ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸಾ ಶಿಬಿರ: ಮರ್ಕಝುಲ್ ಹುದಾದಲ್ಲಿ ಸಕಾರಾತ್ಮಕ ಎನರ್ಜಿಯಿದೆ-ದಿವ್ಯಪ್ರಭಾ ಚಿಲ್ತಡ್ಕ

0


ಪುತ್ತೂರು: ಶಿಕ್ಷಣ ಎನ್ನುವುದು ಪ್ರತಿಯೋರ್ವರಿಗೂ ಅತ್ಯವಶ್ಯಕವಾಗಿದ್ದು ಕಟ್ಟಕಡೆಯ ವ್ಯಕ್ತಿಯೂ ಶಿಕ್ಷಣ ಪಡೆದರೆ ಮಾತ್ರ ಈ ಸಮಾಜ ಸುಶಿಕ್ಷಿತವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಯಾವುದೇ ಕುಂದು ಕೊರತೆ ಬಾರದಂತೆ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಮರ್ಕಝುಲ್ ಹುದಾ ಶಿಕ್ಷಣ ಸಂಸ್ಥೆ ಸುಶಿಕ್ಷಿತ ಸಮಾಜಕ್ಕೆ ವಿಶೇಷ ಕೊಡುಗೆ ನೀಡುತ್ತಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಹೇಳಿದರು.


ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ವತಿಯಿಂದ ಯೇನಪೋಯ ಆಯುರ್ವೇದ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಮತ್ತು ಡೆಂಟಲ್ ಕಾಲೇಜು ದೇರಳಕಟ್ಟೆ, ಮಂಗಳೂರು ಇದರ ಸಹಯೋಗದೊಂದಿಗೆ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಸೆ.೨೪ರಂದು ನಡೆದ ಉಚಿತ ದಂತ, ಕಣ್ಣು ಹಾಗೂ ಆಯುರ್ವೇದ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮರ್ಕಝುಲ್ ಹುದಾ ಶಿಕ್ಷಣ ಸಂಸ್ಥೆಯಲ್ಲಿ ಸಕಾರಾತ್ಮಕ ಎನರ್ಜಿ ಎದ್ದು ಕಾಣುತ್ತಿದ್ದು ಸೆಕ್ಯೂಲರಿಸಂನಲ್ಲಿ ಈ ಕಾಲೇಜು ಮಾದರಿಯಾಗಿದೆ. ಇದು ನಮ್ಮೆಲ್ಲರ ಶಿಕ್ಷಣ ಸಂಸ್ಥೆಯಾಗಿದ್ದು ಇದಕ್ಕೆ ನಾವೆಲ್ಲರೂ ಸಹಕಾರ ನೀಡಬೇಕಾಗಿದೆ ಎಂದು ಅವರು ಹೇಳಿದರು.



ಮರ್ಕಝುಲು ಹುದಾ ಶಿಕ್ಷಣ ಸಂಸ್ಥೆಯ ವ್ಯವಸ್ಥೆ ಮತ್ತು ಶಿಸ್ತನ್ನು ನೋಡಿದಾಗ ಮನಸ್ಸಿಗೆ ಬಹಳ ಖುಷಿಯಾಯಿತು. ಶಿಕ್ಷಣ ಸಂಸ್ಥೆ ಸ್ಥಾಪಿಸುವುದು, ಮುನ್ನಡೆಸುವುದು ಸುಲಭದ ಮಾತಲ್ಲ. ಅಂತದ್ದರಲ್ಲಿ ಉತ್ತಮ ಸಂಸ್ಥೆ ಸ್ಥಾಪಿಸಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡುತ್ತಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ. ಈ ಸಂಸ್ಥೆಗೆ ಸಹಕಾರ ನೀಡಲು ನಾನು ಸದಾ ಸಿದ್ದಳಿದ್ದೇನೆ. ಇಲ್ಲಿ ಮುಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕು ಎಂದವರು ಹೇಳಿದರು. ಡಾ.ಲಕ್ಷ್ಮೀಶ್ ಉಪಾಧ್ಯಾಯ ಮಾತನಾಡಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ಎಸ್.ಎಂ ಬಶೀರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಸಂಸ್ಥೆಯ ಪಿಯು ವಿಭಾಗದ ಪ್ರಾಂಶುಪಾಲರಾದ ಸಂಧ್ಯಾ, ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಮನ್ಸೂರ್, ಸಂಸ್ಥೆಯ ಕೋಶಾಧಿಕಾರಿ ಖಾಸಿಂ ಹಾಜಿ ಮಿತ್ತೂರು, ಸದಸ್ಯರಾದ ಯೂಸುಫ್ ಗೌಸಿಯಾ ಸಾಜ, ಯೂಸುಫ್ ಮೈದಾನಿಮೂಲೆ, ಅನ್ವರ್ ಹುಸೈನ್ ಗೂಡಿನಬಳಿ, ಶಂಸುದ್ದೀನ್ ಬೈರಿಕಟ್ಟೆ ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಆಶಿಕುದ್ದೀನ್ ಅಖ್ತರ್ ಕುಂಬ್ರ, ಬಶೀರ್ ಇಂದ್ರಾಜೆ ಮತ್ತಿತರ ಹಲವರು ಉಪಸ್ಥಿತರಿದ್ದರು.

ಖ್ಯಾತ ತರಬೇತುದಾರ ರಫೀಕ್ ಮಾಸ್ಟರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಕಾರ್ಯದರ್ಶಿ ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮ್ಯಾನೇಜರ್ ಬಿ.ಕೆ ರಶೀದ್ ಸಂಪ್ಯ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು. ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ನೂರಾರು ಮಂದಿ ಆಗಮಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here