ಉಪ್ಪಿನಂಗಡಿ: ಮಗುವಿನೊಂದಿಗೆ ಪತ್ನಿ ನಾಪತ್ತೆ-ದೂರು

0

ಪತಿಯಿಂದ ಹಿಂಸೆ ಆರೋಪ- ಮಹಿಳಾ ಆಯೋಗಕ್ಕೆ ದೂರು

ಉಪ್ಪಿನಂಗಡಿ: ಎಳೆ ವಯಸ್ಸಿನ ಮಗುವಿನೊಂದಿಗೆ ಪತ್ನಿ ನಾಪತ್ತೆಯಾಗಿರುವ ಬಗ್ಗೆ ವ್ಯಕ್ತಿಯೋರ್ವರು ಉಪ್ಪಿನಂಗಡಿ ಪೊಲೀಸರಿಗೆ ದೂರು ಇತ್ತರೆ, ಅದೇ ವೇಳೆ ಗಂಡನ ಹಿಂಸೆಯಿಂದ ರಕ್ಷಣೆ ಕೋರಿ ಪತ್ನಿ ಮಹಿಳಾ ಆಯೋಗದ ಕಚೇರಿಗೆ ದೂರು ನೀಡಿದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.

ಬಂಟ್ವಾಳ ತಾಲೂಕು ಪರ್ನೆ ಗ್ರಾಮದ ನಿವಾಸಿಯಾಗಿರುವ ಈ ದಂಪತಿ ಪೈಕಿ ಪತ್ನಿ ಮತ್ತು ನಾಲ್ಕು ವರ್ಷದ ಮಗು ಬುಧವಾರದಂದು ಮನೆಯಿಂದ ನಾಪತ್ತೆಯಾಗಿರುವುದನ್ನು ಕಂಡು ಕಂಗೆಟ್ಟ ಗಂಡ ತೋಟದ ಕೆರೆ ಬಾವಿಯನ್ನೆಲ್ಲಾ ಜಾಲಾಡಿಸಿದರು. ಬಂಧು ಮಿತ್ರರಲ್ಲಿ ವಿಚಾರಿಸಿದರು. ಪತ್ತೆಯಾಗದೇ ಹೋದಾಗ ಪೊಲೀಸರಿಗೆ ದೂರು ಸಲ್ಲಿಸಿ ಪತ್ನಿ ಮಗುವನ್ನು ಪತ್ತೆ ಹಚ್ಚಿ ಕೊಡಬೇಕೆಂದು ವಿನಂತಿಸಿದ್ದರು. ಇತ್ತ ದೂರು ಸ್ವೀಕರಿಸಿ ಪತ್ತೆ ಕಾರ್ಯಕ್ಕೆ ಮುಂದಾದ ಪೊಲಿಸರಿಗೆ ನಾಪತ್ತೆಯಾಗಿರುವ ಮಹಿಳೆ ತನ್ನ ಮಗುವಿನೊಂದಿಗೆ ಮಹಿಳಾ ಆಯೋಗದ ಕಚೇರಿಗೆ ಭೇಟಿ ನೀಡಿ ಗಂಡನ ಹಿಂಸೆಯಿಂದ ನಮ್ಮನ್ನು ರಕ್ಷಿಸಬೇಕೆಂದು ದೂರು ನೀಡಿದ್ದ ವಿಚಾರ ತಿಳಿದುಬಂತು. ಈ ಬಗ್ಗೆ ಮಹಿಳೆ ಮತ್ತು ಮಗುವನ್ನು ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಿಸಿದಾಗ ಮಹಿಳೆ ತನ್ನ ಗಂಡನ ವಿರುದ್ದ ತೀವ್ರ ನೊಂದುಕೊಂಡಿರುವ ಕುರಿತು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವ ತನಕ ಆಕೆಯ ಅಪೇಕ್ಷೆಯಂತೆ ಆಕೆ ತನ್ನ ಮಗುವಿನೊಂದಿಗೆ ತವರು ಮನಗೆ ಹೋಗಲು ಅವಕಾಶ ನೀಡಲಾಯಿತು.

LEAVE A REPLY

Please enter your comment!
Please enter your name here