ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ಮಹಾಸಭೆ

0

  • ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸಹಕಾರಿ ಸಂಘ – ದಿವ್ಯಪ್ರಭಾ ಚಿಲ್ತಡ್ಕ

ಪುತ್ತೂರು: ದರ್ಬೆ ಶ್ರೀರಾಮ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ಮಹಾಸಭೆಯು ಸೆ.22ರಂದು ಶ್ರೀರಾಮ ಸೌಧದಲ್ಲಿರುವ ಸಬಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಡಾ|ದಿವ್ಯಪ್ರಭಾ ಗೌಡ ಚಿಲ್ತಡ್ಕರವರು ಮಾತನಾಡಿ, ನಮ್ಮ ಸಹಕಾರಿ ಸಂಘವು ಹೆಣ್ಣು ಮಕ್ಕಳಿಂದ ಹೆಣ್ಣು ಮಕ್ಕಳಿಗಾಗಿ, ಹೆಣ್ಣು ಮಕ್ಕಳಿಯರೇ ನಡೆಸಲ್ಪಡುವ ಸಹಕಾರಿ ಸಂಘವಾಗಿದೆ. ಬೇರೆ ಬೇರೆ ಸಂಘ ಸಂಸ್ಥೆ, ರಾಜಕೀಯವಾಗಿ ಸೇವೆ ಸಲ್ಲಿಸುವ ಅನುಭವೀ ನಿರ್ದೇಶಕರು ನಮ್ಮ ಸಂಘದಲ್ಲಿದ್ದಾರೆ. ಮಹಿಳೆಯರ ಜೀವನದ ದಿನ ನಿತ್ಯದ ಆರ್ಥಿಕ ಸಮಸ್ಯೆಗಳನ್ನು ಎದುರಿಸಲು ಹಾಗೂ ಸಮಾಜದ ಆಧಾರವಾಗಿ ನಿಲ್ಲಲು ಸಹಕಾರಿ ಸಂಘದ ಸ್ಥಾಪಿಸಲಾಗಿದೆ. ಸಂಘದ ಧ್ಯೇಯ-ಉದ್ದೇಶಗಳನ್ನು ಈಡೇರಿಸುತ್ತಾ ಸಂಘವು 5 ವರ್ಷ ಉತ್ತಮವಾಗಿ ಬೆಳೆದು ಬಂದಿದೆ. ಮಹಿಳೆಯ ಆರ್ಥಿಕ ಸಬಲೀಕರಣಕ್ಕೆ ಸಂಘವು ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಸದಸ್ಯರು ಸಂಘದ ಮುಖಾಂತರವೇ ವ್ಯವಹರಿಸಿ ಸಂಘದ ಬೆಳವಣಿಗೆಗೆ ಸಹಕರಿಸಿ ಎಂದು ಅವರು ವಿನಂತಿಸಿದರು.

ಸಂಘವು ವರದಿ ವರ್ಷದಲ್ಲಿ ಒಟ್ಟು 1738 ಸದಸ್ಯರಿಂದ ರೂ.11,72,900 ಪಾಲು ಬಂಡವಾಳ ಹೊಂದಿದೆ. ಒಟ್ಟು 1,02,02847 ವಿವಿಧ ರೂಪದ ಠೇವಣಿಗಳನ್ನು ಹೊಂದಿದೆ. ಸದಸ್ಯರಿಗೆ ವಿವಿಧ ರೂಪದಲ್ಲಿ ರೂ.60ಲಕ್ಷ ಸಾಲ ವಿತರಿಸಲಾಗಿದೆ. ಸಾಲ ವಸೂಲಾತಿಯಲ್ಲಿ ಸಂಘವು ಶೇ.99 ಸಾಧನೆ ಮಾಡಿದೆ ಎಂದು ಕಾರ್ಯದರ್ಶಿ ರಾಜೇಶ್ ಕೆ. ವರದಿಯಲ್ಲಿ ತಿಳಿಸಿದರು.

ಬೈಲಾ ತಿದ್ದುಪಡಿಗೆ ಅನುಮೋದನೆ:
ಸಂಘವು ಪುತ್ತೂರು ಹಾಗೂ ಸುಳ್ಯ ತಾಲೂಕಿನ ವ್ಯಾಪ್ತಿಯನ್ನು ಹೊಂದಿದೆ. ಇದೀಗ ಕಡಬ ಪುತ್ತೂರು ತಾಲೂಕಿನಿಂದ ಬೇರ್ಪಟ್ಟು ನೂತನ ತಾಲೂಕು ಅನುಷ್ಠಾನಗೊಂಡಿರುವ ಹಿನ್ನೆಲೆಯಲ್ಲಿ ಕಡಬ ಭಾಗದ ಸದಸ್ಯರಿಗೆ ಸಂಘದ ಮುಖಾಂತರ ವ್ಯವಹರಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಂಘವ ವ್ಯಾಪ್ತಿಯನ್ನು ಕಡಬ ತಾಲೂಕಿಗೂ ವಿಸ್ತರಿಸಲು ಸಭೆಯಲ್ಲಿ ಮಂಡಿಸಿ, ಮಹಾಸಭೆಯ ಅನುಮೋದನೆ ಪಡೆಯಲಾಯಿತು.

ನಿರ್ದೇಶಕರಾದ ಜಾನಕಿ ಮುರ, ಸುಮತಿ, ಫಿಲೋಮಿನಾ ಲೋಬೋ ಹಾಗೂ ಜೊಹರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಸ್ವರ್ಣಲತಾ ಹೆಗ್ಡೆ ಸ್ವಾಗತಿಸಿದರು. ನಿರ್ದೇಶಕರಾದ ವನಜಾ ಪ್ರಾರ್ಥಿಸಿದರು. ಉಷಾ ಅಂಚನ್ ಕಾರ್ಯಕ್ರಮ ನಿರೂಪಿಸಿ, ನಳಿನಾಕ್ಷಿ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಕೆ. ವರದಿ ಹಾಗೂ ಆಯ-ವ್ಯಯ ಮಂಡಿಸಿದರು. ಸಿಬಂದಿ ರೇಖಾ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು. ಮಹಾಸಭೆಯಲ್ಲಿ ಭಾಗವಹಿಸಿದ ಸದಸ್ಯರಿಗೆ ಪ್ರೋತ್ಸಾಹಕ ಉಡುಗೋರೆ ನೀಡಲಾಯಿತು. ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here