





ಪುತ್ತೂರು : ಪುತ್ತೂರಿನ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯವರ ನೂತನ ಫ್ರಾಂಚೈಸಿ ಕೇಂದ್ರ ಸೆ.26ರಂದು ಕಬಕದಲ್ಲಿ ಶುಭಾರಂಭಗೊಂಡಿತು.








ಲ್ಯಾಬೋರೇಟರಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ಧನ್ವಂತರಿ ಲ್ಯಾಬೋರೇಟರಿಯ ಮೆನೇಜಿಂಗ್ ಡೈರೆಕ್ಟರ್ ಚೇತನ್ ಪ್ರಕಾಶ್ ಕಜೆಯವರು ಬೆಳೆಯುತ್ತಿರುವ ಕಬಕ ಪೇಟೆಯಲ್ಲಿ ಒಂದು ಸುಸಜ್ಜಿತ ಲ್ಯಾಬೋರೇಟರಿ ಪ್ರಾರಂಭಿಸುವ ಉದ್ದೇಶ ಕಳೆದ ಎರಡು ವರ್ಷಗಳ ಹಿಂದೆಯೇ ಹೊಂದಿತ್ತು, ಅದು ಈಗ ಕಾರ್ಯಗತಗೊಂಡಿದೆ. ಇದು ಪ್ರಥಮ ಫ್ರಾಂಚೈಸಿ ಆಗಿದ್ದು ಇತರ ಕಡೆಗಳಲ್ಲಿ ಬ್ರಾಂಚ್‌ಗಳನ್ನು ಇತ್ತು. ಕಿಡ್ನಿ ಪಂಕ್ಷನ್, ಕೊಲೆಸ್ಟರಾಲ್, ಲಿವರ್ ಪಂಕ್ಷನ್‌ಗಳ ಟೆಸ್ಟ್‌ಗಳನ್ನು ಕ್ಲಪ್ತ ಸಮಯದಲ್ಲಿ ಇಲ್ಲಿ ಮಾಡಿಸಬಹುದಾಗಿದೆ. ಅತ್ಯಾಧುನಿಕವಾದ ಉಪಕರಣಗಳನ್ನು ಇಲ್ಲಿ ಅಳವಡಿಸಲಾಗಿದೆ, ಹೆಚ್ಚಿನ ಹಾರ್ಮೋನ್ ಟೆಸ್ಟ್‌ಗಳು ಅಗತ್ಯವಿದ್ದಾಗ ಪುತ್ತೂರು ಕೇಂದ್ರ ಲ್ಯಾಬೋರೇಟರಿಯಲ್ಲಿ ಪರೀಕ್ಷೆ ನಡೆಸಿ ತಕ್ಷಣ ಇಮೇಲ್, ಆಪ್ ಅಥವಾ ಇತರ ಮೆಸೇಂಜರ್ ಮೂಲಕ ತ್ವರಿತವಾಗಿ ಫಲಿತಾಂಶ ತಲುಪಿಸುವ ವ್ಯವಸ್ಥೆ ಇದೆ, ಇದರ ಪ್ರಯೋಜನವನ್ನು ಇಲ್ಲಿನ ಜನರು ಪಡೆದುಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳುದರೊಂದಿಗೆ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಮಾತನಾಡಿ, ಹಲವಾರು ವರ್ಷಗಳಿಂದ ಧನ್ವಂತರಿ ಸಂಸ್ಥೆಯ ಆರೋಗ್ಯ ಸೇವೆಯು ನಮಗೆಲ್ಲ ಉತ್ತಮ ವರದಾನ ವಾಗಿದೆ. ಇದೀಗ ಹಲವಾರು ಹೊಸ ವಿವಿಧ ರೀತಿಯ ರೋಗಗಳು ಜನರನ್ನು ಕಾಡುತ್ತಿರುವ ಸಂಧರ್ಭದಲ್ಲಿ ಇಂತಹ ಅತ್ಯಾಧುನಿಕವಾದ ಲ್ಯಾಬೋರೇಟರಿಯನ್ನು ಗ್ರಾಮಾಂತರ ಪ್ರದೇಶದ ಜನರ ಬಳಿ ತಲುಪಿಸಿದ ಇವರ ಕಾರ್ಯ ಶ್ಲಾಘನೀಯ ಇದು ಕಬಕವನ್ನು ಕೇಂದ್ರವಾಗಿಸಿ ಸುತ್ತ ಮುತ್ತಲಿನ ಎಲ್ಲಾ ಗ್ರಾಮಸ್ಥರಿಗೂ ಪ್ರಯೋಜನವಾಗಲಿದೆ ಎಂದು ಶುಭ ಹಾರೈಸಿದರು.

ಕಬಕ ಗ್ರಾ.ಪಂ.ಅಧ್ಯಕ್ಷ ವಿನಯ ಕುಮಾರ್ ಕಲ್ಲೇಗ, ಇಡ್ಕಿದು ಗ್ರಾ.ಪಂ.ಅಧ್ಯಕ್ಷ ಸುಽರ್ ಕುಮಾರ್ ಶೆಟ್ಟಿ, ಕಬಕ ಗ್ರಾ.ಪಂ. ಸದಸ್ಯ ಶಾಬ, ಕಟ್ಟಡ ಮಾಲಕ ರಾಮಣ್ಣ ಪೂಜಾರಿ, ರೋಯಲ್ ಹಾರ್ಡ್ ವೇರ್ ಮಾಲಕ ನಾಸೀರ್ ಕೋಲ್ಪೆ, ಯೂಸು- ಮಾಸ್ಟರ್ ಮಿತ್ತೂರು ಶುಭ ಹಾರೈಸಿದರು.
ರವಿ ಮೆಸ್ಕಾಂ, ಲೋಕೋಪಯೋಗಿ ಗುತ್ತಿಗೆದಾರ ಆದಂ ಎಂಎಂ ಎಸ್, ಅದ್ರಾಮ ಹಾಜಿ ಮಿತ್ತೂರು, ಅಬ್ದುಲ್ಲಾ ಹಾಜಿ ಎನ್.ಎಸ್. ಉಪಸ್ಥಿತರಿದ್ದರು. ಇಬ್ರಾಹಿಮ್ ಅಮ್ಮುಂಜೆ ಎನ್.ಎಸ್. ಹಾಗೂ -ಂಚೈಸಿ ಮಾಲಕ ಜವಾಝ್ ಅತಿಥಿಗಳನ್ನು ಸ್ವಾಗತಿಸಿ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಪವಾಝ್ ವಂದಿಸಿದರು. ಸೌಕತ್ ಕಬಕ ಕಾರ್ಯಕ್ರಮ ನಿರೂಪಿಸಿದರು, ಸಿಬ್ಬಂದಿಗಳಾದ ರಾಯಿಲ, ನಂದಾ ಮುಬೀನ್, ಇಂತಿಯಾಝ್, ರಮೀಝ್, ನಿಯಾಝ್ ಹಾಶಿಮ್ ಮುಂತಶೀರ್ ಸಹಕರಿಸಿದರು, ನೂರಾರು ಜನರು ಲ್ಯಾಬೋರೇಟರಿಗೆ ಭೇಟಿ ನೀಡಿ ಉದ್ಘಾಟನೆ ದಿನದ ಕೊಡುಗೆಯಾದ ಉಚಿತ ಬ್ಲಡ್ ಶುಗರ್ ತಪಾಸಣೆಯ ಪ್ರಯೋಜನ ಪಡೆದುಕೊಂಡರು.
ಅ.1ರಿಂದ ಕಬಕ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ಸಂಜೆ 5-30 ರಿಂದ 7ಗಂಟೆ ವರೇಗೆ ಡಾ|ಎಂ.ಎಲ್.ಭಟ್ ಮತ್ತು ಡಾ|ಅಶ್ರಫ್ ಚಿಕಿತ್ಸೆಗೆ ಲಭ್ಯರಿದ್ದಾರೆ ಎಂದು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಕಬಕ ಫ್ರಾಂಚೈಸಿ ಮುಖ್ಯಸ್ಥರಾದ ಜವಾಝ್ ತಿಳಿಸಿದ್ದಾರೆ.









