ಫ್ಲೇವರ‍್ಸ್ ಐಸ್‌ಕ್ರೀಂ ಪಾರ್ಲರ್ ಶುಭಾರಂಭ

0

ಪುತ್ತೂರು: ಪುತ್ತೂರು-ಬಪ್ಪಳಿಗೆ ರಸ್ತೆಯಲ್ಲಿನ ಮಿನಿ ವಿಧಾನಸೌಧದ ಹಿಂಬದಿಯಿರುವ ತಾಲೂಕು ಸರಕಾರಿ ನೌಕರರ ಸಮುದಾಯ ಭವನ ಕಟ್ಟಡದಲ್ಲಿ ಐಡಿಯಲ್ ಐಸ್‌ಕ್ರೀಂ ಉತ್ಪನ್ನವನ್ನೊಳಗೊಂಡಿರುವ ಫ್ಲೇವರ‍್ಸ್ ಐಸ್‌ಕ್ರೀಂ ಪಾರ್ಲರ್ ಸೆ.29 ರಂದು ಶುಭಾರಂಭಗೊಂಡಿದೆ.

ಬಂಟ್ವಾಳ ಪುರಸಭೆಯ ನಿವೃತ್ತ ಮುಖ್ಯಾಧಿಕಾರಿ ಶೀನ ನಾಯ್ಕರವರು ದೀಪ ಬೆಳಗಿಸಿ ನೂತನ ಐಸ್‌ಕ್ರೀಂ ಪಾರ್ಲರ್ ಅನ್ನು ಉದ್ಘಾಟಿಸಿ ಮಾತನಾಡಿ, ಐಡಿಯಲ್ ಐಸ್‌ಕ್ರೀಂ ಎಂದರೆ ಅದು ಬಹಳ ಪ್ರಸಿದ್ದಿ ಪಡೆದಿರುವ ಉತ್ಪನ್ನವಾಗಿದೆ. ಸಂಸ್ಥೆಯು ಉತ್ತುಂಗಕ್ಕೇರಬೇಕಾದರೆ ಅಲ್ಲಿ ಗುಣಮಟ್ಟ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಗ್ರಾಹಕರಿಗೆ ಹಸನ್ಮುಖಿಭಾವದಿಂದ ಉತ್ತಮ ಸೇವೆ ನೀಡಿದಾಗ ಸಂಸ್ಥೆಯು ಪ್ರಗತಿಪಥದಲ್ಲಿ ಸಾಗಬಲ್ಲುದು ಎಂದು ಹೇಳಿ ಶುಭ ಹಾರೈಸಿದರು.

ಸುದಾನ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ವಿಜಯ ಹಾರ್ವಿನ್‌ರವರು ರಿಬ್ಬನ್ ಕತ್ತರಿಸಿ ಸಂಸ್ಥೆಗೆ ಚಾಲನೆ ನೀಡಿ ಮಾತನಾಡಿ, ಸಂಸ್ಥೆಯು ಉದ್ಘಾಟನೆಗೊಂಡಿರುವ ಪ್ರದೇಶವು ಉತ್ತಮವಾಗಿದೆ. ಈ ಭಾಗದಲ್ಲಿ ಇದೀಗ ವಿವಿಧ ಅನೇಕ ಮಳಿಗೆಗಳು, ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಇದು ಪುತ್ತೂರು ಪೇಟೆಗೆ ಅನತಿ ದೂರದಲ್ಲಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಗ್ರಾಹಕರು ಪ್ರಮುಖ ಪಾತ್ರ ವಹಿಸಿದ್ದು, ಗ್ರಾಹಕರಿಂದ ಈ ಸಂಸ್ಥೆಗೆ ನಿರಂತರ ಪ್ರೋತ್ಸಾಹದೊಂದಿಗೆ ಆಶೀರ್ವಾದವಿರಲಿ ಎಂದು ಹೇಳಿ ಶುಭ ಹಾರೈಸಿದರು.

ರೋಟರಿ ಕ್ಲಬ್ ಪುತ್ತೂರು ಎಲೈಟ್ ಅಧ್ಯಕ್ಷ ಡಾ|ಪೀಟರ್ ವಿಲ್ಸನ್ ಪ್ರಭಾಕರ್‌ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಬೊಳ್ವಾರು ಮೆಗಾ ಗ್ಲಾಸ್‌ನ ಆಸ್ಕರ್ ಆನಂದ್, ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ ಭುಜಂಗ ಆಚಾರ್ಯ, ಫ್ಲೇವರ‍್ಸ್ ಐಸ್‌ಕ್ರೀಂ ಪಾರ್ಲರ್ ಮಾಲಕ ಕುಶಾಲಪ್ಪ ನಾಯ್ಕರವರ ಪತ್ನಿ ವೇದಾವತಿ ಕುಶಾಲಪ್ಪ ಸಹಿತ ಹಲವರು ಉಪಸ್ಥಿತರಿದ್ದರು. ಯೂನಿಯನ್ ಬ್ಯಾಂಕ್ ನಿವೃತ್ತ ಉದ್ಯೋಗಿ ಈಶ್ವರ್ ಬೆಡೇಕರ್ ವಂದಿಸಿದರು.

 

ಫ್ಲೇವರ‍್ಸ್ ಐಸ್‌ಕ್ರೀಂ ಪಾರ್ಲರ್ ಮಾಲಕ ಕುಶಾಲಪ್ಪ ನಾಯ್ಕರವರು ಸ್ವಾಗತಿಸಿ, ಮಾತನಾಡಿ, ನಮ್ಮಲ್ಲಿ ಗ್ರಾಹಕರ ಮನಸೂರೈಗೈದ ಐಸ್‌ಕ್ರೀಂ ಎನಿಸಿರುವ ಐಡಿಯಲ್ ಐಸ್‌ಕ್ರೀಂ ಲಭ್ಯವಿದೆ ಮಾತ್ರವಲ್ಲದೆ ವಿವಿಧ ಕಂಪೆನಿಗಳ ಜ್ಯೂಸ್ ಐಟಮ್ಸ್‌ಗಳೂ ಸಿಗುತ್ತದೆ. ಗ್ರಾಹಕರು ಆಗಮಿಸಿ ನಮ್ಮನ್ನು ಪ್ರೋತ್ಸಾಹಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇನೆ.

LEAVE A REPLY

Please enter your comment!
Please enter your name here