ವೀರ ಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ: ರೂ.21.10ಕೋಟಿ ವ್ಯವಹಾರ, 8.32ಲಕ್ಷ ಲಾಭ, ಶೇ.9 ಡಿವಿಡೆಂಡ್

0

ಪುತ್ತೂರು:ಎಪಿಎಂಸಿ ರಸ್ತೆಯ ಲಿಲ್ಲಿ ಕಾಂಪ್ಲೆಕ್ಸ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ವೀರ ಮಾಚಿದೇವ ವಿವಿಧೋದ್ದೇಶ ಸಹಕಾರ ಸಂಘವು ೨೦೨೧-೨೨ನೇ ಸಾಲಿನಲ್ಲಿ ರೂ.೨೧.೧೦ಕೋಟಿ ವ್ಯವಹಾರ ನಡೆಸಿ, ರೂ.೮,೩೨,೭೧೫.೦೮ ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.೯ ಡಿವಿಡೆಂಡ್ ವಿತರಿಸಲಾಗುವುದು. ಸಂಘವು ರೂ.೬.೭೦ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದು ಸಂಘದ ಅಧ್ಯಕ್ಷ ಇಂದುಶೇಖರ್ ಪಿ.ಬಿಯವರು ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.


ಸಭೆಯು ಸೆ.೨೫ರಂದು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಸಹಕಾರ ಜ್ಯೋತಿ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರದಿ ವರ್ಷದಲ್ಲಿ ಸಂಘವು ೩೨೨೭ ಸದಸ್ಯರಿಂದ ರೂ.೩೭,೪೮,೨೪೦ ಪಾಲು ಬಂಡವಾಳ, ರೂ.೫,೧೨,೧೩,೫೫೦.೮೪ ವಿವಿಧ ರೂಪದ ಠೇವಣಿ ಹೊಂದಿದೆ. ರೂ.೨,೦೧,೭೮,೦೨೭.೧೪ನ್ನು ವಿವಿಧ ಬ್ಯಾಂಕ್‌ಗಳಲ್ಲಿ ವಿನಿಯೋಗಿಸಲಾಗಿದೆ. ರೂ.೩,೯೦,೦೭,೪೯೭ನ್ನು ವಿವಿಧ ರೂಪದಲ್ಲಿ ಸಾಲ ವಿತರಿಸಲಾಗಿದ್ದು ಶೇ.೮೦ರಷ್ಟು ಸಾಲ ವಸೂಲಾತಿಯಾಗಿದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು `ಎ’ಶ್ರೇಣಿಯನ್ನು ಪಡೆದುಕೊಂಡಿದೆ. ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದು ಹೇಳಿದರು.

ನಮ್ಮ ಸಂಘದಲ್ಲಿಯೇ ವ್ಯವಹರಿಸಿ:
ಸದಸ್ಯರು ನಮ್ಮ ಸಂಘದ ಮುಖಾಂತರವೇ ವ್ಯವಹರಿಸಬೇಕು. ಪುತ್ತೂರು, ಉಜಿರೆ ಹಾಗೂ ಕಲ್ಲಡ್ಕದಲ್ಲಿ ನಮ್ಮ ಸಂಸ್ಥೆಗಳೇ ಕಾರ್ಯನಿರ್ವಹಿಸುತ್ತಿದ್ದು ಈ ಎಲ್ಲಾ ಭಾಗದ ಸದಸ್ಯರು ನಮ್ಮ ಸಂಘದಲ್ಲಿಯೇ ವ್ಯವಹರಿಸಿ. ತಿಂಗಳಿಗೆ ಒಂದು ಬಾರಿಯಾದರೂ ಕಚೇರಿಗೆ ಭೇಟಿ ನೀಡಿ. ಪ್ರೀತಿಯಿಟ್ಟು ಸಂಘದಲ್ಲಿ ವ್ಯವಹರಿಸಿದರೆ ಸಂಘ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಪುತ್ತೂರಿನಲ್ಲಿ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣದ ಯೋಜನೆಯಿದೆ. ಇದಕ್ಕೆ ಸದಸ್ಯರೆಲ್ಲರ ಸಹಕಾರ, ಪ್ರೋತ್ಸಾಹ ಅತೀ ಆವಶ್ಯಕ ಎಂದು ಅಧ್ಯಕ್ಷ ಇಂದುಶೇಖರ್ ಪಿ.ಬಿ ಮನವಿ ಮಾಡಿದರು.


ಸನ್ಮಾನ, ಪ್ರತಿಭಾ ಪುರಸ್ಕಾರ:
ಸಂಘದ ಮಾಜಿ ಹಿರಿಯ ನಿರ್ದೇಶಕ ನಾರಾಯಣ ಬೈಂದೂರುರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಂಘದ ಸದಸ್ಯರ ಮಕ್ಕಳಿಗಾಗಿ ನೀಡುವ ಪ್ರತಿಭಾ ಪುರಸ್ಕಾರವನ್ನು ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚ ಅಂಕಗಳಿಸಿದ ಸುಶಾ, ಸೊನಾಲಿ, ಅಂಕಿತಾ ಕೆ.ಬಿ. ಕೀರ್ತನ್ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮೋಕ್ಷ, ಅಭಿಲಾಷ್ ಹಾಗೂ ಸಾತ್ವಿಕ್‌ರವರಿಗೆ ನೀಡಿ ಗೌರವಿಸಲಾಯಿತು.


ಉಪಾಧ್ಯಕ್ಷ ಪಿ.ಎನ್ ಸುಭಾಸ್‌ಚಂದ್ರ, ಸುಬ್ಬಣ್ಣ ನೂಜಿ, ವಾಸುದೇವ ಪಡೀಲ್, ಯಚ್ ಬಾಬು, ರಘುನಾಥ ನೆಲ್ಯಾಡಿ, ಜಯಂತ ಮುಂಡಾಜೆ, ಸುರೇಶ್ ಬೈಂದೂರು, ಶೋಭಾ ಪಿ.ಎಸ್., ಡಾ| ಯಾದವಿ ಜಯಕುಮಾರ್, ಜಯಂತ ಬೇಕಲ್, ನಾರಾಯಣ ಬೈಂದೂರು ಹಾಗೂ ಈಶ್ವರ ವಿಟ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾವ್ಯ ಹಾಗೂ ವರ್ಷಿಣಿ ಪ್ರಾರ್ಥಿಸಿದರು. ಅಧ್ಯಕ್ಷ ಇಂದುಶೇಖರ್ ಪಿ.ಬಿ ಸ್ವಾಗತಿಸಿದರು. ಪ್ರಭಾರ ಕಾರ್ಯದರ್ಶಿ ದಯಾಮಣಿ ಹೆಚ್.ಕೆ ವರದಿ ಮಂಡಿಸಿದರು. ಸಿಬಂದಿ ಯೋಗೀಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here