ಕನ್ನಡ, ಸಂಸ್ಕೃತ, ಗ್ರೀಕ್ ಜಗತ್ತಿನ ಪರಿಪೂರ್ಣ ಭಾಷೆ; ಪುತ್ತೂರು ತಾಲೂಕು 21ನೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ನಾಡೋಜ ಡಾ. ಮಹೇಶ್ ಜೋಶಿ

0

ಪುತ್ತೂರು: ಕನ್ನಡ, ಸಂಸ್ಕೃತ, ಗ್ರೀಕ್ ಜಗತ್ತಿನ ಪರಿಪೂರ್ಣ ಭಾಷೆಗಳು ಎನ್ನುವುದನ್ನು ಎತ್ನಾಲಾಗ್ ಎನ್ನುವ ಸಂಸ್ಥೆ ಸಾಬೀತುಪಡಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹೇಳಿದರು.

ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಸಿ. ವಿದ್ಯಾಲಯದ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದ ಲಲಿತಾಂಬಿಕಾ ವೇದಿಕೆಯಲ್ಲಿ ಗುರುವಾರ ಪುತ್ತೂರು ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಪೂರ್ಣ ಭಾಷೆ ಎಂದರೆ ಯಾವುದೇ ಲೋಪ ಇರುವುದಿಲ್ಲ ಎಂದರ್ಥ. ಪರಿಪೂರ್ಣ ಭಾಷೆ ಎನ್ನುವುದನ್ನು ಸಾಬೀತು ಪಡಿಸಲು ಎತ್ನಾಲಾಗ್ ಕೆಲ ಮಾನದಂಡಗಳನ್ನು ಹಾಕಿಕೊಂಡಿದೆ. ಅವುಗಳೆಂದರೆ – ಪ್ರಾಚೀನ, ಸ್ವಂತ ಭಾಷೆ, ಸ್ವಂತ ಲಿಪಿ, ಸ್ವಂತ ಅಂಕೆ, ಮಾತನಾಡುವಂತೆ ಬರೆಯುವುದು ಹಾಗೂ ಬರೆಯುವಂತೆ ಮಾತನಾಡುವುದು. ಈ ಮಾನದಂಡಗಳ ಆಧಾರದಲ್ಲಿ ನೋಡಿದಾಗ, ಜಗತ್ತಿನಲ್ಲಿ ಅತೀ ಹೆಚ್ಚು ಬಳಕೆಯ ಇಂಗ್ಲೀಷ್ ಭಾಷೆ ಹೊರಹೋಗುತ್ತದೆ. ಇಂಗ್ಲೀಷ್‌ನಲ್ಲಿ ಮಾತನಾಡುವಂತೆ ಬರೆಯುವುದಿಲ್ಲ, ಬರೆಯುವಂತೆ ಮಾತನಾಡುವುದಿಲ್ಲ. ಇನ್ನು ನಾವು ಬಹಳ ಪ್ರೀತಿಸುವ ಹಿಂದಿ ಭಾಷೆಯೂ ಪಟ್ಟಿಯಿಂದ ಹೊರಹೋಗುತ್ತದೆ. ಕಾರಣ ಹಿಂದಿಯಲ್ಲಿ, ಗಂಡು ಬೆಕ್ಕನ್ನೂ ಸೀಲಿಂಗ ಎಂದೇ ಸಂಬೋಽಸುವುದು. ಆದರೆ ಕನ್ನಡ, ಸಂಸ್ಕೃತ ಹಾಗೂ ಗ್ರೀಕ್ ಭಾಷೆಯಲ್ಲಿ ಒಂದೂ ಲೋಪವನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪರಿಪೂರ್ಣ ಭಾಷೆಯಾಗಿ ಘೋಷಿಸುತ್ತಾರೆ ಎಂದರು.

ಗ್ರಾಮಗಳಿಗೆ ಕಸಾಪ: ತಾಲೂಕು ಸಮ್ಮೇಳನಕ್ಕೆ ರಾಜ್ಯಾಧ್ಯಕ್ಷರು ತೆರಳುವುದೇ ಎಂದೊಬ್ಬರು ಪ್ರಶ್ನಿಸಿದರು ಎಂದು ವಿಷಯ ಪ್ರಸ್ತಾಪಿಸಿದ ಮಹೇಶ್ ಜೋಶಿ, ಕನ್ನಡ ಸಾಹಿತ್ಯ ಪರಿಷತ್‌ನ ಭದ್ರ ಅಡಿಪಾಯ ಇರುವುದೇ ಹಳ್ಳಿಗಳಲ್ಲಿ. ಗ್ರಾಮ, ಹೋಬಳಿ, ತಾಲೂಕುಗಳಲ್ಲಿ ನಡೆಯುವ ಸಾಹಿತ್ಯ ಪರಿಷತ್‌ಗಳು ಹೆಚ್ಚಿನ ಮೌಲ್ಯತೆಯಿಂದ ಕೂಡಿರುತ್ತದೆ. ಆದ್ದರಿಂದ ತಾನು ತಾಲೂಕು ಮಟ್ಟಕ್ಕೆ ಹೋಗಿಯೇ ಹೋಗುತ್ತೇನೆ ಎಂದರಲ್ಲದೆ ಜನರ ಬಳಿಗೆ ಕನ್ನಡ ಸಾಹಿತ್ಯ ಪರಿಷತ್ ಬರಬೇಕು ಎನ್ನುವುದೇ ತನ್ನ ಆಶಯ ಎಂದು ತಿಳಿಸಿದರು.

ಕರಾವಳಿಗೆ ಬರುವುದೇ ಖುಷಿ: ಓದುವಂತೆ ಬರೆಯುವುದು, ಬರೆಯುವಂತೆ ಮಾತನಾಡುವ, ಮಾತನಾಡುವಂತೆ ಅಸ್ಮಿತೆಯನ್ನು ಉಳಿಸಿಕೊಳ್ಳುವ ಜನ ಕರಾವಳಿಗರು. ಆದ್ದರಿಂದ ಇಂತಹ ಊರಿಗೆ ಬರಲು ತನಗೆ ಹೆಮ್ಮೆ, ಖುಷಿ ಇದೆ. ಕರಾವಳಿ ಕನ್ನಡ ಭಾಷೆ ಉಳಿಸಿ ಬೆಳೆಸುವಲ್ಲಿ ವಿಶೇಷ ಕೊಡುಗೆ ನೀಡಿದೆ ಎಂದ ಮಹೇಶ್ ಜೋಶಿ, ನವರಾತ್ರಿ ದಿನದಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದರಿಂದ ಧಾರ್ಮಿಕ ಟಚ್ ಸಿಕ್ಕಿದೆ. 21ನೇಯ ಕನ್ನಡ ಸಾಹಿತ್ಯ ಸಮ್ಮೇಳನ ಇದಾಗಿದ್ದು, 21 ಎನ್ನುವುದಕ್ಕೆ ಧಾರ್ಮಿಕವಾಗಿಯೂ ಬಹಳ ಮಹತ್ವವಿದೆ ಎಂದು ವಿವರಿಸಿದರು.

ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಎಸಿ ಗಿರೀಶ್ ನಂದನ್: ಸ್ಮರಣ ಸಂಚಿಕೆ ‘ಸಿಂಧೂರ’ ಬಿಡುಗಡೆಗೊಳಿಸಿ ಮಾತನಾಡಿದ ಸಹಾಯಕ ಕಮಿಷನರ್ ಗಿರೀಶ್ ನಂದನ್, ಕನ್ನಡಕ್ಕೆ ವೀಶೇಷವಾದ ಭಾಷೆ ಸಂಸ್ಕೃತಿಯಿದೆ. ಮನೆಯಲ್ಲಿ ಮಕ್ಕಳಿಗೆ ಕನ್ನಡ ಭಾಷೆ ಕಲಿಸಿದಲ್ಲಿ, ಮಕ್ಕಳು ವಿಚಾರಗಳನ್ನು ಪರಿಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯ ಎಂದರು.

ವಿದ್ಯಾರ್ಥಿಗಳ ಬಳಿಗೆ ಸಾಹಿತ್ಯ ಪರಿಷತ್: ಡಾ| ಎಂ.ಪಿ. ಶ್ರೀನಾಥ್: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್ ಮಾತನಾಡಿ, ಪುತ್ತೂರಿನ ಸಾಹಿತ್ಯ ರಥವನ್ನು ಅನೇಕ ಮಹನೀಯರು ಮುನ್ನಡೆಸಿದ್ದಾರೆ. ಈ ವರ್ಷ ನಮ್ಮ ಜಿಲ್ಲೆಯ ೯ ತಾಲೂಕುಗಳ ಪೈಕಿ ಪುತ್ತೂರಿನಲ್ಲಿ ಮೊದಲಿಗೆ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ವಿದ್ಯಾರ್ಥಿಗಳು ಇರುವಲ್ಲಿಗೆ ಸಾಹಿತ್ಯ ಪರಿಷತ್ ಹೋಗಬೇಕು. ವಿದ್ಯಾರ್ಥಿಗಳು ಸಾಹಿತ್ಯ ಪರಿಷತ್ ಬಳಿಗೆ ಬರುವುದಲ್ಲ ಎಂದರು.

ಕನ್ನಡ ಭವನ ಮಂಜೂರು ಮಾಡಿ: ಉಮೇಶ್ ನಾಯಕ್ : ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪುತ್ತೂರಿನ ಕಸಾಪ ಘಟಕಕ್ಕೆ 9 ಸೆಂಟ್ಸ್ ಜಾಗ ಮಂಜೂರಾಗಿದ್ದು, ಕನ್ನಡ ಭವನದ ಅಗತ್ಯ ಎದ್ದು ಕಾಣುತ್ತಿದೆ. ಆದ್ದರಿಂದ ಕನ್ನಡ ಭವನವನ್ನು ಮಂಜೂರು ಮಾಡಿಕೊಡುವಂತೆ ರಾಜ್ಯಾಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು.

ಉತ್ತಮ ಸಂದೇಶ: ವಿದ್ಯಾಗೌರಿ: ವಸ್ತುಪ್ರದರ್ಶನ ಉದ್ಘಾಟಿಸಿದ ನಗರಸಭೆ ಉಪಾಧ್ಯಕ್ಷೆ ವಿದ್ಯಾಗೌರಿ ಮಾತನಾಡಿ, ಉತ್ತಮ ಸಂದೇಶವನ್ನು ನೀಡುವ ಕಾಯಕ ಸಾಹಿತ್ಯ ಸಮ್ಮೇಳನದಿಂದ ಆಗಿದೆ ಎಂದರು.

ವಿವೇಕಾನಂದ ಪಪೂ ಕಾಲೇಜಿನ ಕನ್ನಡ ಉಪನ್ಯಾಸಕ ಡಾ| ಮನಮೋಹನ್ ಅವರು ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ಈ ಸಂದರ್ಭದಲ್ಲಿ ನಾಡೋಜ ಡಾ. ಮಹೇಶ್ ಜೋಶಿ ಅವರಿಗೆ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅವರು ಭಗವದ್ಗೀತೆಯ ಕನ್ನಡ ಅನುವಾದ ಪುಸ್ತಕ ಜೀವನ ಧರ್ಮಯೋಗವನ್ನು ನೀಡಿದರು. ಸುಬ್ರಹ್ಮಣ್ಯ ನಟ್ಟೋಜ ಅವರಿಗೆ ಮಹೇಶ್ ಜೋಶಿ ಅವರು ಗೌರವಾರ್ಪಣೆ ಮಾಡಿದರು. ಸಮ್ಮೇಳನಾಧ್ಯಕ್ಷ ಡಾ| ಶ್ರೀಧರ ಎಚ್.ಜಿ. ಹಾಗೂ ಸವಿತಾ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಎಸ್.ಜಿ. ಕೃಷ್ಣ ಅವರು ಸಮ್ಮೇಳನಾಧ್ಯಕ್ಷರಿಗೆ ಧ್ವಜ ಹಸ್ತಾಂತರ ಮಾಡಿದರು. ಕಲಾಪ್ರದರ್ಶನವನ್ನು ಸಾಹಿತಿ ಡಾ| ವಸಂತ ಕುಮಾರ್ ತಾಳ್ತಜೆ ಉದ್ಘಾಟಿಸಿದರು. ಇದೇ ಸಂದರ್ಭ ಪುತ್ತೂರು ಉಮೇಶ್ ನಾಯಕ್ ಅವರು ರಚಿಸಿದ ಆಲ್ಬಂ ಸಾಂಗ್ ಅನ್ನು ಡಾ. ಮಹೇಶ್ ಜೋಶಿ ಅನಾವರಣಗೊಳಿಸಿದರು. ವಿವೇಕಾನಂದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ರಚಿಸಿದ ವಿಕಸನ ಪತ್ರಿಕೆಯನ್ನು ಇದೇ ಸಂದರ್ಭ ಬಿಡುಗಡೆಗೊಳಿಸಿದರು.

ಕ.ಸಾ.ಪ. ಜಿಲ್ಲಾ ಗೌರವ ಕೋಶಾಧ್ಯಕ್ಷ ಬಿ. ಐತಪ್ಪ ನಾಯ್ಕ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್., ತಹಶೀಲ್ದಾರ್ ನಿಸರ್ಗಪ್ರಿಯ, ನಗರಸಭೆ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ಕ.ಸಾಪ. ಜಿಲ್ಲಾ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ., ಪುತ್ತೂರು ಗೌರವ ಕಾರ್ಯದರ್ಶಿ ಡಾ| ಪೀಟರ್ ವಿಲ್ಸನ್ ಪ್ರಭಾಕರ್, ಕ.ಸಾ.ಪ. ತಾಲೂಕು ಅಧ್ಯಕ್ಷರುಗಳಾದ ಡಾ. ಮಂಜುನಾಥ್ ಎಸ್., ವಿಶ್ವನಾಥ್, ಡಿ.ಯದುಪತಿ ಗೌಡ, ವೇಣುಗೋಪಾಲ ಶೆಟ್ಟಿ, ಕ.ಸಾ.ಪ. ಪುತ್ತೂರು ತಾಲೂಕು ಸದಸ್ಯ ಡಾ. ವಿಜಯಕುಮಾರ ಮೊಳೆಯಾರ, ಪತ್ರಕರ್ತ ಯು.ಎಲ್. ಉದಯ ಕುಮಾರ್, ಆಶಾ ಬೆಳ್ಳಾರೆ, ಕುಂಬ್ರ ದುರ್ಗಾಪ್ರಸಾದ್ ರೈ, ಅಬೂಬಕ್ಕರ್ ಆರ್ಲಪದವು, ಬಾಬು ಎಂ., ಸುಬ್ಬಪ್ಪ ಕೈಕಂಬ, ಯಶಸ್ವಿನಿ, ಶಾಂತಾ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು. ಹರಿನಾರಾಯಣ ಭಟ್ ಮಾಡಾವು, ಅಂಬಿಕಾ ವಿದ್ಯಾಲಯದ ನಿರ್ದೇಶಕ ಸುರೇಶ್ ಶೆಟ್ಟಿ, ಸುಜನಿ ಎನ್. ಬೋರ್ಕರ್, ಪ್ರೊ| ವಿ.ಬಿ. ಅರ್ತಿಕಜೆ ಮೊದಲಾದವರು ಅತಿಥಿಗಳನ್ನು ಗೌರವಿಸಿದರು. ಸಭಾಂಗಣದಲ್ಲಿ ಉಪಸ್ಥಿತರಿದ್ದ ಕನ್ನಡದ ಕಟ್ಟಾಳುಗಳಿಗೆ ಕಸಾಪ ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಶಾಲು ಹಾಕಿ ಗೌರವಿಸಿದರು.

ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಸ್ವಾಗತಿಸಿದರು. ಕ.ಸಾ.ಪ. ತಾಲೂಕು ಘಟಕ ಗೌರವ ಕೋಶಾಧ್ಯಕ್ಷ ಡಾ| ಹರ್ಷಕುಮಾರ್ ರೈ ವಂದಿಸಿದರು. ಪುಷ್ಪಲತಾ ಎಂ., ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

ಲಂಚ ಭ್ರಷ್ಟಾಚಾರ ವಿರುದ್ಧದ ಸುದ್ದಿ ಅಭಿಯಾನಕ್ಕೆ ಬೆಂಬಲ

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಪುತ್ತೂರು ಕಸಾಪ ಘಟಕಕ್ಕೆ ಕಂದಾಯ ಇಲಾಖೆ 9 ಸೆಂಟ್ಸ್ ಜಾಗ ಮಂಜೂರು ಮಾಡಿದೆ. ಈ ಜಾಗ ಮಂಜೂರು ಮಾಡಲು ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆ ಲಂಚವನ್ನು ತೆಗೆದುಕೊಂಡಿಲ್ಲ. ಪುತ್ತೂರು ಲಂಚ ಮುಕ್ತವಾಗುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಹೇಳಿ ಜಾಗ ಮಂಜೂರು ಮಾಡಲು ಸಹಕರಿಸಿದ ಶಾಸಕರಿಗೆ, ಅಽಕಾರಿಗಳಿಗೆ ದನ್ಯವಾದ ತಿಳಿಸಿದರು. ಇದೇ ಸಂದರ್ಭ ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ, ಸಮ್ಮೇಳನಾಧ್ಯಕ್ಷ ಡಾ. ಶ್ರೀಧರ್ ಎಚ್.ಜಿ., ಪುತ್ತೂರು ಉಮೇಶ್ ನಾಯಕ್ ಅವರು ಲಂಚ, ಭ್ರಷ್ಟಾಚಾರ ವಿರುದ್ಧದ ಸುದ್ದಿ ಜನಾಂದೋಲನ -ಲಕವನ್ನು ಹಿಡಿದು, ಅಭಿಯಾನಕ್ಕೆ ಬೆಂಬಲ ಸೂಚಿಸಿದರು.

LEAVE A REPLY

Please enter your comment!
Please enter your name here