ಅ.5 : ಸವಣೂರಿನಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ

0

ಸವಣೂರು : ಶಾರದಾಂಬಾ ಸೇವಾ ಸಂಘದ ವತಿಯಿಂದ ಸವಣೂರಿನ ವಿನಾಯಕ ಸಭಾಭವನದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀಶಾರದೋತ್ಸವ ಅ.5ರಂದು ನಡೆಯಲಿದೆ.

ಅ.5ರಂದು ಬೆಳಿಗ್ಗೆ ೮ಕ್ಕೆ ಧ್ವಹಾರೋಹಣವನ್ನು ಉದಯ ಕುಮಾರ್‌ ಸರ್ವೆ ಮಾಡುವರು.8.30ಕ್ಕೆ ದೇವಿಯ ಪ್ರತಿಷ್ಟೆ ,ಗಣಹೋಮ ನಡೆಯಲಿದೆ.9.30ರಿಂದ ಮುಗೇರು ಶ್ರೀಮಹಾವಿಷ್ಣು ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಸಭಾ ಕಾರ್ಯಕ್ರಮದಲ್ಲಿ ಜ್ಯೋತಿಷ್ಯ ವಿದ್ವಾನ್‌ ವಿಶ್ವಮೂರ್ತಿ ಬಡೆಕ್ಕಿಲ್ಲಾಯ ಅವರು ಧಾರ್ಮಿಕ ಉಪನ್ಯಾಸ ನೀಡುವರು.ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ.ವಿ.ಶೆಟ್ಟಿ ವಹಿಸುವರು.ಅತಿಥಿಗಳಾಗಿ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು ಪಾಲ್ಗೊಳ್ಳುವರು.ಕಾರ್ಯಕ್ರಮದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಕೆ.ಸೀತಾರಾಮ ರೈ ಸವಣೂರು,ಅಭಿವೃದ್ದಿ ಶೀಲ ಸಂಶೋಧಕಿ ಆಶಾ ರೈ ಕಲಾಯಿ,ಸ್ವ ಉದ್ಯೋಗದಲ್ಲಿ ಯಶಸ್ವಿಯಾಗಿರುವ ಸುಚಿತ್ರಾ ಬೊಳ್ಳಾಜೆ,ರೋಶನ್‌ ಮಾಲೆತ್ತಾರು,ಪುರುಷೋತ್ತಮ ಬಂಬಿಲ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಮಧ್ಯಾಹ್ನ ಮಹಾಪೂಜೆ ,ಪ್ರಸಾದ ವಿತರಣೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ

ಮಧ್ಯಾಹ್ನ ೧.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂಗಧ ಸಂಧಾನ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.ಮಧ್ಯಾಹ್ನ ೩.೩೦ರಿಂದ ವಿನೂತನ ಶೈಲಿಯ ವಿಠಲ ನಾಯಕ್‌ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ,ಸಂಜೆ ೫.೩೦ರಿಂದ ಮಹಾಪೂಜೆ,ಪ್ರಸಾದ ವಿತರಣೆ ,ಶ್ರೀಶಾರದಾ ಮೂರ್ತಿಯ ವಿಜೃಂಬಣೆಯ ಶೋಭಾಯಾತ್ರೆ ನಡೆದು ಸರ್ವೆ ಗೌರಿ ಹೊಳೆಯಲ್ಲಿ ಶಾರದಾ ಮೂರ್ತಿಯ ಜಲಸ್ಥಂಬನ ನಡೆಯಲಿದೆ ಎಂದು ಶಾರದಾಂಬಾ ಸೇವಾ ಸಂಘದ ಗೌರವಾಧ್ಯಕ್ಷ ಸೀತಾರಾಮ ರೈ ಸವಣೂರು,ಸ್ಥಾಪಕಾಧ್ಯಕ್ಷ ಮೋಹನ್‌ ರೈ ಕೆರೆಕ್ಕೋಡಿ,ಅಧ್ಯಕ್ಷ ಸಂಪತ್‌ ಕುಮಾರ್‌ ಇಂದ್ರ,ಕಾರ್ಯದರ್ಶಿ ಜತ್ತಪ್ಪ ಗೌಡ ಆರೇಲ್ತಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here