ಬಡಗನ್ನೂರುಃ ದ. ಕ. ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಾಥಮಿಕ ಆರೋಗ್ಯ ಕೇಂದ್ರ, ಈಶ್ವರಮಂಗಲ ಹಾಗೂ ಶ್ರೀಕೃಷ್ಣ ಯುವಕ ಮಂಡಲ ಪಟ್ಟೆ (ರಿ.)ಇವರ ಸಹಯೋಗದೊಂದಿಗೆ-ರಕ್ತದಾನ ಶಿಬಿರ ಹಾಗೂ ತೀವ್ರ ಅಪೌಷ್ಠಿಕ ಮಕ್ಕಳ ತಪಾಸಣಾ ಶಿಬಿರವು ಸೆ.28 ರಂದು ಪಟ್ಟೆ ಶ್ರೀ ಕೃೃಷ್ಣ ಹಿರಿಯ ಪ್ರಾಥಮಿಕಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪಟ್ಟೆ ವಿದ್ಯಾಸಂಸ್ಥೆಗಳ ಸಂಚಾಲಕ ನಾರಾಯಣ ಭಟ್ ಬಿರ್ನೋಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಪುತ್ತೂರು ತಾಲೂಕು ವೈದ್ಯಾಧಿಕಾರಿ ದೀಪಕ್ ರೈ ಮಾತನಾಡಿ, ಪ್ರಸೂತಿ ಸಂದರ್ಭದಲ್ಲಿ ತಾಯಿಯಂದಿರ ಮರಣ ತಡೆಗಟ್ಟಲು ಮತ್ತು ಮಕ್ಕಳಿಗೆ ಬರುವ ಕೆಲವೊಂದು ಅರೋಗ್ಯ ಸಮಸ್ಯೆಗೂ ರಕ್ತದ ಅವಶ್ಯಕತೆ ಬೇಕಾಗುತ್ತದೆ. ಸಮಾಜದಲ್ಲ ಶಿಕ್ಷಣ ಮತ್ತು ಅರೋಗ್ಯ ವ್ಯವಸ್ಥೆ ಉತ್ತಮವಾಗಿದ್ದಾರೆ ಅಲ್ಲಿ ಎಲ್ಲಾ ವ್ಯವಸ್ಥೆ ಉತ್ತಮವಾಗಿರುತ್ತದೆ ಎಂದು ಅರ್ಥ.ಎಂದ ಅವರು 2020 ರ ಹೊತ್ತಿಗೆ ಇಡೀ ದೇಶದಲ್ಲಿ ಕ್ಷಯರೋಗ ನಿರ್ಮೂಲನ ಮಾಡುವ ಸಂಕಲ್ಪ ಭಾರತ ಸರ್ಕಾರದಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ಭಾಗದಲ್ಲಿ ಅರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಕಪ ಪರೀಕ್ಷೆ ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ. ಕ್ಷಯ ಮಿತ್ರ ಯೋಜನೆಯಡಿ ಕ್ಷಯರೋಗಿಯನ್ನು ದತ್ತು ಸ್ವೀಕರಿಸಲು ಅವಕಾಶ ವಿದೆ. ತಿಂಗಳಿಗೆ 500 ರೂ ನ ಪೌಷ್ಟಿಕ ಆಹಾರ ಕಿಟ್ ನೀಡಬೇಕಾಗುತ್ತದೆ. ನಾನು ಕೋಡಾ ಇಬ್ಬರೂ ರೋಗಿಗಳನ್ನು ದತ್ತು ಪಡೆದು ಕೊಂಡಿದ್ದೇನೆ ಎಂದ ಅವರು ಸೆ.14 ರಿಂದ 30 ರೊಳಗೆ ರೇಬೀಸ್ ಲಸಿಕೆ ಅಭಿಯಾನ ಮಾಡಿ ಸೆ.30 ಕ್ಕೆ .ರೇಬೀಸ್ ವಿರೋಧಿ ಲಸಿಕ ದಿನಾಚರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಪಿ.ಎಮ್ ಜೆ ವೈ ಕಾರ್ಡ್ ಮೂಲಕ ಅರೋಗ್ಯ ಸೌಲಭ್ಯ:-
ಸರ್ಕಾರಿ ಅರೋಗ್ಯ ಸೌಲಭ್ಯಗಳು ಮುಂದೆ ಪಿ.ಎಮ್ .ಜೆ.ವೈ ಕಾರ್ಡ್ ಮುಖಾಂತರ ಇಡೀ ದೇಶದಲ್ಲಿ ದೊರಕಿಸುವ ನಿಟ್ಟಿನಲ್ಲಿ ಅಯಿಷ್ಮನ್ ಕಾರ್ಡ್ ಬದಲಾಗಿ ಪಿ.ಎಮ್ .ಜೆ.ವೈ ಕಾರ್ಡ್ ಮಾಡಿಕೊಳ್ಳುವಂತೆ ಹೇಳಿದರು.
ಬಡಗನ್ನೂರು ಗ್ರಾ.ಪಂ ಉಪಾಧ್ಯಕ್ಷ ಸಂತೋಷ್ ಆಳ್ವ ಮಾತನಾಡಿ ರಕ್ತದಾನ ಮಹಾದಾನ ಯಾವುದೇ ವಸ್ತುಗಳನ್ನು ಕೃತಕ ಸೃಷ್ಟಿ ಮಾಡಬಹುದು ಅದರೆ ರಕ್ತವನ್ನು ಕೃತಕ ಸೃಷ್ಟಿ ಮಾಡಲು ಸಾಧ್ಯವಿಲ್ಲ, ರಕ್ತದಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಅನಿವಾರ್ಯತೆ ಇದೆ ಎಂದರು.
ಶ್ರೀ ಕೃಷ್ಣ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ ಭಟ್ ಮಾತನಾಡಿ ರಕ್ತದಾನ ಎಂದರೆ ಜೀವದಾನ 18 ವರ್ಷದಿಂದ 60 ವರ್ಷದವರೆಗಿನವರಿಗೆ ರಕ್ತದಾನ ಮಾಡಲು ಅವಕಾಶ ಇದೆ.ಗಂಡಸರಿಗೆ ಪ್ರತಿ ಮೂರು ತಿಂಗಳು ಮತ್ತು ಹೆಂಗಸರಿಗೆ 4 ತಿಂಗಳಿಗೊಮ್ಮೆ ರಕ್ತದಾನ ಮಾಡಲು ಅವಕಾಶ ಇದೆ. ಪಟ್ಟೆ ವಿದ್ಯಾಸಂಸ್ಥೆ ಹಾಗೂ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದಕ್ಕೂ ಅವಿನಾಭಾವ ಸಂಬಂಧ ಇದೆ ಕರೋನ ಸಂದರ್ಭದಲ್ಲಿ ನಮ್ಮ ಸಂಸ್ಥೆಯಲ್ಲಿ 17 ಬಾರಿ ಚಿಕಿತ್ಸೆ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ಪಾಲ್ತಾಡಿ ಆರೋಗ್ಯದ ವೈದ್ಯಾಧಿಕಾರಿ ಮಧುಶ್ರೀ ಮಕ್ಕಳ ಅಪೌಷ್ಟಿಕತೆ ಮತ್ತು ಅದರ ನಿವಾರಣೆ ಬಗ್ಗೆ ಮಾಹಿತಿ ಸಮಗ್ರ ನೀಡಿದರು. ಪಟ್ಟೆ ಶ್ರೀ ಕೃಷ್ಣ ಯುವಕ ಮಂಡಲದ ಅಧ್ಯಕ್ಷ ಲಿಂಗಪ್ಪ ಸಂದರ್ಭೋಚಿತ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ನಿಕಲ್, ರೋಟರಿರಕ್ತದಾನ ಸಂಸ್ಥೆಯ ಡಾ. ರಾಮಚಂದ್ರ ಭಟ್ ಉಪಸ್ಥಿತರಿದ್ದರು
ಸಭೆಯು ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖಾ ಅಂಗನವಾಡಿ ಮೇಲ್ವಿಚಾರಕಿ ಸರೋಜಿನಿ, ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನಾ, ಶಿಕ್ಷಕಿಯಾರದ ಪ್ರೀತಿ, ಜಯಶ್ರೀ, ಭವಿತಾ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಶ್ರೀ ಕೃಷ್ಣ ಯುವಕ ಮಂಡಲದ ಸದಸ್ಯರು, ರಕ್ತದಾನಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಈಶ್ವರಮಂಗಲ ಕಿರಿಯ ಅರೋಗ್ಯ ಸುರಕ್ಷಣಾಧಿಕಾರಿಯಾದ ವನಿತಾ ಸ್ವಾಗತಿಸಿ, ನಂದಿನಿ ವಂದಿಸಿದರು. ಹಿರಿಯ ಅರೋಗ್ಯ ಸುರಕ್ಷಣಾಧಿಕಾರಿ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಅರೋಗ್ಯ ಕೇಂದ್ರದ ಸಿಬ್ಬಂದಿಗಳು ಸಹಕರಿಸಿದರು. ಶಿಬಿರದಲ್ಲಿ ಸುಮಾರು 30 ಮಂದಿ ಸ್ವಯಂ ರಕ್ತದಾನಿಗಳು ರಕ್ತದಾನ ಮಾಡಿದರು.