ಪುತ್ತೂರು : ರಾಜ್ಯ ಸರಕಾರ ತುಳು ಅಕಾಡೆಮಿಯ ವತಿಯಿಂದ ಕೊಡಮಾಡುವ ೨೦೨೧ನೇ ಸಾಲಿನ ಗೌರವ ಪ್ರಶಸ್ತಿಗೆ ಪುತ್ತೂರಿನ ಬಹುಭಾಷಾ ಮಕ್ಕಳ ಸಾಹಿತಿ, ಶಿಶು ಶಿಕ್ಷಣ ತಜ್ಞ ಸಂದರ್ಶಕ ಗೌರವ ಶಿಕ್ಷಕ ಉಲ್ಲಾಸಣ್ಣರೆಂದು ಚಿರಪರಿಚಿತರಾದ ಯು.ಕೆ.ಪೈರವರಿಗೆ ಸೆ.೨೪ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭನದಲ್ಲಿ ಜರಗಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಮತ್ತು ಗಣ್ಯರು ಪ್ರಶಸ್ತಿ ಪ್ರದಾನ ನೆರವೇರಿಸಿದರು. ಡಾ|ಮೋಹನ ಆಳ್ವ, ಮಟ್ಟೂರು ರತ್ನಾಕರ ಹೆಗ್ಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪಲಿಮಾರು ಕೃಷ್ಣ ಪೈ ಮತ್ತು ರಾಧಾ ಪೈ ದಂಪತಿ ಪುತ್ರರಾಗಿರುವ ಯು.ಕೆ.ಪೈಯವರು ವಿಜ್ಞಾನ ಪಧವೀಧರರಾಗಿದ್ದು ಕೊಂಕಣಿ, ತುಳು, ಕನ್ನಡ, ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ೧೮೦ಕ್ಕೂ ಮಿಕ್ಕಿ ಮಕ್ಕಳ ಕೃತಿಗಳನ್ನು ರಚಿಸಿದ್ದಾರೆ.