ಉಪ್ಪಿನಂಗಡಿ ಸಹಕಾರಿ ಸಂಘದ ಅಮೃತ ಮಹೋತ್ಸವ ಪ್ರಯುಕ್ತ ಉಚಿತ ಆಯುರ್ವೇದ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

0

೦ ದೇಹದ ಪರಿಪೂರ್ಣ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ-ಪ್ರತಾಪಸಿಂಹ ನಾಯಕ್

೦ ಆಯುರ್ವೇದ ಚಿಕಿತ್ಸೆ ಬಗ್ಗೆ ತಾತ್ಸರ ಭಾವನೆ ಸರಿಯಲ್ಲ-ಡಾ. ಬಿ.ಕೆ. ಪ್ರಶಾಂತ್.

೦ ಡಿಸೆಂಬರ್ ತಿಂಗಳಿನಲ್ಲಿ ಅಮೃತ ಮಹೋತ್ಸವದ ಸಮಾರೋಪ-ಕೆ.ವಿ. ಪ್ರಸಾದ್.

ಉಪ್ಪಿನಂಗಡಿ: ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಮೃತ ಮಹೋತ್ಸವ ಪ್ರಯುಕ್ತ ಬೆಳ್ತಂಗಡಿ ಪ್ರಸನ್ನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಉಚಿತ ಆಯುರ್ವೇದ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಸೆ. 25ರಂದು ಇಳಂತಿಲದ ಅಂಡೆತ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.

ಕಾರ‍್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಉದ್ಘಾಟಿಸಿ ಮಾತನಾಡಿ ದೇಹದ ಆರೋಗ್ಯದ ಜೊತೆಗೆ ಮನಸ್ಸು, ಬುದ್ಧಿ, ಆತ್ಮ ಪರಿಶುದ್ಧತೆಯ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು, ಇದಕ್ಕೆ ಪೂರಕವಾಗಿ ಜನರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಇದೊಂದು ಉತ್ತಮ ಕಾರ‍್ಯಕ್ರಮವಾಗಿದ್ದು, ಶಿಬಿರಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಬೆಳ್ತಂಗಡಿ ಪ್ರಸನ್ನ ಆಯುರ್ವೇದ ಮೆಡಿಕಲ್ ಕಾಲೇಜು ಇದರ ಪ್ರಾಂಶುಪಾಲರಾದ ಡಾ. ಬಿ.ಕೆ. ಪ್ರಶಾಂತ್ ಮಾತನಾಡಿ ಹಿತ್ತಲ ಗಿಡ ಮದ್ದಲ ಎನ್ನುತ್ತಾರೆ, ಅದೇ ರೀತಿಯಲ್ಲಿ ಆಯುರ್ವೇದ ಚಿಕಿತ್ಸೆಯ ಬಗ್ಗೆಯೂ ಬಹಳ ತಾತ್ಸಾರದ ಮಾತುಗಳು ಕೇಳಿ ಬರುತ್ತಿರುತ್ತದೆ, ಇದು ಸಲ್ಲದು ಎಂದ ಅವರು ಮಾಹಿತಿಯ ಕೊರತೆಯಿಂದಾಗಿ ಈ ರೀತಿ ಆಗುತ್ತಿದ್ದು, ಜನರು ಇದರ ಬಗ್ಗೆ ತಿಳಿದುಕೊಂಡರೆ ನಮ್ಮ ಆರೋಗ್ಯ ಕಾಪಾಡುವ ವ್ಯವಸ್ಥೆ ನಮ್ಮಲ್ಲಿಯೇ ಇರುತ್ತದೆ, ಈ ನಿಟ್ಟಿನಲ್ಲಿ ನಾವು ತಿಳಿದುಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಅಮೃತ ಮಹೋತ್ಸವ ಸಮಾರಂಭದ ನಿಮಿತ್ತ ನಡೆಯುವ 8ನೇ ಕಾರ‍್ಯಕ್ರಮ ಇದಾಗಿದ್ದು, ನಮ್ಮ ಸಂಸ್ಥೆ ಕೇವಲ ಕೃಷಿ ಮಾತ್ರಕ್ಕೆ ಸೀಮಿತವಾಗದೆ ಸದಸ್ಯರಿಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಈ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಮ್ಮ ನಿರೀಕ್ಷೆಯನ್ನು ಮೀರಿ ಜನರು ಸ್ಪಂಧಿಸುತ್ತಿದ್ದಾರೆ, ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಅಮೃತ ಮಹೋತ್ಸವದ ಸಮಾರೋಪ ನಡೆಯಲಿದೆ ಎಂದು ಹೇಳಿದರು.

ಆಯುಷ್ ಫೆಡರೇಶನ್ ಅಧ್ಯಕ್ಷ ಡಾ. ನಾರಾಯಣ ಅಸ್ರ, ಇಳಂತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಿಕಾ ಭಟ್ ಸಂದರ್ಭೋಚಿತವಾಗಿ ಮಾತನಾಡಿದರು. ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮಾಜಿ ನಿರ್ದೇಶಕರಾದ ರೊನಾಲ್ಡ್ ಪಿಂಟೋ, ಪೂವಪ್ಪ ನಾಯ್ಕ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಲೇರಿ ವೇಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಾಧಕರಿಗೆ ಸನ್ಮಾನ:
ಸಹಕಾರಿ ಸಂಘ ವ್ಯಾಪ್ತಿಯಲ್ಲಿರುವ ಅಂತರ್ಜಲ ಶೋಧಕ ಈಶ್ವರ ಭಟ್ ಕಾಯರ್ಪಾಡಿ, ನಿವೃತ್ತ ಅಂಚೆ ವಿತರಕ ಚೆನ್ನಪ್ಪ ಗೌಡ ಕಂಗಿನಾರುಬೆಟ್ಟು, ಪ್ರಗತಿಪರ ಕೃಷಿಕರಾದ ಈಶ್ವರ ಭಟ್ ಪಾರಡ್ಕ, ಕೃಷ್ಣ ಮಲೆಕುಡಿಯ, ದೈವ ಪರಿಚಾರಕ ಹರಿಯಪ್ಪ ಗೌಡ, ದೈವ ನರ್ತಕ ಕೂಸಪ್ಪ ಮಿತ್ತಿಲ ಇವರುಗಳನ್ನು ಸನ್ಮಾನಿಸಲಾಯಿತು.

150 ಮಂದಿಗೆ ಚಿಕಿತ್ಸೆ, ಔಷಧಿ ವಿತರಣೆ

150 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದು, ಚಿಕಿತ್ಸೆ ಮತ್ತು ಔಷಧಿ ವಿತರಿಸಲಾಯಿತು. ಬೆಳ್ತಂಗಡಿ ಪ್ರಸನ್ನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಮಹೇಶ್, ಡಾ. ದೇವಾನಂದ, ಡಾ. ಮಿಥುನ್, ಡಾ. ಅಕ್ಷತ, ಡಾ. ರಾಜೇಶ್ವರಿ, ಡಾ. ದೀನ ಮಂಜು ಮತ್ತು ಉಪ್ಪಿನಂಗಡಿಯ ಡಾ. ಸುಪ್ರೀತ್ ಲೋಬೋ ಇವರುಗಳು ಶಿಬಿರಾರ್ಥಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಸಮಾರಂಭದಲ್ಲಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮಾಜಿ ಅಧ್ಯಕ್ಷ ಪೆಲಪ್ಪಾರು ವೆಂಕಟ್ರರಮಣ ಭಟ್, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯನ್. ಗೋಪಾಲ ಹೆಗ್ಡೆ, ಮಾಜಿ ನಿರ್ದೇಶಕ ರಾಮಚಂದ್ರ ಮಣಿಯಾಣಿ, ಸ್ಥಳೀಯ ಪ್ರಮುಖರಾದ ವಿಜಯಕುಮಾರ್ ಕಲ್ಲಳಿಕೆ, ಧರ್ನಪ್ಪ ನಾಯ್ಕ್, ಜಯಾನಂದ ಕಲ್ಲಾಪು, ರವೀಂದ್ರ ದರ್ಬೆ, ಗಣರಾಜ ಕುಂಬ್ಳೆ, ಶಾಲಾ ಮುಖ್ಯ ಶಿಕ್ಷಕ ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಸ್ವಾಗತಿಸಿ, ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು ವಂದಿಸಿದರು. ನಿರ್ದೇಶಕರಾದ ಜಗದೀಶ್ ರಾವ್, ಯಮ್.ಯನ್. ಕುಂಞಾ, ಸಚಿನ್ ಪುತ್ಯ, ಸುಜಾತ ಆರ್.ರೈ, ರಾಮ್ ನಾಯ್ಕ, ಸಿಬ್ಬಂದಿಗಳಾದ ಯಚ್. ಪುಷ್ಪರಾಜ್ ಶೆಟ್ಟಿ, ಪ್ರವೀಣ್ ಆಳ್ವ, ಶೋಭಾ, ಶಶಿಧರ್ ವಿವಿಧ ಕಾರ‍್ಯಕ್ರಮ ನಿರ್ವಹಿಸಿದರು. ಡಾ. ಗೋವಿಂದ ಪ್ರಸಾದ್ ಕಜೆ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here