ಸೆ.30: ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ|ಉದಯ ಕಾನ ಸೇವಾ ನಿವೃತ್ತಿ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿರುವ ಗಣಿತ ವಿಭಾಗ ಮುಖ್ಯಸ್ಥ ಪ್ರೊ|ಉದಯ ಕಾನರವರು ಸುಮಾರು ೩೫ ವರ್ಷಗಳ ಶೈಕ್ಷಣಿಕ ಸೇವೆಯ ಬಳಿಕ ಸೆ.೩೦ ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

೧೯೬೨ರ ಸಪ್ಟೆಂಬರ್ ೨೨ರಂದು ಜನಿಸಿದ ಪ್ರೊ|ಉದಯ ಕಾನರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಾನತ್ತಡ್ಕ ವಿದ್ಯೋದಯ ಶಾಲೆಯಲ್ಲಿ, ಅಳಿಕೆಯ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ, ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಉಜಿರೆಯ ಶ್ರೀ ಧ.ಮಂಜುನಾಥೇಶ್ವರ ಕಾಲೇಜು ಮತ್ತು ಪುತ್ತೂರಿನ ವಿವೇಕಾನಂದ ಕಾಲೇಜುಗಳಲ್ಲಿ ಪೂರೈಸಿದರು. ಮಂಗಳೂರು ವಿವಿಯಿಂದ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂಫಿಲ್ ಪದವಿ ಗಳಿಸಿದರು. ೧೯೮೭ರಲ್ಲಿ ಉಡುಪಿಯ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಗಣಿತ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿ, ಅಲ್ಲಿ ಹದಿನೈದು ವರ್ಷಗಳ ಸೇವೆಯ ಬಳಿಕ ೨೦೦೨ರಲ್ಲಿ ವರ್ಗಾವಣೆಗೊಂಡು ಸಂತ ಫಿಲೋಮಿನಾ ಕಾಲೇಜು ಸೇರಿದರು.

ವಿಜ್ಞಾನ ಸಂಘದ ನಿರ್ದೇಶಕ, ವಿದ್ಯಾರ್ಥಿ ಕ್ಷೇಮಪಾಲನಾಅಧಿಕಾರಿ, ೨೦೦೪-೨೦೧೦ರ ತನಕ ಕಾಲೇಜಿನ ಆಂತರಿಕ ಗುಣಮಟ್ಟಕೋಶದ ನಿರ್ದೇಶಕ, ವಿಜ್ಞಾನ ನಿಕಾಯದ ಡೀನ್, ಉಪಪ್ರಾಂಶುಪಾಲ ಹೀಗೆ ಹಲವು ಜವಾಬ್ಧಾರಿಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಪ್ರೊ|ಉದಯರವರು ಮಂಗಳೂರು ವಿವಿಯ ಗಣಿತಶಾಸ್ತ್ರ ಅಧ್ಯಾಪಕ ಸಂಘದ ಅಧ್ಯಕ್ಷರಾಗಿ, ವಿವಿ ಮತ್ತು ಸ್ವಾಯತ್ತ ಕಾಲೇಜುಗಳ ಶೈಕ್ಷಣಿಕ ಮತ್ತುಪರೀಕ್ಷಾ ಮಂಡಳಿಗಳ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here