ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಮಹಾಸಭೆ: ರೂ.45.93ಲಕ್ಷ ಲಾಭ, ಶೇ.14 ಡಿವಿಡೆಂಡ್

0


ಪುತ್ತೂರು: ಮುಖ್ಯರಸ್ತೆಯ ಧರ್ಮಸ್ಥಳ ಮಂಜುಶ್ರೀ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು ೨೦೨೧-೨೨ ನೇ ಸಾಲಿನಲ್ಲಿ ರೂ.೪೫.೯೩ ಲಕ್ಷ ಲಾಭಗಳಿಸಿ ಸದಸ್ಯರಿಗೆ ಶೇ.೧೪ ಡಿವಿಡೆಂಡ್ ವಿತರಿಸಲಾಗುವುದು ಎಂದು ಅಧ್ಯಕ್ಷ ಸಂತೋಷ್ ಕುಮಾರ್ ಎ ಮಹಾಸಭೆಯಲ್ಲಿ ಘೋಷಣೆ ಮಾಡಿದರು.


ಮಹಾಸಭೆಯು ಸೆ.೨೫ರಂದು ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್‌ನ ಸಭಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ವರದಿ ವರ್ಷದಲ್ಲಿ ೧೬೮೬ ಸದಸ್ಯರಿಂದ ರೂ.೮೪,೫೭,೪೦೦ ಪಾಲು ಬಂಡವಾಳ, ರೂ.೨೭,೮೨,೧೦,೯೫೨ ವಿವಿಧ ರೂಪದ ಠೇವಣಿ, ರೂ.೫೭,೧೪,೬೯೩ ನಿಧಿಗಳು, ರೂ. ೭೬,೨೭,೬೨೯. ಕಟ್ಟಡ ನಿಧಿಗಳನ್ನು ಹೊಂದಿದೆ. ವರದಿ ವರ್ಷದಲ್ಲಿ ರೂ.೨೦,೧೩,೪೬,೫೮೬ ಸಾಲ ಹೊರಬಾಕಿಯಿರುತ್ತದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ಎ ಶ್ರೇಣಿಯನ್ನು ಪಡೆದುಕೊಂಡಿದೆ. ಲಾಭಾಂಶವನ್ನು ಉಪನಿಬಂದನೆಯಂತೆ ವಿಂಗಡಿಸಲಾಗಿದೆ ಎಂದರು.

ಮುಂದಿನ ಯೋಜನೆಗಳು:
ಸುಳ್ಯದಲ್ಲಿ ಸಂಘದ ಶಾಖೆ ತೆರೆಯು ಪ್ರಕ್ರೀಯೆಗಳು ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಅಲ್ಲದೆ ಉಪ್ಪಿನಂಗಡಿ ಹಾಗೂ ಈಶ್ವರಮಂಗಲದಲ್ಲಿ ಶಾಖೆಗಳನ್ನು ತೆರೆಯಲಾಗುವುದು. ಸಂಘಕ್ಕೆ ೫೦೦ ಹೊಸ ಸದಸ್ಯರ ಸೇರ್ಪಡೆಗೊಳಿಸುವುದು, ಪಾಲು ಬಂಡವಾಳವನ್ನು ರೂ.೧ಕೋಟಿಗೆ ಏರಿಕೆ ಮಾಡುವುದು, ಠೇವಣಿ ಸಂಗ್ರಹಣೆಯನ್ನು ರೂ.೩೨ಕೋಟಿಗೆ ಗುರಿ ಹಾಕಿಕೊಳ್ಳುವುದು ಹಾಗೂ ಸದಸ್ಯರಿಗೆ ನೀಡುವ ಎಲ್ಲಾ ವಿಧದ ಸಾಲಗಳನ್ನು ರೂ.೨೫ಕೋಟಿಯ ಗುರಿ ಹಾಕಿಕೊಳ್ಳಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ಮಂಗಳೂರು ಶಾಖೆ ಸ್ಥಳಾಂತರಕ್ಕೆ ಅನುಮೋದನೆ:
ಮಂಗಳೂರಿನ ಬಲ್ಮಠದಲ್ಲಿರುವ ಸಂಘದ ಶಾಖೆಯನ್ನು ಸ್ಥಳಾಂತರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಈಗಿರುವ ಪ್ರದೇಶದಿಂದ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ಮಹಾಸಭೆಯ ಅನುಮೋದನೆ ಪಡೆದುಕೊಳ್ಳಲಾಯಿತು.

ರೂ.71,5೦೦ದ ವಿದ್ಯಾರ್ಥಿ ವೇತನ ವಿತರಣೆ:
ಸಂಘದ ಸದಸ್ಯರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಎಸ್‌ಎಸ್‌ಎಲ್‌ಸಿಯ ತನುಶ್, ಮಹತಿ ರಾಣಿ ಪಿ.ಎಸ್., ರಶ್ಮಿ ಆರ್.ನಾಕ್, ಅವನಿ ವಿ. ಧನ್ವಿ ಡಿ ಶೆಟ್ಟಿ, ಐಶ್ವರ್ಯ ಲಕ್ಷ್ಮೀ ಆರ್, ಪ್ರಣಮ್ ಕೆ. ಸಂಚಿತಾ ಕೆ., ಸಮೃದ್ದ ಎಂ.ಕೆ, ಹೃತಿಕಾ ಕೆ.ಪಿ., ಅನನ್ಯ ಆರ್ ನಾಕ್, ಶ್ರೇಯಾಂಕ್ ಬಿ.ನಾಕ್, ತ್ರಶಾನ್ ಕೆ., ದ್ವಿತೀಯ ಪಿಯುಸಿಯ ದೀಕ್ಷಿತಾ, ಪರಿಣಿತ ಬಿ., ಕ್ಷಮ ಪ್ರಭು, ಸಾನಿಯಾ ಪ್ರಮೋದ್, ದಿಯಾ ಡಿ., ಖುಷಿ ನಾಕ್, ವಿನಿತ್ ಜಿ.ಪಿ., ಶರೇನಾ ನಾಕ್, ತಸ್ಮಯ್ ಬಿ., ಅನುಷ್ಕಾ ಬಟ್ಟೇಕಳ, ನಿರೀಕ್ಷಾ, ಸಾತ್ವಿಕ್ ಹಾಗೂ ರಿತಿಕ್ ಬಿ.ಆರ್‌ರವರಿಗೆ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತಲಾ ರೂ೨೫೦೦ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ರೂ.೩೦೦೦ದಂತೆ ಒಟ್ಟು ರೂ.೭೧,೫೦೦ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ನಿರ್ದೇಶಕರಾದ ರಘುನಾಥ ನಾಕ್, ಕೆ.ರತ್ನಾಕರ ನಾಕ್, ಸುದೇಶ್ ಕುಮಾರ್ ಕೆ., ಟಿ.ಸದಾಶಿವ ನಾಕ್, ರಾಕೇಶ್ ಕುಮಾರ್, ಹೇಮಲತಾ ಎಸ್.ನಾಕ್., ಗುಲಾಬಿ ಕೆ., ಹಾಗೂ ದಿನೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಿಗ್ಮಿ ಸಂಗ್ರಾಹಕ ರಾಜೇಶ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಕೆ.ಶಂಕರ್ ನಾಕ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ.ಪಿ. ಲೆಕ್ಕಪರಿಶೋಧನಾ ವರದಿ ಹಾಗೂ ಲಾಭಾಂಶ ವಿಂಗಡೆಯನ್ನು ಮಂಡಿಸಿದರು. ನಿರ್ದೇಶಕ ಗೋಪಾಲ್ ನಾಕ್ ವಂದಿಸಿದರು. ಸಿಬಂದಿ ಶೃತಿಕಾ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿಗಳಾದ ಜಲಜಾಕ್ಷಿ, ಜಯಲಕ್ಷ್ಮೀ, ಪ್ರೇಮಾನಂದ ನಾಕ್, ಸಂದೇಶ್, ಪ್ರತಿಭಾ, ಪ್ರೀತಂ, ಕಾರ್ತಿಕ್, ಅವಿನಾಶ್, ಧೀರಜ್, ತನುಜಾ, ಶೃತಿ, ನಂದನ್, ಪ್ರದಿತ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪಿಗ್ಮಿ ಸಂಗ್ರಾಹಕರಾದ ಪ್ರವೀಣ್, ಅಭಿಲಾಷ್, ಮನೋರಮಾ, ಬಬಿತಾ ಹಾಗೂ ಅನುರಾದ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನ ನಡೆಯಿತು.

LEAVE A REPLY

Please enter your comment!
Please enter your name here