HS ಸರ್ ಎಂಬ ಅಪರೂಪದ ಮಾಣಿಕ್ಯ

0

ಸುಂದರ ಸರಳ ವ್ಯಕ್ತಿತ್ವ, ಮೊಗದಲ್ಲೊಂದು ಮಾಸದ ಮುಗುಳ್ನಗು, ಎಂದೂ ಕರಗದ ಉತ್ಸಾಹ, ಸದಾ ಲವಲವಿಕೆಯ ಇವರನ್ನು ನೋಡಿದಾಗ ನಮಗೂ ಅಚ್ಚರಿಯಾಗುತ್ತದೆ. ಯಾಕಂದರೆ ಅವರ ಪ್ರಾಯಕ್ಕೂ, ಅವರ ಉತ್ಸಾಹಕ್ಕೂ ವ್ಯತ್ಯಾಸ ಬಹಳ!



ನಾನು ಮಾತನಾಡಲು ಹೊರಟದ್ದು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ 25 ವರುಷಗಳಿಂದ ಭೌತಶಾಸ್ತ್ರ ಅಧ್ಯಾಪಕರಾಗಿದ್ದುಕೊಂಡು ವಿದ್ಯಾರ್ಥಿಗಳ ಸರ್ವತೋಮಖ ಬೆಳವಣಿಗೆಗೆ ಟೊಂಕ ಕಟ್ಟಿ ನಿಂತ, ನನ್ನ ಪಿಯು ಜೀವನದಲ್ಲಿ ಎರಡೂ ವರ್ಷ ಕೂಡ ಅಧ್ಯಾಪಕರಾಗಿ ನನಗೆ ಭೌತಶಾಸ್ತ್ರ ಬೋಧಿಸಿದ ಶ್ರೀ ಹರೀಶ್ ಶಾಸ್ತ್ರಿ ಸರ್ ಬಗ್ಗೆ.

ಅದು 2020 ರ ಕೊರೋನದ ಸಂದರ್ಭ, ದೇಶವೆಲ್ಲವೂ ಮೌನವಾದ ಕ್ಷಣ. ತಿಂಗಾಳುಗಟ್ಟಲೆ ಶಿಕ್ಷಣ ಸಂಸ್ಥೆಗಳ ಬಾಗಿಲು ಮುಚ್ಚಲ್ಪಟ್ಟ ಪರಿಸ್ಥಿತಿ. ಶಾಲಾ ಕಾಲೇಜುಗಳ ಶಿಕ್ಷಣವು ಆಫ್ಲೈನ್ ಇಂದ ಆನ್ಲೈನ್ ಗೆ ತಿರುಗಿ ಡಿಜಿಟಲ್ ಮಯವಾಗಬೇಕಾದ ಅನಿವಾರ್ಯತೆ. ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ವಿಧ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದು ಅಂತ ಪ್ರಪ್ರಥಮವಾಗಿ ಯೂ ಟ್ಯೂಬ್ ತರಗತಿಗಳನ್ನು ನಡೆಸಿ, ಉಳಿದ ಶಿಕ್ಷಕರಿಗೂ ಪ್ರೇರಣೆಯಾದವರು. ನಮ್ಮ ಕಾಲೇಜಿನ ಸಿಬ್ಬಂದಿ ವರ್ಗದವರಿಗೆ ಕೋರೋನದ ಸಂದರ್ಭದಲ್ಲಿ ಆರ್ಥಿಕ ಸಹಾಯವನ್ನು ಮಾಡಿದವರು, ಪ್ರತೀಭಾವಂತ ಬಡ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳ ಮೂಲಕ ಸ್ಥಾಪಿತ,ವಿದ್ಯಾನಿಧಿಯ ಮೂಲಕ ಅರ್ಥಿಕ ಸಹಾಯದ ಕಾರಣೀಕರ್ಥರು. ಹೈಸ್ಕೂಲ್ ವಿದ್ಯಾರ್ಥಿಗಳಿಗೆಂದೇ (Dreams )ಕನಸುಗಳು ಕಾರ್ಯಕ್ರಮನ್ನು ಯೋಜಿಸಿ ಪ್ರತೀವರ್ಷ ನಡೆಸಿಕೊಂಡು ಹೋಗುತ್ತಿರುವ HS ಸರ್ ಗೆ ಬಹುಶಃ ಸಾಟಿ ಬೇರೊಬ್ಬರಿಲ್ಲ. ಪ್ರತೀ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸಂಪೂರ್ಣ ಮಾಹಿತಿ, ಅವುಗಳಿಗೆ ಬೇಕಾದ ಅಗತ್ಯತೆ ಗಳು ಇತ್ಯಾದಿ ಇತ್ಯಾದಿ ವಿಷಯಗಳನ್ನು ಕಾಲಕಾಲಕ್ಕೆ ವಿದ್ಯಾರ್ಥಿಗಳಿಗೆ ತಲುಪಿಸುವ ವ್ಯವಸ್ಥೆ, ಹೆಚ್ಚಾಗಿ ವೈಯುಕ್ತಿಕ ವಿಷಯಗಳಿಗೆ ಗಮನ ಕೊಡದೇ ಸದಾ ಕಾಲೇಜು, ವಿದ್ಯಾರ್ಥಿಗಳ ಬಗ್ಗೆಯೇ ಆಸಕ್ತಿ ತೋರುವ Hs sir ನ ಬಗ್ಗೆ ಮಾತಾನಾಡಲು ಹೋದರೆ ಅದು ಮುಗಿಯೋಲ್ಲ, ಪದಗಳಲ್ಲಿ ಜೋಡಿಸಲು ಅಕ್ಷರಗಳೇ ಸಿಗುತ್ತಿಲ್ಲ.

ನಮ್ಮ ದೇಶದ ಮಾಜಿ ರಾಷ್ಟ್ರಪತಿ Dr A.P.J ಅಬ್ದುಲ್ ಕಲಾಂ ರ ಅಪ್ಪಟ ಅಭಿಮಾನಿಯಾಗಿರುವ ನಮ್ಮ ಹರೀಶ್ ಶಾಸ್ತ್ರಿ ಸರ್ ಬಹುಮುಖ ಪ್ರತಿಭೆಯುಳ್ಳವರು. ಕೇವಲ ಪಾಠ ಮಾತ್ರವಲ್ಲದೆ, ಅನೇಕ ಕ್ಯಾರಿಯರ್ ಗೈಡೆನ್ಸ್ ಕಾರ್ಯಕ್ರಮಗಳು, ಬೇರೆ ಬೇರೆ ಕಾಲೇಜುಗಳಲ್ಲಿ ಕ್ವಿಜ್ ಸರಣಿಗಳು, ತಾನು ಕಲಿತ ಕೊಂಬೆಟ್ಟು ಶಾಲೆಯ ಉನ್ನತಿಗಾಗಿ ಎಲ್ಲರೊಡಗೂಡಿ ಶ್ರಮಿಸ್ತಾ ಇರುವವರು, ಬಹುಪಾಲು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಳಕಾಗ್ತಾ ಇರುವವರು ಹೀಗೆ ಪಟ್ಟಿ ಸಾಗುತ್ತಾ ಹೋಗುತ್ತದೆ.

ಸರ್ ನೀವು ಪ್ರಶಸ್ತಿ, ಹೆಸರ ಹಿಂದೆ ಹೋದವರಲ್ಲ ಆದರೂ ಜಿಲ್ಲಾ ಅತ್ಯುತ್ತಮ ಪ್ರಶಸ್ತಿ ನಿಮ್ಮನ್ನು ಹುಡುಕಿ ಬಂದಿದೆ. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳ ಕಡೆಯಿಂದ ಸಣ್ಣದೊಂದು ಸನ್ಮಾನ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ದಿನಾಂಕ 24/9/22ರಂದು ಹಿರಿಯ ಹಾಗೂ ಕಿರಿಯರ ಸಮ್ಮುಖದಲ್ಲಿ ಆಯೋಜಿಸಲಾಗಿತ್ತು.ರಾಜ್ಯಮಟ್ಟದಲ್ಲಿ ನಿಮ್ಮನ್ನು ಗುರುತಿಸುವಂತೆ ಆಗಬೇಕು ಎಂಬುದು ನಮ್ಮೆಲ್ಲರ ಅಂಬೋಲ. ನಿಮ್ಮ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ ಎಂದು ಬೇಡುತ್ತಾ ನನ್ನ ಬರವಣಿಗೆಗೆ ಪುಟ್ಟದೊಂದು ವಿರಾಮ.

ಇತೀ ನಿಮ್ಮ ವಿದ್ಯಾರ್ಥಿನಿ ಹರ್ಷಿತಾ p
ರಸಾಯನ ಶಾಸ್ತ್ರ ಉಪನ್ಯಾಸಕರು
ವಿವೇಕಾನಂದ ಪದವಿ ಪೂರ್ವ ಕಾಲೇಜು ನೆಹರೂನಗರ ಪುತ್ತೂರು

LEAVE A REPLY

Please enter your comment!
Please enter your name here