ಗೈಡ್ಸ್ ಪರೀಕ್ಷೆ: ಶ್ರೀ ರಾಮಕುಂಜೇಶ್ವರ ಕ.ಮಾ. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ

0

ರಾಮಕುಂಜ: 2021-2022ನೇ ಸಾಲಿನ ರಾಜ್ಯ ಪುರಸ್ಕಾರ ಗೈಡ್ಸ್ ಪರೀಕ್ಷೆಯಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾದ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿಯರು ರಾಜ್ಯ ಪುರಸ್ಕಾರ ಪಡೆದುಕೊಂಡಿದ್ದಾರೆ.


ವಿದ್ಯಾರ್ಥಿನಿಯರಾದ ಶ್ರೀನಿಧಿ ಪಿ( ಪುಣ್ಕೆತ್ತಡಿ ಪಿ. ಶೇಖರ ಹಾಗೂ ಶೋಭಾ ದಂಪತಿ ಪುತ್ರಿ), ಪ್ರೇಕ್ಷಾ (ಕೊನೆಮಜಲು ಕುಶಾಲಪ್ಪ ಗೌಡ ಹಾಗೂ ವೇದಾವತಿ ದಂಪತಿ ಪುತ್ರಿ), ವಂದಿತಾ (ಕಲ್ಕಾಡಿ ಬಾಲಣ್ಣ ಹಾಗೂ ಸುಂದರಿ ದಂಪತಿ ಪುತ್ರಿ), ದೀಕ್ಷಾ. ಎಸ್(ಸಂಪ್ಯಾಡಿ ವಾಸಪ್ಪ ಗೌಡ ಹಾಗೂ ನೀಲಾವತಿ ದಂಪತಿ ಪುತ್ರಿ), ಶ್ರೀರಕ್ಷಾ ಪಿ. ಆರ್.(ತಿರ್ಲೆ ಪಾತೃಮಾಡಿ ರೋಹಿನಾಥ ಶೆಟ್ಟಿ ಹಾಗೂ ರಾಜೀವಿ. ಕೆ ದಂಪತಿ ಪುತ್ರಿ), ಜನನಿ ಎಮ್. ಎ(ಮೇಲೂರು ಆನಂದ ಕೆ. ಎಸ್ ಹಾಗೂ ಕುಸುಮ ದಂಪತಿ ಪುತ್ರಿ), ಹರ್ಷಿತಾ ಎಸ್.(ಸಂಪ್ಯಾಡಿ ತಿಮ್ಮಪ್ಪ ಗೌಡ ಎಸ್ ಹಾಗೂ ಶೋಭಾ ದಂಪತಿ ಪುತ್ರಿ), ರಕ್ಷಾ(ತಿರ್ಲೆ ಯೋಗೀಶ ಹಾಗೂ ಲಲಿತಾ ದಂಪತಿಯ ಪುತ್ರಿ)ರವರು ಉತ್ತೀರ್ಣಗೊಂಡು ಸಂಸ್ಥೆಗೆ ಶೇ.100 ಫಲಿತಾಂಶ ಬಂದಿದ್ದು ವಿದ್ಯಾರ್ಥಿನಿಯರು ರಾಜ್ಯ ಪುರಸ್ಕಾರ ಪಡೆದುಕೊಂಡಿದ್ದಾರೆ. ಶಾಲಾ ಆಡಳಿತ ಮಂಡಳಿಯವರ ಪ್ರೋತ್ಸಾಹದೊಂದಿಗೆ ಶಾಲಾ ಮುಖ್ಯಗುರು ಸತೀಶ್ ಭಟ್‌ರವರ ಸಹಕಾರದೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ ರೈ ಎನ್.ರವರು ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿದ್ದರು.

LEAVE A REPLY

Please enter your comment!
Please enter your name here