ಕಾಂಚನ ಶ್ರೀ ಲಕ್ಷ್ಮಿ ನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣ ಅಭಿಯಾನ

0

ಪುತ್ತೂರು: ಕಾಂಚನ ಶ್ರೀ ಲಕ್ಷ್ಮಿ ನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.23ರಂದು ಪೋಷಣ ಅಭಿಯಾನ ಕಾರ್ಯಕ್ರಮವನ್ನು ಆಚರಿಸಲಾಯಿತು.

ಶಾಲಾ ಮುಖ್ಯ ಗುರು ಎ.ಲಕ್ಷ್ಮಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಣ್ಣ ಮಗುವಿನ ಚುರುಕುತನದಿಂದ ಅದರ ಆರೋಗ್ಯವನ್ನು ಅಳೆಯಬಹುದು ಮತ್ತು ಪೌಷ್ಟಿಕಾಂಶ ಆಹಾರವನ್ನು ಒದಗಿಸುವಲ್ಲಿ ಸರಕಾರದ ಪಾತ್ರದ ಬಗ್ಗೆ ವಿವರಿಸಿದರು. ಮುಖ್ಯಅತಿಥಿಗಳಾಗಿ ಪೋಷಣ ಅಭಿಯಾನ ಉದ್ಘಾಟನಾ ಕಾರ್ಯಕ್ರಮವನ್ನು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಜಾಯ್ಸಿರವರು ನೆರವೇರಿಸಿ, ಪೌಷ್ಟಿಕ ಆಹಾರ ಸೇವಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಸವಿರ ಸವಿವರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಶಿಕ್ಷಕ ವೃಂದದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಗೀತ ಶಿಕ್ಷಕಿ ಪ್ರತಿಭಾ. ಎ ಮಾತನಾಡಿ ಪೋಷಣ ಅಭಿಯಾನ ಜಾರಿಗೆ ತಂದ ಉದ್ದೇಶ ಮತ್ತು ಪೋಷಣ ಮಾಸಾಚರಣೆಯಲ್ಲಿ ಮಕ್ಕಳು ಮತ್ತು ಪೋಷಕರು, ಸಮುದಾಯದ ಪಾತ್ರವನ್ನು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ  ಭಾಗ್ಯಲಕ್ಷ್ಮಿ. ಏನ್ ಇವರು ಸ್ವಾಗತಿಸಿ, ಶಿಕ್ಷಕಿ ಕುಮಾರಿ ಸುಮಾ ವಂದಿಸಿದರು, ಕಂಪ್ಯೂಟರ್ ಶಿಕ್ಷಕಿ  ಸೌಮ್ಯ ಬಿ.ಎ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here