ಕಾವು ಪಂಚಲಿಗೇಶ್ವರ ದೇವಾಲಯದ ಧಾರ್ಮಿಕ ಶಿಕ್ಷಣ ಕೇಂದ್ರಕ್ಕೆ ಇಸ್ಕಾನ್ ದೇವ ಮಂದಿರದ ಧರ್ಮ ಪ್ರಚಾರಕರ ಭೇಟಿ, ಭಗವದ್ಗೀತೆ ಪುಸ್ತಕ ಕೊಡುಗೆ

0

ಕಾವು: ಸನಾತನ ಹಿಂದೂ ಧರ್ಮದ ಆಚಾರ, ವಿಚಾರ ಮತ್ತು ಮತ್ತು ಸಂಸ್ಕೃತಿ ಸಂಸ್ಕಾರವನ್ನು ಮುಂದಿನ ಪೀಳಿಗೆಯ ಪ್ರತಿ ಮಗುವಿಗೂ ತಿಳಿಸುವ ಉದ್ದೇಶದಿಂದ ಸುಜ್ಞಾನ ದೀಪಿಕೆ ಪಠ್ಯಪುಸ್ತಕ ಆಧಾರಿತವಾಗಿ ಮಕ್ಕಳಿಗೆ ನೀತಿ ಕಥೆಗಳು, ದೇವರ ಶ್ಲೋಕಗಳು,ಧರ್ಮಾಚರಣೆಯ ಅವಶ್ಯಕತೆ, ಗುರು ಹಿರಿಯರನ್ನು ಗೌರವಿಸುವ ಮಾರ್ಗದರ್ಶನ, ರಾಷ್ಟ್ರಭಕ್ತಿ, ಸನಾತನ ಸಂಸ್ಕೃತಿಯ ವಿಚಾರಧಾರೆಗಳನ್ನು ಒಡಮೂಡಿಸುವ ಉದ್ದೇಶದಿಂದ ಕಾವು ಶ್ರೀ ಪಂಚಲಿಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಧಾರ್ಮಿಕ ಶಿಕ್ಷಣ ಕೇಂದ್ರಕ್ಕೆ ಬೆಂಗಳೂರು ಇಸ್ಕಾನ್ ದೇವ ಮಂದಿರದ ಧರ್ಮ ಪ್ರಚಾರಕರಾದ ಗುರುರಾಜ್ ಪ್ರಭು ಮತ್ತು ಸರ್ವನಾಥ್ ನಿತ್ತೈ ದಾಸ್ ಅವರು ಭೇಟಿ ನೀಡಿ ಮಕ್ಕಳ ಧಾರ್ಮಿಕ ಶಿಕ್ಷಣ ಕೇಂದ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೂ ಶಿಕ್ಷಣ ಕೇಂದ್ರದ ಮಕ್ಕಳಿಗೆ ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆ ಓದುವುದರ ಮಹತ್ವ ವಿವರಿಸುವುದರ ಜೊತೆಗೆ “ಹರೇ ಕೃಷ್ಣ ಹರೇ ರಾಮ” ಭಜನೆಯನ್ನು ಪ್ರಸ್ತುತ ಪಡಿಸಿ 70 ಮಕ್ಕಳಿಗೂ ಭಗವದ್ಗೀತೆ ಗ್ರಂಥವನ್ನು ಕೊಡುಗೆಯಾಗಿ ನೀಡಿದರು.

ಶ್ರೀ ಮಧ್ವಾದೀಶ ವಿಠಲದಾಸ ನಾಮಾಂಕಿತ ದಾಸ ಸಂಕೀರ್ತನಕಾರರು ದಾಸ ಸಾಹಿತ್ಯ ಪ್ರಚಾರಕರಾದ ರಾಮಕೃಷ್ಣ ಕಾಟುಕುಕ್ಕೆರವರು ಮಕ್ಕಳಿಗೆ ಭಜನಾ ತರಬೇತಿ ನೀಡಿದರು.

ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದಿಂದ ಗೌರವಾರ್ಪಣೆ

ಭಗವದ್ಗೀತೆ ಗ್ರಂಥವನ್ನು ಕೊಡುಗೆ ನೀಡಿದ ಇಸ್ಕಾನ್ ದೇವ ಮಂದಿರದ ಧರ್ಮ ಪ್ರಚಾರಕರಾದ ಗುರುರಾಜ್ ಪ್ರಭು ಮತ್ತು ಸರ್ವನಾಥ್ ನಿತ್ತೈ ದಾಸ್ ಅವರಿಗೆ ಕಾವು ಶ್ರೀ ಪಂಚಲಿಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ವತಿಯಿಂದ ಶಾಲು ಹಾಕಿ,ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಲಾಯಿತು. ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ಪವಿತ್ರಪಾಣಿ ನನ್ಯ ಅಚ್ಯುತ ಮೂಡಿತ್ತಾಯ, ಸುಳ್ಯ ಶಾಂತಿನಗರದ ದೀಪಾಂಜಲೀ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಹರ್ಷ ಕರುಣಾಕರ, ಸದಸ್ಯೆ ಹೇಮಲತ ದೇಂಗೋಡಿ, ಕಾವು ಶ್ರೀ ಪಂಚಲಿಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಕೃಷ್ಣಪ್ರಸಾದ್ ಕೊಚ್ಚಿ, ಧಾರ್ಮಿಕ ಶಿಕ್ಷಣ ಕೇಂದ್ರದ ಶಿಕ್ಷಕರಾದ ವೀರಪ್ಪ ಗೌಡ ದುಗ್ಗಲ, ದೀಪಕ್ ಕುಲಾಲ್ ಕೌಡಿಚ್ಚಾರು, ಲಲಿತಾ ಸಂಜೀವ ಗೌಡ ಚಾಕೋಟೆ, ಹೇಮಲತಾ ಕಜೆಗದ್ದೆ ,ಗಂಗಾಧರ ನಾಯ್ಕ ಉಪಸ್ಥಿತರಿದ್ದರು. ಶರಣ್ಯ,ಚರಿಷ್ಮಾ, ವಿಜಯಲಕ್ಷ್ಮಿ ಪ್ರಾರ್ಥಿಸಿದರು. ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ ಸ್ವಾಗತಿಸಿ ಸದಸ್ಯ ಕೃಷ್ಣ ಪ್ರಸಾದ್ ಕೊಚ್ಚಿ ವಂದಿಸಿದರು.ಶಿಕ್ಷಕಿ ಹೇಮಲತಾ ಕಜೆಗದ್ದೆ ಕಾರ್ಯಕ್ರಮ ನಿರ್ವಹಿಸಿದರು.

‘ಹಿಂದೂ ಧರ್ಮದಲ್ಲಿ ಲೌಕಿಕ ಶಿಕ್ಷಣ ಪದ್ಧತಿ ಉತ್ತಮವಾಗಿದ್ದು ಧಾರ್ಮಿಕ ಶಿಕ್ಷಣದ ಕೊರತೆಯಿದೆ. ತಾಳ್ಮೆ ,ಕೂಡು ಕುಟುಂಬ ಪದ್ದತಿಗಳು ಹಾಳಾಗುತ್ತಿದ್ದು, ಈ ಸಂದರ್ಭದಲ್ಲಿ ಹಿಂದೂ ಸಮಾಜದ ಪುನರುತ್ಥಾನ ಗೊಳಿಸುವ ಉದ್ದೇಶದಿಂದ ಅಳಿಲು ಸೇವಾ ರೂಪದಲ್ಲಿ ಆರಂಭಿಸಿದ ಧಾರ್ಮಿಕ ಶಿಕ್ಷಣ ಕೇಂದ್ರಕ್ಕೆ ಮಕ್ಕಳು, ಪೋಷಕರು ಮತ್ತು 8 ಮಂದಿ ಶಿಕ್ಷಕರು ಯಾವುದೇ ಫಲಾಪೇಕ್ಷೆ ಇಲ್ಲದೆ ಉತ್ತಮ ಸಹಕಾರ ನೀಡುತ್ತಿದ್ದು ಇದೀಗ ಇಸ್ಕಾನ್ ಸಂಸ್ಥೆಯು ಉಚಿತವಾಗಿ 70 ಮಕ್ಕಳಿಗೆ ಭಗವದ್ಗೀತೆ ಗ್ರಂಥವನ್ನು ನೀಡುವುದರ ಮೂಲಕ ಶಿಕ್ಷಣ ಕೇಂದ್ರಕ್ಕೆ ಮತ್ತಷ್ಟು ಪ್ರೋತ್ಸಾಹ ಹಾಗೂ ಈ ಪುಣ್ಯ ಕಾರ್ಯಕ್ಕೆ ಸಹಕಾರ ನೀಡಿರುವುದು ಬಹಳ ಸಂತೋಷದ ವಿಚಾರವಾಗಿದೆ’

ಭಾಸ್ಕರ ಬಲ್ಯಾಯ.

ಕಾವು ಶ್ರೀ ಪಂಚಲಿಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರು,

ಧಾರ್ಮಿಕ ಶಿಕ್ಷಣ ಕೇಂದ್ರದ ಸಂಯೋಜಕರು.

LEAVE A REPLY

Please enter your comment!
Please enter your name here