಾರು ಸಹಕರಿಸಿದರು. ಕಲಿಯುಗ ಸೇವಾ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಸ್ವಾಗತಿಸಿ ಸಂಪತ್ ಕುಮಾರ್ ಜೈನ್ ವಂದಿಸಿದರು.

LEAVE A REPLY

Please enter your comment!
Please enter your name here