ಉಪ್ಪಿನಂಗಡಿ: ಗಾಂಜಾ ಮಾರಾಟ ಶಂಕೆ – ಯುವಕನ ಬೆನ್ನಟ್ಟಿದ ತಂಡದ ಕಾರಿಗೆ ಕಲ್ಲು ತೂರಾಟ

0

ಉಪ್ಪಿನಂಗಡಿ: ಗಾಂಜಾ ಮಾರಾಟ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರನ್ನು ಬೆನ್ನಟ್ಟಿಕೊಂಡು ಬಂದ ತಂಡದ ಮೇಲೆ ಗುಂಪೊಂದು ದಾಳಿ ನಡೆಸಿದ ಘಟನೆ ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್ ಬಳಿ ನಡೆದಿದೆ.

ಗಾಂಜಾ ಮಾರಾಟ ಮಾಡುತ್ತಿದ್ದಾರೆಂದು ಶಂಕಿಸಿ ಸಿದ್ದಿಕ್ ಎಂಬಾತನನ್ನು ಬೆನ್ನಟ್ಟಿ ಬಂದ ಕರಾಯ ಪರಿಸರದ ಯುವಕರ ತಂಡವಿದ್ದ ಕಾರಿಗೆ ತಂಡವೊಂದು ಕಲ್ಲೆಸೆದು ಪರಸ್ಪರ ಹಲ್ಲೆ ನಡೆಸಿ ದಾಂಧಲೆಯನ್ನುಂಟು ಮಾಡಿದ್ದರೆಂದೂ, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ರಾತ್ರಿಯವರೆಗೆ ಯಾರಿಂದಲೂ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here