ಕೇರಳದಲ್ಲಿ ರೈಲಿನಿಂದ ಹೊರಕ್ಕೆಸೆಯಲ್ಪಟ್ಟ ವಿಟ್ಲದ ಯುವಕ ಮೃತ್ಯು

0

ವಿಟ್ಲ: ಕೇರಳದಲ್ಲಿ ರೈಲಿನಿಂದ ಹೊರಕ್ಕೆಸೆಯಲ್ಪಟ್ಟ ವಿಟ್ಲ ಸಮೀಪದ ಕಡಂಬು ನಿವಾಸಿ ಯುವಕರೋರ್ವರು ಮೃತಪಟ್ಟಿದ್ದಾರೆ. ವಿಟ್ಲ ಸಮೀಪದ ಕಡಂಬು ನಿವಾಸಿ ಪಿಲಿವಲಚ್ಚಿಲ್ ನಿವಾಸಿ ಅಶ್ರಫ್ ಉಸ್ಮಾನ್ ರವರ ಪುತ್ರ ಮಹಮ್ಮದ್ ಅನಾಸ್(19 ವ.)ರವರು ಮೃತಪಟ್ಟ ಯುವಕ. ಅನಾಸ್ ಎಸಿ ಮೆಕಾನಿಕ್ ಆಗಿದ್ದು, ಎಸಿ ಟ್ರೈನಿಂಗ್ ಗಾಗಿ ಕೇರಳದ ಕೊಚ್ಚಿಗೆ ತೆರಳಿದ್ದರು.

ತನ್ನ ಕೆಲಸ ಮುಗಿಸಿ, ಊರಿಗೆ ಟ್ರೈನ್ ನಲ್ಲಿ ಹಿಂತಿರುಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊರಗಡೆ ಎಸೆಯಲ್ಪಟ್ಟು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭಿಸಿದೆ.

LEAVE A REPLY

Please enter your comment!
Please enter your name here