ಟೈಲರಿಂಗ್ ವೃತ್ತಿಯಿಂದ ಜೀವನ ರಥದ ನಿರ್ವಹಣೆಯೆಂದೂ ಸವಾಲೆನಿಸದು, ಕಲ್ಲಾರೆಯಲ್ಲಿ ಅಪ್ಸರಾ ಟೈಲರಿಂಗ್ ತರಬೇತಿ ಕೇಂದ್ರ ಉದ್ಘಾಟಿಸಿ ,ಗೋಪಿನಾಥ ಶೆಟ್ಟಿ ಅಭಿಪ್ರಾಯ

0

ಪುತ್ತೂರು : ನಮ್ಮ ಜೀವನದಲ್ಲೂ ಕೆಲವೊಂದು ಅವಕಾಶಗಳು ಬರುತ್ತವೆ ,ಅದನ್ನು ನಮ್ಮ ನೇರಕ್ಕೆ ಪರಿವರ್ತಿಸಿಕೊಳ್ಳಬೇಕು .ಟೈಲರಿಂಗ್ ,ಟೆಕ್ಸ್ ಟೈಲ್ ಬಗ್ಗೆ ಏನೇನೂ ತಿಳಿಯದ ಜನರು ಬಹು ಏತ್ತರಕ್ಕೆ ಬೆಳೆದಿದ್ದಾರೆ.

ಸರಕಾರಿ ಕೆಲಸ ಪಡೆಯುವಲ್ಲಿ ಮೋಸ ಹೋಗೋ ಪ್ರಮೇಯ ಅತೀ ಹೆಚ್ಚು , ಸರಕಾರಿ ಉದ್ಯೋಗದ ಮೋಹ ಬಿಟ್ಟು ,ತನ್ನ ಕಾಲ ಮೇಲೆ ನಿಂತರೆ ,ಯಶಸ್ಸು ಕಂಡಿತ ಹಾಗೂ ಸ್ವಾವಲಂಬಿಗಳೂ ಕೂಡ ಜೊತೆಗೆ ಜೀವನವೆಂಬ ರಥವನ್ನು ಸರಳ , ಸುಲಭವಾಗಿ ನಡೆಸಬಹುದೆಂದು ,ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಗೋಪಿನಾಥ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಕಲ್ಲಾರೆ ಕಾವೇರಿ ಸಂಕೀರ್ಣದ ಮಹಡಿಯಲ್ಲಿ ,ಸುಮಾರು 25 ವರುಷದಿಂದ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಳ್ಳಾರೆ ಮಹಾಬಲ ರೈ ಮಾಲಕತ್ವದ ಅಪ್ಸರಾ ಲೇಡಿಸ್ ಟೈಲರ್ ಇದರ, ಟೈಲರಿಂಗ್ ಹಾಗೂ ಎಂಬ್ರಾಯಿಡರಿ ತರಬೇತಿ ಕೇಂದ್ರ ವನ್ನು ಸೆ.20 ರಂದು ದೀಪ ಪ್ರಜ್ವಲನೆ ನೆರವೇರಿಸೋ ಮೂಲಕ ಉದ್ಘಾಟಿಸಿ ,ಮಾತನಾಡಿ , ಸಂಸ್ಥೆಯ ಅಭಿವೃದ್ದಿಗೆ ಹಾರೈಸಿದರು.


ರಾಷ್ಟ್ರೀಯ ಸ್ವಯಂ ಸೇವಕ ಸಂಘ ,ದಕ್ಷಿಣಾ ಪ್ರಾಂತ್ ಸೇವಾ ಪ್ರಮುಖ್ ಸುಭಾಶ್ಚಂದ್ರ ಕಳಂಜ ,ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ ಸಂದರ್ಭೋಚಿತ ಮಾತನಾಡಿ ಸಂಸ್ಥೆಯ ಶ್ರಯೋಭಿವೃದ್ದಿಗೆ ಹರಸಿದರು. ಸರ್ಜಿಕಲ್ಸ್ ಆ್ಯಂಡ್ ಫಾರ್ಮಸ್ಯೂಟಿಕಲ್ ವಿತರಕ ಸಂಸ್ಥೆ, ಪೈ ಸರ್ಜಿಕಲ್ಸ್ ಮಾಲಕ ದಂಪತಿ, ರವೀಂದ್ರ ಪೈ ,ಛಾಯ ಆರ್ ಪೈ , ಸಹಿತ ಹಲವು ಅತಿಥಿಗಳು ಇದ್ದರು.ಸಿಬಂದಿಗಳಾದ ಸುಜಾತ ,ವೈಶಾಲಿ ,ತುಳಸಿ ಅಶ್ವಿನಿ ಹಾಗೂ ಶೃತಿ ಪ್ರಾರ್ಥನೆ ನೆರವೇರಿಸಿದರು. ಮಾಲಕ ಮಹಾಬಲ ರೈ ಅತಿಥಿಗಳಿಗೆ ಹೂ ,ಸ್ಮರಣಿಕೆ ನೀಡಿ ಗೌರವಿಸಿದರು.ನಾಗವೇಣಿ ಮಹಾಬಲ ರೈ ಮತ್ತು ಪ್ರತಿಮಾ ಎ ರೈ ಎಲ್ಲರ ಸಹಕಾರ ಕೋರಿದರು.

ಮಾಲಕರ ಸಹೋದರ,ಬಾಳಿಲ ಗ್ರಾ.ಪಂ. ಸದಸ್ಯ ರಮೇಶ್ ರೈ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿ ಸುಜಾತ ವಂದಿಸಿದರು. ತರಬೇತಿ ಪಡೆದುಕೊಳ್ಳೋ ಅಭ್ಯರ್ಥಿಗಳು ,ಸಂಸ್ಥೆಯ ಮಹಿಳಾ ಹಾಗೂ ಪುರುಷ ಸಿಬಂದಿಗಳು ಸಹಕರಿಸಿದರು.35 ವರುಷಗಳ ಸುದೀರ್ಘ ಅನುಭವದ ಜೊತೆಗೆ ಕಳೆದ 25 ವರುಷದಿಂದ ಪುತ್ತೂರಿನಲ್ಲಿ ಸಂಸ್ಥೆ ಆರಂಭಿಸಿ ,ಎಲ್ಲಾ ವರ್ಗದ ಜನರ ಮೆಚ್ಚುಗೆ ಗಳಿಸಿದ್ದೇವೆ. ನಿಮ್ಮ ಅಶೀರ್ವಾದಿಂದ ,ಸುಬ್ರಹ್ಮಣ್ಯದಲ್ಲೂ ಕೂಡ ಸಹಸಂಸ್ಥೆಯನ್ನು ಪ್ರಾರಂಭಿಸಿದ್ದೇವೆ. ನಿಮ್ಮೆಲ್ಲಾರ ಪ್ರೀತಿ , ಪ್ರೋತ್ಸಾಹ ,ಸಹಕಾರ ಹೀಗೆನೇ ಮುಂದುವರಿಯಲಿ- ಮಹಾಬಲ ರೈ, ಮಾಲಕರು ,ಅಪ್ಸರಾ ಕಲ್ಲಾರೆ. 9972924407

LEAVE A REPLY

Please enter your comment!
Please enter your name here